ಮಿಂಚಿನ ನೋಂದಣಿ ವಿಸ್ತರಣೆ; ಮತದಾರರ ಪಟ್ಟಿಗೆ ಹೆಸರು ಸೇರಿಸಿ

ಬೆಂಗಳೂರು, ಜನವರಿ 09 : ನೀವು 18 ವರ್ಷದವರಾಗಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೇ?. ಈ ಕೂಡಲೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ. ಜನವರಿ 10ರ ತನಕ ಹೆಸರು ಸೇರಿಸಲು ಅವಕಾಶವಿದೆ.

ಯುವ ಜನರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಮಿಂಚಿನ ನೋಂದಣಿ ಎಂಬ ಅಭಿಯಾನವನ್ನು ಜನವರಿ 6 ರಿಂದ 8ರ ತನಕ ಆಯೋಜನೆ ಮಾಡಿತ್ತು. ಈಗ ಅದನ್ನು ಇನ್ನೂ ಎರಡು ದಿನಗಳ ತನಕ ವಿಸ್ತರಣೆ ಮಾಡಲಾಗಿದೆ.

ಜನವರಿ 10ರ ತನಕ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಸಿಗುವಂತೆ ಚುನಾವಣಾ ಆಯೋಗವು 'ಮಿಂಚಿನ ನೋಂದಣಿ' ಅಭಿಯಾನವನ್ನು ವಿಸ್ತರಣೆ ಮಾಡಿದೆ. ಅಗತ್ಯ ದಾಖೆಲಗಳ ಜೊತೆ ಕೇವಲ 5 ನಿಮಿಷದಲ್ಲಿ ಹೆಸರು ಸೇರಿಸಬಹುದಾಗಿದೆ.

Voters List

ಬೇಕಾದ ದಾಖಲೆಗಳು

* ಹುಟ್ಟಿದ ದಿನಾಂಕ/ವಯಸ್ಸಿನ ದೃಢೀಕರಣ
* ವಿಳಾಸದ ದೃಢೀಕರಣ
* ಪಾಸ್ ಪೋರ್ಟ್ ಅಳತೆಯ ಫೋಟೋ ಗಳು

ಆನ್‌ಲೈನ್ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಜನರು ಇದಕ್ಕಾಗಿ nvsp.in ಅಥವಾ Voter Helpline App ಬಳಕೆ ಮಾಡಬಹುದು.

ಬದಲಾವಣೆ ಸುಲಭ : ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವುದು ಮಾತ್ರವಲ್ಲ. ಒಂದೇ ಕ್ಷೇತ್ರದಲ್ಲಿದ್ದು ನಿಮ್ಮ ವಿಳಾಸ ಬದಲಾಯಿಸಿದ್ದರೆ ಹೊಸ ವಿಳಾಸವನ್ನು ಅಪ್‌ ಡೇಟ್ ಮಾಡಿಸಬಹುದಾಗಿದೆ.

ನೋಂದಣಿ ಕೇಂದ್ರಕ್ಕೆ ಹೋದರೆ FORM 8A ಬಳಸಿ ವಿಳಾಸ ಬದಲಾಯಿಸಬಹುದು. nvsp.in ಅಥವಾ Voter Helpline App ಮೂಲಕವೂ ತಿದ್ದುಪಡಿ ಮಾಡಬಹುದು. ವಿಳಾಸ ತಿದ್ದುಪಡಿಗೆ ಕೊನೆಯ ದಿನಾಂಕ 15 ಜನವರಿ 2020.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+