Lok Sabha Election: ಗುಜರಾತ್‌ನಂತೆ ಕರ್ನಾಟಕದಲ್ಲೂ ಬಿಜೆಪಿ ಬಿರುಗಾಳಿ: ಕಮಲ ಪಡೆ, ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು?
ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಈಗಾಗಲೇ ದೇಶದಲ್ಲಿ ಆರು ಹಂತದ ಲೋಕಸಭಾ ಚುನಾವಣೆಗಳು ಮುಗಿದಿದ್ದು, ಇನ್ನು ಕೇವಲ ಒಂದು ಹಂತದ ಚುನಾವಣೆಗಳು ಮಾತ್ರ ಬಾಕಿ ಇದೆ. ಜೂನ್ 1ರಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಆರಂಭವಾಗಲಿದೆ. ಫಲಿತಾಂಶ ಜೂನ್ 4 ರಂದು ಹೊರ ಬೀಳಲಿದೆ.
ರಾಜಕೀಯ ತಜ್ಞರು ಈ ಚುನಾವಣೆಗಳ ಬಗ್ಗೆ ತಮ್ಮ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಇದೇ ಸಾಲಿಗೆ ತಜ್ಞ ಡಾ. ರಾಮಕೃಷ್ಣನ್ ಟಿಎಸ್ ಸೇರಿದ್ದಾರೆ. ಇವರು ಹೇಳುವ ಪ್ರಕಾರ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಬಿಜೆಪಿ ಬಿರುಗಾಳಿಯನ್ನು ಎಬ್ಬಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ?
ಕರ್ನಾಟಕದ ವಿಚಾರವಾಗಿಯೂ ರಾಮಕೃಷ್ಣನ್ ಟಿಎಸ್ ಭವಿಷ್ಯ ನುಡಿದಿದ್ದಾರೆ. ಈ ರಾಜ್ಯದಲ್ಲಿ ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿದೆ. ಕೈ ಪಕ್ಷಕ್ಕೆ ಈ ರಾಜ್ಯದಲ್ಲಿ ಭಾರೀ ಪೆಟ್ಟು ಬೀಳುವ ಸಾಧ್ಯತೆ ಇದೆ. ತಜ್ಞ ರಾಮಕೃಷ್ಣ ಅವರ ಅಂದಾಜಿನ ಪ್ರಕಾರ ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದ್ದಾರೆ. ಇನ್ನು ಜೆಡಿಎಸ್ ಸಹ ಈ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿಲ್ಲ. ಜೆಡಿಎಸ್ ಈ ಬಾರಿಯ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿದಿವೆ. ಈ ಮೈತ್ರಿ ಕೂಟ 28 ಕ್ಷೇತ್ರಗಳಲ್ಲಿ 24 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ ಎಂದು ರಾಮಕೃಷ್ಣನ್ ತಿಳಿಸಿದ್ದಾರೆ. ಇನ್ನೊಬ್ಬ ತಜ್ಞ ರವಿ ಶ್ರೀವತ್ಸ ಅವರು ಇದರ ವಿರುದ್ಧವಾಗಿ ಭವಿಷ್ಯ ನುಡಿದಿದ್ದಾರೆ.

ರವಿ ಶ್ರೀವತ್ಸ ನುಡಿದಿರುವ ಭವಿಷ್ಯ ಏನು?
ರವಿ ಶ್ರೀವತ್ಸ ಪ್ರಕಾರ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ರಾಜ್ಯದಲ್ಲಿ ಕೇವಲ 7 ಸ್ಥಾನಗಳನ್ನು ಪಡೆಯುತ್ತದೆ, ಆದರೆ ಕಾಂಗ್ರೆಸ್ 21 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ. ರವಿ ಶ್ರೀವಾಸ್ತವ ಅವರು ದೇಶಾದ್ಯಂತ ಸುಮಾರು 543 ಸ್ಥಾನಗಳಲ್ಲಿ ಭವಿಷ್ಯ ಸಹ ಹೇಳಿದ್ದಾರೆ. ಬಿಜೆಪಿ 250 ಸ್ಥಾನಗಳ ಅಂಕಿಅಂಶವನ್ನು ತಲುಪಲು ಸಾಧ್ಯವಿಲ್ಲ ಮತ್ತು ಅದರ ಖಾತೆಯಲ್ಲಿ ಕೇವಲ 240 ಸ್ಥಾನಗಳು ಗೋಚರಿಸುತ್ತವೆ. ಅದೇ ಸಮಯದಲ್ಲಿ, ಅವರು ಎನ್‌ಡಿಎಗೆ 30 ಸ್ಥಾನಗಳನ್ನು ಅಂದಾಜು ಮಾಡಿದ್ದಾರೆ. ಕಾಂಗ್ರೆಸ್ 120 ಸ್ಥಾನಗಳನ್ನು ಮತ್ತು ವಿರೋಧ ಪಕ್ಷದ ಮೈತ್ರಿ ಕೂಟ INDIA 130 ಸ್ಥಾನಗಳನ್ನು ಹೊಂದಲಿದೆ ಎಂದು ಭವಿಷ್ಯ ನುಡಿದಿದೆ.
ತಜ್ಞ ರಾಮಕೃಷ್ಣನ್ ಟಿಎಸ್ ಪ್ರಕಾರ, ಈ ಬಾರಿ ಬಿಜೆಪಿಯ ಸ್ಥಾನಗಳ ಸಂಖ್ಯೆ 2019 ಕ್ಕಿಂತ ಹೆಚ್ಚಲಿದೆ. ಅವರ ಅಂದಾಜಿನ ಪ್ರಕಾರ ಎನ್‌ಡಿಎ ಮೈತ್ರಿಕೂಟವು 359 ಅಂಕಿಗಳೊಂದಿಗೆ ಸರ್ಕಾರ ರಚಿಸುತ್ತಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ಗೆ 49 ಸ್ಥಾನಗಳು ಮತ್ತು ಭಾರತ ಮೈತ್ರಿಕೂಟಕ್ಕೆ 49 ಸ್ಥಾನಗಳು ಲಭಿಸಲಿವೆ ಎಂದು ಭವಿಷ್ಯ ನುಡಿದಿದ್ದಾರೆ.
2019 ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಐತಿಹಾಸಿಕ ಸಾಧನೆಯನ್ನು ಮಾಡಿತ್ತು. 28 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಹಿಗ್ಗಿತ್ತು. ಈ ಬಾರಿ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಈ ಸಾಧನೆಯನ್ನು ಪುನಾರಾವರ್ತಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಜನ ಯಾರಿಗೆ ಕೈ ಹಿಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications