ಬರುತ್ತಿದೆ ಮಾಜಿ ಪ್ರಧಾನಿ ದೇವೇಗೌಡರ ಆತ್ಮಚರಿತ್ರೆ

Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ ದೇವೇಗೌಡರ ಆತ್ಮಚರಿತ್ರೆ ಸಿದ್ದವಾಗುತ್ತಿದೆ. ಅಂದುಕೊಂಡಂತೆ ನಡೆದರೆ ಮೇ ಅಂತ್ಯದೊಳಗೆ ದೇವೇಗೌಡರ ಆತ್ಮಚರಿತ್ರೆ ಮಾರುಕಟ್ಟೆಗೆ ಬರಲಿದೆ.

ಕಳೆದೆರಡು ವರ್ಷಗಳಿಂದ ನಿರಂತರವಾಗಿ ದೇವೇಗೌಡರು ಆತ್ಮಚರಿತ್ರೆ ಬರೆಯುವಲ್ಲಿ ನಿರತರಾಗಿದ್ದಾರೆ. ಸದ್ಯ ಆತ್ಮಚರಿತ್ರೆ ಅಂತಿಮ ಹಂತದಲ್ಲಿದ್ದು, ಮೈಸೂರಿನಲ್ಲೇ ಮೊಕ್ಕಾಂ ಹೂಡಿ ದೇವೇಗೌಡರು ತಮ್ಮ ಅಟೋಬಯೋಗ್ರಫಿಗೆ ಅಂತಿಮ ರೂಪ ನೀಡುವಲ್ಲಿ ನಿರತರಾಗಿದ್ದಾರೆ.['ಡಿಜಿಟಲ್ ಪಥ'ದಲ್ಲಿ 2018ರ ಚುನಾವಣಾ ರೇಸಿಗಿಳಿದ ಎಚ್‌ಡಿಕೆ]

Ex PM Deve Gowda’s Autobiography is set to launch at the end of May

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಎಸ್ ರಂಗಪ್ಪ ನಿವಾಸದಲ್ಲಿ ಆತ್ಮಚರಿತ್ರೆಯ ಕೆಲಸಗಳು ನಡೆಯುತ್ತಿವೆ. ಇವರ ಜತೆ ಸಾಹಿತಿ, ಪ್ರಾಧ್ಯಾಪಕರೂ ಆದ ಸಿ. ನಾಗಣ್ಣ ಕೂಡಾ ಕೈ ಜೋಡಿಸಿದ್ದಾರೆ.[ಅವಧಿಗೆ ಮುನ್ನ ಕರ್ನಾಟಕದಲ್ಲಿ ಚುನಾವಣೆ : ಕಾಂಗ್ರೆಸ್ ಮಾಸ್ಟರ್ ಪ್ಲಾನ್]

ದೇಶದಲ್ಲಿ ಹಲವು ರಾಜಕಾರಣಿಗಳ ಆತ್ಮಚರಿತ್ರೆಗಳು ಬಂದು ಹೋಗಿವೆ. ಆದರೆ ಕನ್ನಡಿಗರಾಗಿ ದೇಶದ ಪ್ರಧಾನಿ ಹುದ್ದೆಗೇರಿದ ಏಕೈಕ ಚತುರ ರಾಜಕಾರಣಿ ದೇವೇಗೌಡರ ಆತ್ಮಚರಿತ್ರೆ ಕುತೂಹಲ ಹುಟ್ಟಿಸಿದೆ. ಮೇ ಅಂತ್ಯದಲ್ಲಿ ಇದು ಬಿಡುಗಡೆಯಾಗಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former prime minister and JDS national president HD Deve Gowda is busy with writing his autobiography. As per the plan it may came to market at the end of May.
Please Wait while comments are loading...