Lok Sabha News18 Exit Poll Result: ಕರ್ನಾಟಕದಲ್ಲಿ ಬಿಜೆಪಿಗೆ 20ಕ್ಕೂ ಹೆಚ್ಚು ಸ್ಥಾನ: ನರೇಂದ್ರ ಮೋದಿ ಮತ್ತೊಮ್ಮೆ ಕಿಂಗ್!
ಭಾರತ ಪ್ರಜಾಪ್ರಭುತ್ವದ ದೇಗುಲ, ಭಾರತವೇ ಈ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭರ್ಜರಿ ಹ್ಯಾಟ್ರಿಕ್ ಬಾರಿಸಿ, ಕೇಂದ್ರದ ಅಧಿಕಾರ ಹಿಡಿಯೋದಕ್ಕೆ ಎನ್‌ಡಿಎ ಒಕ್ಕೂಟ ಸಜ್ಜಾಗಿದೆ. ಈ ಬಾರಿ ಕನಿಷ್ಠ 400 ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಈ ವಿಚಾರದಲ್ಲಿ ಕರ್ನಾಟಕದ ಪಾತ್ರ ಕೂಡ ಮುಖ್ಯವಾಗಿತ್ತು. ಹಾಗಾದರೆ ಈ ಬಾರಿ ಬಿಜೆಪಿ ಕರ್ನಾಟಕದಲ್ಲಿ ಗೆಲ್ಲಲ್ಲಿರುವ ಸ್ಥಾನಗಳು ಎಷ್ಟು? ಮುಂದೆ ಓದಿ.
2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಿತು. ಹೀಗೆ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಸಲಾಗಿತ್ತು. ಇಂದು ಅಂತಿಮ ಹಂತದ ಮತದಾನ ಮುಕ್ತಾಯವಾಗಿದ್ದು, ಚುನಾವಣೋತ್ತರ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ 'ನ್ಯೂಸ್18 ಪೋಲ್ ಹಬ್' ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿಗೆ ಪ್ರಚಂಡ ಗೆಲುವು ಪಕ್ಕಾ ಆಗಿದೆ. ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆದ್ದು ಬೀಗಲಿದೆ ಎಂದಿದೆ 'ನ್ಯೂಸ್18 ಪೋಲ್ ಹಬ್' ಎಕ್ಸಿಟ್ ಪೋಲ್ ಫಲಿತಾಂಶ.

ಕರ್ನಾಟಕದಲ್ಲಿ ಬಿಜೆಪಿ ಪಕ್ಷವೇ ಕಿಂಗ್!
ಈ ಬಾರಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಭರ್ಜರಿ ರಣತಂತ್ರ ರೂಪಿಸಿದ್ದ ಬಿಜೆಪಿ ವರಿಷ್ಠರು, ಇದಕ್ಕಾಗಿ ಬೇಕಿದ್ದ ಎಲ್ಲಾ ರೀತಿಯ ತಯಾರಿಗಳನ್ನು ಕೂಡ ನಡೆಸಿದ್ರು. ಬಿಜೆಪಿ ಹೈಕಮಾಂಡ್ ಮತ್ತು ಬಿ.ವೈ. ವಿಜಯೇಂದ್ರ ಅವರ ತಂತ್ರಗಾರಿಕೆ ಈಗ ಫಲ ನೀಡಿ ಬಿಜೆಪಿ ಪಕ್ಷದ ಪ್ರಚಂಡ ಗೆಲುವು ಪಕ್ಕಾ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ & ಜೆಡಿಎಸ್ 23 ರಿಂದ 26 ಸ್ಥಾನ ಗೆಲ್ಲಬಹುದು ಎನ್ನಲಾಗಿದ್ದು, ಅದೇ ರೀತಿ ಕಾಂಗ್ರೆಸ್ ಕರ್ನಾಟಕದಲ್ಲಿ 3 ರಿಂದ 7 ಸ್ಥಾನ ಗೆಲ್ಲಬಹುದು ಎನ್ನುತ್ತಿದೆ 'ನ್ಯೂಸ್18 ಪೋಲ್ ಹಬ್' ಸಮೀಕ್ಷೆ.












Click it and Unblock the Notifications