Explainer: ಬಿಜೆಪಿಯಲ್ಲಿ ಸೈಡ್‌ಲೈನ್‌ ಆಗಿರುವ ಪ್ರಮುಖ ಹಿಂದೂ ಫೈರ್‌ ಬ್ರ್ಯಾಂಡ್‌ಗಳ ಡೀಟೆಲ್ಸ್‌!

ಕರ್ನಾಟಕ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯು ಇದೀಗ ಬಿಜೆಪಿಯಲ್ಲಿ ಹಿಂದೂ ಹುಲಿಗಳು ಹಾಗೂ ಹಿಂದೂ ಫೈರ್‌ ಬ್ರ್ಯಾಂಡ್‌ಗಳು ಎನಿಸಿಕೊಂಡರವ ಬಗ್ಗೆ ಚರ್ಚೆ ಮಾಡುವುದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಹಿಂದೂ ಹುಲಿ ಎಂದು ಫೇಮಸ್‌ ಆಗಿದ್ದ ಹಾಗೂ ಹಿಂದುತ್ವದ ಮೂಲಕವೇ ಮುನ್ನೆಲೆಗೆ ಬಂದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯಿಂದ ಬರೋಬ್ಬರಿ 6 ವರ್ಷಗಳ ಕಾಲ ಉಚ್ಚಾಟಿತರಾಗಿದ್ದು. ಇದರ ಬೆನ್ನಲ್ಲೇ ಬಿಜೆಪಿಯಿಂದ ಸೈಡ್‌ಲೈನ್‌ ಆಗಿರುವವರು ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕರ್ನಾಟಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯಲ್ಲಿ ಮಿಂಚಿದ್ದ ಹಾಗೂ ಇದೀಗ ತೆರೆಮರೆಗೆ ಸರಿದಿರುವವರ ಬಗ್ಗೆ ಚರ್ಚೆ ನಡೆದಿದೆ.

ಬಿಜೆಪಿಯಲ್ಲಿ ಇದೀಗ ಉಚ್ಚಾಟನೆ ಪರ್ವ ಶುರುವಾಗುವ ಎಲ್ಲಾ ಲಕ್ಷಣಗಳು ಸಹ ಕಾಣಿಸಿಕೊಳ್ಳುತ್ತಿವೆ. ಬಿಜೆಪಿಯಲ್ಲಿ ದಶಕಗಳಿಂದ ಮಿಂಚಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಬಿಜೆಪಿಯಲ್ಲಿ ಮಿಂಚಿ ಸೈಡ್‌ಲೈನ್‌ ಆಗಿರುವವರ ಬಗ್ಗೆ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆದಿವೆ. ಕರ್ನಾಟಕದಲ್ಲಿ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡುವುದರೊಂದಿಗೆ ಮೂರು ಜನ ಪ್ರಭಾವಿ ಹಿಂದೂ ನಾಯಕರು ಬಿಜೆಪಿಯಿಂದ ತೆರೆಮರೆಗೆ ಸರಿದಂತೆ ಆಗಿದೆ. ರಾಜ್ಯ ಬಿಜೆಪಿಯಲ್ಲಿ ಪ್ರಮುಖ ನಾಯಕರು ಸೈಡ್‌ಲೈನ್‌ ಆಗುತ್ತಿದ್ದಾರೆ ಎನ್ನುವ ವಿಷಯ ಚರ್ಚೆಯಾಗುತ್ತಿರುವಾಗಲೇ ಕೇಂದ್ರದಲ್ಲಿ ಯಾವೆಲ್ಲಾ ನಾಯಕರು ಸೈಡ್‌ಲೈನ್‌ ಆಗಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.

Explainer Details of major Hindu firebrands sidelined in BJP

ರಾಜ್ಯದಲ್ಲಿ ಭಾರೀ ಸದ್ದು ಮಾಡಿದವರೇ..

ಕರ್ನಾಟಕದ ಇತಿಹಾಸದಲ್ಲಿ ಮಿಂಚಿದ್ದ ಪ್ರಮುಖ ಹಿಂದೂ ನಾಯಕರು ಇದೀಗ ಬಿಜೆಪಿಯೊಂದಿಗಿನ ಕರುಳಬಳ್ಳಿ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಈ ನಾಯಕರು ಪಕ್ಷವೇ ತಾಯಿ ಹಾಗೂ ಹಿಂದುತ್ವ ವಿಷಯವನ್ನೇ ಮುನ್ನೆಲೆಗೆ ತಂದವರು. ಅದರಲ್ಲಿ * ಅನಂತಕುಮಾರ್ ಹೆಗಡೆ, ಕೆ.ಎಸ್‌ ಈಶ್ವರಪ್ಪ,‌ * ನಳಿನ್ ಕುಮಾರ್‌ ಕಟೀಲ್ ಹಾಗೂ ಇದೀಗ ಬಸನಗೌಡ ಪಾಟೀಲ್ ಯತ್ನಾಳ್. ಹೌದು ಈ ನಾಯಕರು ಇದೀಗ ಬಿಜೆಪಿಯಿಂದ ಹೊರ ನಡೆಯುವಂತೆ ಆಗಿದೆ. ಇವರು ಕರ್ನಾಟಕದಲ್ಲಿ ಉಗ್ರ ಭಾಷಣ ಹಾಗೂ ನೇರ ನುಡಿಗಳಿಂದ ಚರ್ಚೆಯ ಮುನ್ನೆಲೆಯಲ್ಲಿ ಇರುತ್ತಿದ್ದರು.

Take a Poll

ಅನಂತಕುಮಾರ್ ಹೆಗಡೆ ಹಾಗೂ ಕೆ.ಎಸ್‌ ಈಶ್ವರಪ್ಪ ಅವರು ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಚರ್ಚೆಯಾಗುತ್ತಿದ್ದರು. ಕರ್ನಾಟಕ ಬಿಜೆಪಿ ಹಾಗೂ ಕೇಂದ್ರ ಬಿಜೆಪಿ ನಾಯಕರ ಬಗ್ಗೆ ನೇರಾ - ನೇರವಾಗಿ ಮಾತನಾಡುತ್ತಿದ್ದ ಯತ್ನಾಳ್‌ ಮೇಲೂ ಇದೀಗ ಕ್ರಮವಾಗಿದೆ.

Explainer Details of major Hindu firebrands sidelined in BJP

ರಾಜ್ಯ ಮತ್ತು ಕೇಂದ್ರ ಬಿಜೆಪಿಯಿಂದ ಸೈಡ್‌ಲೈನ್‌ ಆಗಿರುವವರು ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಅದರಲ್ಲಿ

* ಎಲ್.ಕೆ. ಅಡ್ವಾಣಿ, * ಮುರಳಿ ಮನೋಹರ ಜೋಶಿ, * ಕೆ.ಎನ್. ಗೋವಿಂದಾಚಾರ್ಯ, * ಉಮಾ ಭಾರತಿ * ಪ್ರವೀಣ್ ಭಾಯಿ ತೊಗಾಡಿಯಾ, * ಪ್ರಮೋದ್ ಮುತಾಲಿಕ್, * ಅನಂತಕುಮಾರ್ ಹೆಗಡೆ, ಕೆ.ಎಸ್‌ ಈಶ್ವರಪ್ಪ,‌ * ನಳಿನ್ ಕುಮಾರ್‌ ಕಟೀಲ್ ಹಾಗೂ ಇದೀಗ * ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯಿಂದ ಸೈಡ್‌ಲೈನ್‌ ಆಗಿರುವ ಪ್ರಮುಖರು ಎಂದು ಚರ್ಚೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+