• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದಂತೆ ನಾವು ಮಾಡುತ್ತೇವೆ: ಈಶ್ವರಪ್ಪ

|

ಬೆಂಗಳೂರು, ಮೇ 05: ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರಿಗೆ ಯಾವಾಗಲೂ ಲೇವಡಿ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಅವಕಾಶ ಸಿಕ್ಕಾಗೆಲ್ಲ ಸಚಿವ ಕೆ.ಎಸ್. ಈಶ್ವರಪ್ಪ ಅವರು ಕೂಡ ಸಿದ್ದರಾಮಮ್ಮ ಮೇಲೆ ತಮ್ಮ ಪ್ರೀತಿಯನ್ನು ತೋರಿಸುತ್ತಲೇ ಇರುತ್ತಾರೆ.

ಇದೀಗ ಮತ್ತೊಮ್ಮೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಅಕ್ಕರೆ ತೋರಿಸಿರುವ ಈಶ್ವರಪ್ಪ ಅವರು ನಾವು ಸಿದ್ದರಾಮಯ್ಯ ಅವರು ಹೇಳಿದಂತೆ ಮಾಡುತ್ತೇವೆ ಎಂದಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಅವರು ಹೇಳಿದಂತೆ ಈಶ್ವರಪ್ಪ ಅವರು ಕೇಳಲು ಸಿದ್ದರಾಗಿದ್ದಾರೆಯ? ಖಂಡಿತವಾಗಿಯೂ ಇಲ್ಲ.

ಬಯಲಾಯ್ತು ಭಾರಿ ಮೊತ್ತದ ಮದ್ಯದ ಬಿಲ್‌ಗಳ ರಹಸ್ಯ, ಶುರುವಾಯ್ತು ಸಂಕಷ್ಟ!

ಮದ್ಯ ಮಾರಾಟದ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ. ಮದ್ಯ ಮಾರಾಟ ಆತುರದ ನಿರ್ಧಾರ ಎಂದು ಟ್ವೀಮದ್ಯ ಮಾರಾಟದ ವಿಚಾರವಾಗಿಟ್ ಮಾಡಿದ್ದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ. ಮದ್ಯ ಮಾರಾಟ ಮಾಡಿ ಎಂದು ಸಿದ್ದರಾಮಯ್ಯ ಅವರೆ ಸಲಹೆ ನೀಡಿದ್ದರು.

ಈಗ ಪೂರ್ವ ತಯಾರಿ ಮಾಡಿಲ್ಲ ಎನ್ನುತ್ತಿದ್ದಾರೆ. ಪೂರ್ವ ತಯಾರಿ ಎಂದರೆ ಏನು? ಕುಡುಕರ ಬಾಯಿಗೆ ಬೀಗ ಹಾಕಿ, ಮದ್ಯವನ್ನು ಅವರ ಬಾಯಿಗೆ ಹಾಕಬೇಕಿತ್ತಾ? ನನಗೆ ಸಿದ್ದರಾಮಯ್ಯರ ಹೇಳಿಕೆ ಅರ್ಥ ಆಗ್ತಿಲ್ಲ. ಕುಡುಕರಿಗೆ ಶಿಸ್ತು ಪಾಲನೆ ಮಾಡಿ ಅಂದರೆ ಮಾಡುತ್ತಾರೆಯೆ? ಕುಡುಕರು ಹೇಗೆ ಇರಬೇಕು ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಒಂದು ಸಮಿತಿ ಮಾಡಿದರೆ ಒಳ್ಳೆಯದು. ಸಿದ್ದರಾಮಯ್ಯರು ಹೇಳಲಿ ಅವರು ಹೇಳಿದಂತೆ ನಾವು ಮಾಡುತ್ತೇವೆ ಎಂದ ಈಶ್ವರಪ್ಪ ಅವರೂ ಲೇವಡಿ ಮಾಡಿದ್ದಾರೆ.

English summary
Minister Eshwarappa has criticized opposition leader Siddaramaiah's dueling attitude towards liquor sales.Ishwarappa also teased that "Siddaramaiah should say we will do as he says'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X