ಲಿಂಗಾಯತ ಪ್ರತ್ಯೇಕ ಧರ್ಮ: ಕಾಂಗ್ರೆಸ್‌ನಲ್ಲೇ ಪರ, ವಿರೋಧ ಬಣ
ಬೆಂಗಳೂರು, ಮಾರ್ಚ್ 09: ಲಿಂಗಾಯತ ಪ್ರತ್ಯೇಕ ಧರ್ಮ ಮತ್ತು ಅಲ್ಪಸಂಖ್ಯ ಸ್ಥಾನಮಾನ ನೀಡುವಂತೆ ನ್ಯಾ.ನಾಗಮೋಹನ್ ದಾಸ್ ಸಲ್ಲಿಸುರವ ವರದಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಮೂಡಿಸಿದೆ ಎನ್ನಲಾಗಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೇ ವಿಷಯವಾಗಿ ಸುಮಾರು ಮೂರು ಗಂಟೆ ಕಾಲ ಚರ್ಚೆ ನಡೆದರೂ ಒಮ್ಮತ ಮೂಡದ ಕಾರಣ ತೀರ್ಪು ಪ್ರಕಟಿಸದೆ ಮುಖ್ಯಮಂತ್ರಿ ಗಳು ಕಾಯ್ದಿಟ್ಟರು.
ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಕೇಂದ್ರದ ಶಿಫಾರಸ್ಸಿಗೆ ಕಳಿಸಬೇಕು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ಗಣಿ ಸಚಿವ ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ ಅವರುಗಳು ಒತ್ತಾಯಿಸಿದರೆ. ವರದಿಯನ್ನು ಶಿಫಾರಸ್ಸಿಗೆ ಕಳುಹಿಸಬಾರದೆಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ತೋಟಗಾರಿಕಾ ಸಚಿವ ಸೋಮಶೇಖರ್ ಅವರುಗಳು ಒತ್ತಾಯಿಸಿದರು. ಶಿಫಾರಸ್ಸಿಗೆ ಕಳುಹಿಸಿದರೆ ರಾಜಿನಾಮೆ ನಿಡುವುದಾಗಿ ಬೆದರಿಕೆ ಹಾಕಿದರು ಎನ್ನಲಾಗಿದೆ.

ಬಹಳ ಕಾಲ ನಡೆದ ಏರು ಧನಿಯ ಚರ್ಚೆಯ ಹೊರತಾಗಿಯೂ ಒಂದು ನಿರ್ಣಯಕ್ಕೆ ಬಾರಲಾಗದೆ, ಸಿದ್ದರಾಮಯ್ಯ ಅವರು ವಿಷಯವನ್ನು ಮಾರ್ಚ್ 14ರಂದು ನಡೆಯುವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಆದರೆ ಈ ವಷಿಯವನ್ನು ಅಲ್ಲಗಳೆದಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಸೌಹಾರ್ದಯುತವಾಗಿ, ವಿಸ್ತೃತವಾದ ಚರ್ಚೆ ಮಾಡಲಾಯಿತೆ ವಿನಃ ಯಾವೊಬ್ಬ ಸಚಿವರೂ ಕೂಡ ರಾಜಿನಾಮೆ ನೀಡುವ ಬೆದರಿಕೆ ಹಾಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ.












Click it and Unblock the Notifications