ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೈಟ್ ಕರ್ಫ್ಯೂ: ಪಾರ್ಟಿ ಪ್ರಿಯರಿಗೆ ಅಘಾತ ಕೊಟ್ಟ ಅಬಕಾರಿ ಸಚಿವ ಎಚ್. ನಾಗೇಶ್!

|
Google Oneindia Kannada News

ಬೆಂಗಳೂರು, ಡಿ. 23: ಇಂಗ್ಲೆಂಡ್‌ನಲ್ಲಿ ಕೊರೊನಾ ವೈರಸ್ ಹೊಸ ಪ್ರಬೇಧ ಕಂಡು ಬಂದಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯಾದ್ಯಂತ ಮತ್ತೊಮ್ಮೆ ನೈಟ್ ಕರ್ಫ್ಯೂ ಹೇರಲಾಗಿದೆ. ನೈಟ್ ಕರ್ಫ್ಯೂ ಜಾರಿಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ಮಾಡಿದ್ದರೆ. ಇದರಿಂದಾಗಿ ಭರ್ಜರಿ ಹೊಸವರ್ಷಾಚರಣೆ ಮಾಡುವ ಉಮೇದಿನಲ್ಲಿದ್ದ ಪಾರ್ಟಿ ಪ್ರೀಯರಿಗೆ ನಿರಾಸೆಯಂತೂ ಆಗಿದೆ. ಇದೇ ಸಂದರ್ಭದಲ್ಲಿ ಮದ್ಯ ಪ್ರಿಯರಿಗೆ ಮತ್ತೊಂದು ಅಘಾತವನ್ನು ಅಬಕಾರಿ ಸಚಿವ ಎಚ್. ನಾಗೇಶ್ ಅವರು ಕೊಟ್ಟಿದ್ದಾರೆ.

ಜೊತೆಗೆ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಆಚರಣೆಗೆ ನೈಟ್ ಕರ್ಫ್ಯೂನಿಂದಾಗಿ ಕರಿನೆರಳು ಬಿದ್ದಿದೆ. ಕೊರೊನಾ ರೂಪಾಂತರ ವೈರಾಣು ಭೀತಿಯಿಂದ‌ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 23ರ ರಾತ್ರಿಯಿಂದ ಜನವರಿ 2 ರವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಮಾಡಿದ್ದಾರೆ. ಅಷ್ಟೂ ದಿನಗಳ ಕಾಲ ಪ್ರತಿದಿನ ರಾತ್ರಿ 10 ರಿಂದ ಬೆಳಗಿನ 6 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸಿಎಂ ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ರಾತ್ರಿ ಕರ್ಫ್ಯೂ: ಏನು ಇರುತ್ತದೆ? ಏನು ಇರುವುದಿಲ್ಲ?ರಾಜ್ಯದಲ್ಲಿ ರಾತ್ರಿ ಕರ್ಫ್ಯೂ: ಏನು ಇರುತ್ತದೆ? ಏನು ಇರುವುದಿಲ್ಲ?

ಇದೇ ಸಂದರ್ಭದಲ್ಲಿ ಅಬಕಾರಿ ಸಚಿವ ಎಚ್. ನಾಗೇಶ್ ಅವರು ಮದ್ಯ ಪ್ರೀಯರಿಗೆ ನಿರಾಸೆಯಾಗುವಂತಹ ಮತ್ತೊಂದು ಆದೇಶ ಮಾಡಿದ್ದಾರೆ. ಇನ್ನೇನೂ ಕೊರೊನಾ ವೈರಸ್ ಆತಂಕ ಕಡಿಮೆಯಾಯಿತು, ಹೊಸ ವರ್ಷಕ್ಕೆ ಭರ್ಜರಿ ಮಾರ್ಟಿ ಮಾಡಬಹುದು ಅಂದುಕೊಂಡಿದ್ದವರಿಗೆ ಅಘಾತವಾಗಿದೆ.

ಮದ್ಯದ ಅಂಗಡಿಗಳು ಬಂದ್

ಮದ್ಯದ ಅಂಗಡಿಗಳು ಬಂದ್

ಈ ಬಗ್ಗೆ ಕೋಲಾರದಲ್ಲಿ ಮಾತನಾಡಿರುವ ಅಬಕಾರಿ ಸಚಿವ ಎಚ್. ನಾಗೇಶ್ ಅವರು, ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಹಿನ್ನಲೆಯಲ್ಲಿ ರಾತ್ರಿ 10 ಗಂಟೆಯ ನಂತರ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಡೀ ರಾಜ್ಯಾದ್ಯಂತ 10 ಗಂಟೆಗೆ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ಜೊತೆಗೆ ಈ ಮಾರ್ಗಸೂಚಿಯನ್ನು ಪಾಲಿಸದಿದ್ದಲ್ಲಿ ಲಿಕ್ಕರ್ ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆಯನ್ನು ನಾಗೇಶ್ ಅವರು ಕೊಟ್ಟಿದ್ದಾರೆ.

ಪಬ್-ಕ್ಲಬ್ ಎಲ್ಲವೂ ಬಂದ್

ಪಬ್-ಕ್ಲಬ್ ಎಲ್ಲವೂ ಬಂದ್

ರಾಜ್ಯದಲ್ಲಿ ಬಾರ್, ಪಬ್, ಕ್ಲಬ್, ರೆಸ್ಟೋರೆಂಟ್ ಎಲ್ಲವೂ ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಬಂದ್ ಆಗಲಿವೆ. ಸರ್ಕಾರಕ್ಕೆ ಮದ್ಯದದಿಂದ ಬರುವ ಆದಾಯಕ್ಕಿಂತ ಜನರ ಜೀವ ರಕ್ಷಣೆ ಸರ್ಕಾರಕ್ಕೆ ಮುಖ್ಯವಾಗಿದೆ. ಹೀಗಾಗಿ ಮದ್ಯದ ಅಂಗಡಿಗಳನ್ನು ಕಟ್ಟುನಿಟ್ಟಾಗಿ ಬಂದ್ ಮಾಡಲಾಗುವುದು ಎಂದು ಸಚಿವ ನಾಗೇಶ್ ಹೇಳಿದ್ದಾರೆ.

ಲೈಸನ್ಸ್ ರದ್ದು ಮಾಡುವ ಎಚ್ಚರಿಕೆ

ಲೈಸನ್ಸ್ ರದ್ದು ಮಾಡುವ ಎಚ್ಚರಿಕೆ

ಹೊಸ ಮಾರ್ಗಸೂಚಿ ಪಾಲನೆಯಲ್ಲಿ ಅಬಕಾರಿ ಇಲಾಖೆಯ ಪಾತ್ರ ಬಹು ಮುಖ್ಯವಾಗಿದೆ. ಎಲ್ಲಾ ಬಾರ್ ಲೈಸನ್ಸ್ ಮಾಲೀಕರಿಗೆ ಇಮೇಲ್ ಮೂಲಕ ಹೊಸ ಮಾರ್ಗಸೂಚಿ ಕಳಿಸಿದ್ದೇವೆ ಎಂದು ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಎಚ್ ನಾಗೇಶ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅಬಕಾರಿ ಆದೇಶ ಉಲ್ಲಂಘಿಸಿ ಎಣ್ಣೆ ಅಂಗಡಿ ಓಪನ್ ಮಾಡಿದರೆ ಕಠಿಣಕ್ರಮ ಕಟ್ಟಿಟ್ಟ ಬುತ್ತಿ ಎಂದು ಇಲಾಖೆ ಸೂಚಿಸಿದೆ.

Recommended Video

ಮೈಸೂರು: ಅಪಾಯಕ್ಕೆ ಆಹ್ವಾನಿಸುತ್ತಿದೆ ವರುಣಾ ನಾಲೆ ಮೇಲ್ಸೇತುವೆ..! | Oneindia Kannada
ಕಳೆಗುಂದಿದ ಹೊಸ ವರ್ಷಚಾರಣೆ

ಕಳೆಗುಂದಿದ ಹೊಸ ವರ್ಷಚಾರಣೆ

ಕೊರೊನಾ ವೈರಸ್ ಕಮ್ಮಿಯಾಗಿದೆ. ಇನ್ನೇನೂ ಹೊಸ ವರ್ಷಾಚರಣೆಯನ್ನು ರಂಗೇರುವಂತೆ ಮಾಡಬೇಕು ಎಂದುಕೊಂಡಿದ್ದ ಪಾರ್ಟಿ ಪ್ರೀಯರಿಗೆ ರೂಪಾಂತರಿ ವೈರಸ್ ನಿರಾಸೆ ತಂದಿದೆ. ಇಡೀ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ತಡರಾತ್ರಿ ಪಾರ್ಟಿಗಳಿಗೆ ಅವಕಾಶವಿರುವುದಿಲ್ಲ. ಜೊತೆಗೆ ಬೆಂಗಳೂರಿನಲ್ಲಿ ನೈಟ್‌ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹಾನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸೂಚಿಸಿದ್ದಾರೆ. ಹೀಗಾಗಿನ ಪಾರ್ಟಿ ಪ್ರೀಯರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮನೆಯಲ್ಲಿ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

English summary
Excise Minister H Nagesh said liquor sales would be stopped after 10 pm on a night curfew background. Thus, liquor stores will be bundled across the entire state at 10 pm. Minister Nagesh had issued a warning to cancel the Liquor License if it did not comply. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X