ಮೇಟಿಗೆ ಅನ್ಯಾಯ ಮಾಡಿಲ್ಲ: ವಿಜಯಾನಂದ ಕಾಶಪ್ಪನವರ್​​

By: ಬಾಗಲಕೋಟೆ ಪ್ರತಿನಿಧಿ
Subscribe to Oneindia Kannada

ಬಾಗಲಕೋಟೆ, ಅಕ್ಟೋಬರ್ 10: ಬಾಗಲಕೋಟೆ ಶಾಸಕ ಎಚ್. ವೈ. ಮೇಟಿಯವರ 72ನೇ ಜನ್ಮ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕ್ಷೇತ್ರದ ರಾಮಪುರ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಭವ್ಯ ವೇದಿಕೆಯ ಅಭಿಮಾನಿಗಳು ತಂದ ಬೃಹತ್ ಕೇಕ್ ಕಟ್ ಮಾಡುವ ಮೂಲಕ ಹೆಚ್ ವೈ ಮೇಟಿ ಹುಟ್ಟುಹಬ್ಬ ಆಚರಿಸಿಕೊಂಡರು.

ವಿಡಿಯೋ ಸಿಡಿ ಪ್ರಕರಣ : ಎಚ್ ವೈ ಮೇಟಿಗೆ ಕ್ಲೀನ್ ಚಿಟ್

ಈ ವೇಳೆ ವಿಜಯಾನಂದ ಕಾಶಪ್ಪನವರ್​​ ಮಾತನಾಡಿ, "ಮೇಟಿಯವರು ನನ್ನ ತಂದೆಯ ಸಮಾನ. ಅವರಿಗೆ ಯಾವತ್ತೂ ನಾನು ಅನ್ಯಾಯ ಮಾಡಿಲ್ಲ. ನನ್ನ ತಾಯಿಯ ಮೇಲೆ ಮತ್ತು ಕೂಡಲಸಂಗಮನಾಥನ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ" ಎಂದರು.

EX Minister HY Meti's 72nd Grand birthday celebration in Bagalakot

ಮೇಟಿಯವರು ಮತ್ತು ಕಾಶಪ್ಪನವರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಸಮರ್ಥನೆ ಮಾಡಿಕೊಂಡರು. ಯಾರೋ ಕೆಲವರು ಬ್ರಿಟಿಷರ್​ ವಂಶದವರು ನಮ್ಮಲ್ಲಿದ್ದಾರೆ. ನಮ್ಮಬ್ಬರಿಗೆ ಭಿನ್ನಾಬಿಪ್ರಾಯ ಬರುವಂತೆ ನೋಡಿಕೊಳ್ತಿದ್ದಾರೆ ಅಂತ ಆರೋಪಿಸಿದರು.

ಮೊದಲ ಬಾರಿಗೆ ಇಷ್ಟೊಂದು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಾಗುತ್ತಿದ್ದು,ರಾಸಲೀಲೆ ಪ್ರಕರಣದ ನಂತರವೂ ತಮ್ಮ ವರ್ಚಸ್ಸು ಕುಂದಿಲ್ಲ ಎಂದು ತೋರಿಸುವ ಪ್ರಯತ್ನ ಮೇಟಿ ಮಾಡಿದ್ದಾರೆ.

ಅತಿ ಹೆಚ್ಚು ಜನರನ್ನು ಸೇರಿಸಿ ಸಿಎಮ್,ಕೆಪಿಸಿಸಿ ಮತ್ತು ಹೈಕಮಾಂಡ್ ಗೆ ತಮ್ಮ ಪ್ರಭಾವ ತೋರ್ಪಡಿಸಿ ೨೦೧೮ರ ಕಾಂಗ್ರೆಸ್ ಟಿಕೆಟ್ ಪುನಃ ಪಡೆಯುವ ಕಾರ್ಯಕ್ರಮದ ಮೂಲಕ ವ್ಯಕ್ತವಾಗಿದೆ.

ಸಮಾವೇಶದಲ್ಲಿ ಹೆಚ್ ವೈ ಮೇಟಿ ಅಭಿಮಾನಿಗಳು ಮಾಲಾರ್ಪಣೆ ಮಾಡಲು ಶುಭಾಶಯ ಕೋರಲು ಮುಂದಾದ ವೇಳೆ ನೂಕುನುಗ್ಗಲು ಉಂಟಾಗಿರುವುದು ಕೂಡ ಕಂಡು ಬಂತು.

ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್ ಆರ್ ಪಾಟಿಲ್, ಬಾಗಲಕೋಟೆ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ,ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಪ್ರಮುಖ ಗಣ್ಯರು ಹಾಜರಾಗಿದ್ದರು.

ಕಾರ್ಯಕ್ರಮ ಜನ್ಮ ದಿನಾಚರಣೆ ಆದರೂ ಪಕ್ಕಾ ರಾಜಕೀಯ ಸಮಾವೇಶ ಎಂಬಂತೆ ಬಿಂಬಿತವಾಗಿತ್ತು. ಕ್ಷೆತ್ರದ ವಿವಿಧ ಹಳ್ಳಿಗಳಿಂದ ಮೇಟಿ ಅಭಿಮಾನಿಗಳು, ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
former Minister, H Y Meti, is trying to make a comeback with the Congress leadership reportedly promising him a party ticket in the coming elections.The Congress leader, who lay low all through the year after the scandal broke out, splurged crores on a grand 72 birthday celebration on Monday in Bagalakot.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ