ಬಾಗಲಕೋಟೆಯಲ್ಲಿ ಮಾಜಿ ಸೈನಿಕನಿಗೆ ಪೊಲೀಸ್ ಕಾಪಾಳಮೋಕ್ಷ

Posted By:
Subscribe to Oneindia Kannada

ಬಾಗಲುಕೋಟೆ, ಡಿಸೆಂಬರ್ 9: ಬಾಗಲುಕೋಟೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ಮುಂದೆ ಕ್ಯೂನಲ್ಲಿ ನಿಂತಿದ್ದ 55 ವರ್ಷದ ಮಾಜಿ ಸೈನಿಕನ ಮೇಲೆ ಪೊಲೀಸ್ ಪೇದೆ ಕಪಾಳ ಮೋಕ್ಷ ಮಾಡಿದ ಘಟನೆ ಜರುಗಿದೆ. ಪೊಲೀಸ್ ಪೇದೆಯನ್ನು ಅಮಾನತು ಗೊಳಿಸಲಾಗಿದೆ.

35 ವರ್ಷ ವಯಸ್ಸಿನ ಪೊಲೀಸ್ ಪೇದೆ ದೇವರಾಜು ಸಿಂಡಿಕೇಟ್ ಬ್ಯಾಂಕಿನ ಎಟಿಎಂನ ಸೆಕ್ಯುರಿಟಿಯಾಗಿದ್ದು, ಗುರುವಾರ ಬ್ಯಾಂಕು ಮತ್ತು ಎಟಿಎಮ್ ಮುಂದೆ ಹೆಚ್ಚು ಜನ ಸಂದಣಿ ಏರ್ಪಟ್ಟಿದ್ದು, ಪೇದೆ ಮಾಜಿ ಸೈನಿಕನಿಗೆ ಕಪಾಳ ಮೋಕ್ಷ ಮಾಡಿದ್ದ. ಇದಕ್ಕೆ ಸಂಬಂಧಿಸಿದ ಚಿತ್ರದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

bank

ಸರತಿ ಸಾಲಿನಲ್ಲಿ ನಿವೃತ್ತ ಮಾಜಿ ಸೈನಿಕ ನಿಂತಿದ್ದರು. ಈ ವೇಳೆ ಕ್ಯೂನಲ್ಲಿ ನೂಕುನುಗ್ಗಲು ಉಂಟಾಗಿ ಬ್ಯಾಂಕಿನಲ್ಲಿ ಹಾಕಿದ್ದ ಬಾಗಲು ತೆರೆದು ಕೊಳ್ಳುತ್ತಿದ್ದಂತೆ ಒಳಗಿನಿಂದ ಬಂದ ಪೇದೆ ದೇವರಾಜ್ ಒಮ್ಮೆಲೆ ಭಾವಾವಿಷ್ಟನಾಗಿ ಉದ್ರೋಕಗೊಂಡು ಸಾಲಿನಿಂತಿದ್ದ ಮಾಜಿ ಸೈನಿಕನನ್ನು ಯದ್ವಾತದ್ವಾ ಥಳಿಸಿದ್ದಾನೆ, ಕಪಾಳ ಮೋಕ್ಷ ಮಾಡಿದ್ದಾನೆ.

ನಂತರ ಮಾತಿಗೆ ಮಾತು ಬೆಳೆದು ಸುತ್ತ ಮುತ್ತಲಿದ್ದ ಜನರು ಪೇದೆಯನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿದ್ದು ವಿಷಯ ತಿಳಿದ ಪೊಲೀಸ್ ಇಲಾಖೆ ಪೇದೆ ದೇವರಾಜು ಅನ್ನು ಅಮಾನತು ಗೊಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Karnataka police suspended a constable for assaulting an ex-army man in Bagalkot. The video of the constable assaulting the 55 year old retired army personnel went viral on Thursday.
Please Wait while comments are loading...