ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಲು ಜೋಶಿಯವರನ್ನು ಗೆಲ್ಲಿಸಿ: ಮಾಜಿ ಸಿಎಂ
ಹುಬ್ಬಳ್ಳಿ, ಮಾರ್ಚ್ 22: ಚುನಾವಣಾ ಯುದ್ದ ಆರಂಭವಾಗಿದ್ದು, ಯುದ್ದ ಭೂಮಿಯಲ್ಲಿ ನಮ್ಮ ಅಕ್ಕಪಕ್ಕ ಯಾರಿದ್ದಾರೆ ಎಂದು ನೋಡದೇ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೊಂದೆ ನಮ್ಮ ಗುರಿಯಾಗಿದ್ದು ಅದಕ್ಕಾಗಿ ಪ್ರಹ್ಲಾದ್ ಜೋಶಿಯವರನ್ನು ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶುಕ್ರವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವು ಯದ್ದಭೂಮಿಯಲ್ಲಿದ್ದೇವೆ. ಯುದ್ದ ಪ್ರಾರಂಭವಾಗಿದೆ. ಯದ್ಧಭೂಮಿಯಲ್ಲಿ ನಮಗೆ ಗುರಿ ಕಾಣಬೇಕು. ಅಕ್ಕ ಪಕ್ಕ ಇರುವವರು ಯಾರು ಅಂತಾ ನೋಡಬಾರದು. ನಮ್ಮ ಗುರಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಹೀಗಾಗಿ ಧಾರವಾಡ ಕ್ಷೇತ್ರದಿಂದ ಪ್ರಲ್ಹಾದ್ ಜೋಶಿ ಗೆಲ್ಲಬೇಕು ಎಂದು ಹೇಳಿದರು.

ನಾನು ಲೋಕಸಭೆಗೆ ಯಾಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹಲವು ಬಾರಿ ಹೇಳಿದ್ದೇನೆ. ಪ್ರತಿಯೊಬ್ಬರಿಗೂ ಸೂರು ಸಿಗಬೇಕೆಂದರೆ ಮೋದಿ ಪ್ರಧಾನಿ ಆಗಬೇಕು ಎಂದರು. ಇನ್ನೂ ಪ್ರಲ್ಹಾದ್ ಜೋಶಿ ಅವರು ಅತ್ಯಂತ ದಕ್ಷತೆಯಿಂದ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನಮಗೆಲ್ಲ ಜೋಶಿ ಅವರು ಹೆಸರು ತಂದಿದ್ದಾರೆ. ಯಾವ ಸಂಸದರೂ ಮಾಡದ ಕೆಲಸ ಜೋಶಿ ಮಾಡಿದ್ದಾರೆ ಎಂದು ಪ್ರಲ್ಹಾದ್ ಜೋಶಿಯನ್ನು ಮಾಜಿ ಸಿಎಮ್ ಬೊಮ್ಮಾಯಿ ಹೊಗಳಿದರು.
ಶಿಗ್ಗಾವಿ ಕ್ಷೇತ್ರದ ಕಾರ್ಯಕರ್ತರಿಗೆ ಇನ್ಮೇಲೆ ನಿಮಗೆ ಇಬ್ಬರು ಎಂಪಿ ಗಳು ಎಂದ ಬಸವರಾಜ್ ಬೊಮ್ಮಾಯಿ ಪರೋಕ್ಷವಾಗಿ ತಾವು ಸಂಸದರಾಗುವುದು ಖಚಿತ ಎಂದು ಹೇಳಿದರು. ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ಶಿಗ್ಗಾಂವಿಯನ್ನು ನಾನು ಬಿಡುವುದಿಲ್ಲ ಎಂದರು. ಇನ್ನೂ ಈ ಚುನಾವಣೆಯಲ್ಲಿ ಕಳೆದ ಬಾರಿಗಿಂದ ನಮಗೆ ಪ್ರತಿ ಗ್ರಾಮದಲ್ಲಿ 100 ಮತಗಳು ಹೆಚ್ಚಾಗಬೇಕು. ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ನೀವೆ ಅಭ್ಯರ್ಥಿ ಗಳಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನೀವು ಶಿಗ್ಗಾಂವಿಯಿಂದ ಜೋಶಿ ಅವರಿಗೆ ಲೀಡ್ ಕೊಟ್ಟರೆ ನನಗೆ ಗೌರವ ಹೆಚ್ಚಾಗುತ್ತದೆ. ಜೋಶಿ ಅವರು ಐದು ಲಕ್ಷಗಳ ಮತರದಿಂದ ಗೆಲ್ಲುತ್ತಾರೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷ ಕಾನೂನು ಪ್ರಕಾರ ತೆರಿಗೆ ಕಟ್ಟದೇ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್ ಸೀಜ್ ಮಾಡಿದೆ ಎಂದು ಆರೋಪ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಿಯಾಗಿ ಕಾನೂನು ಪ್ರಕಾರ ಪ್ರತಿವರ್ಷ ಆದಾಯ ತೆರಿಗೆ ಕಟ್ಟದೇ ಮುಚ್ಚಿಟ್ಟುಕೊಂಡಿದ್ದು, ಆದಾಯ ತೆರಿಗೆ ಇಲಾಖೆ ತನ್ನ ಕಾರ್ಯವನ್ನು ಮಾಡಿದೆ. ಕಾಂಗ್ರೆಸ್ ನವರು ಸರಿಯಾಗಿ ಕಾನೂನು ಮಾಡಿದ, ಜನರ ದಾರಿ ತಪ್ಪಿಸಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಕೇಂದ್ರದ ನಾಯಕರಿಗೆ ಸರಿಯಾಗಿ ಕಾನೂನು ಪಾಲನೆ ಮಾಡಲು ಹೇಳಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಹೇಳಿದರು.












Click it and Unblock the Notifications