KWIN City: ಬೆಂಗಳೂರು ‘ಕ್ವಿನ್‌ ಸಿಟಿ’ಯಲ್ಲಿ ಕ್ಯಾಂಪಸ್ ತೆರೆಯಲು ಇಂಗ್ಲೆಂಡ್‌ ವಿಶ್ವವಿದ್ಯಾಲಯಗಳು ಸಜ್ಜು

ಬೆಂಗಳೂರು, ನವೆಂಬರ್ 29: ಬಹುಕೋಟಿ ವೆಚ್ಚದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಬಳಿ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಕ್ವಿನ್‌ ಸಿಟಿ' (KWIN City) ನಿರ್ಮಾಣವಾಗುತ್ತಿದೆ. ಇಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಕೇಂದ್ರ ಸ್ಥಾಪನೆಗೆ ಲಂಡನ್ ಒಲವು ತೋರಿದೆ. ಈ ಕುರಿತು ಅಲ್ಲಿನ ವಿವಿಧ ವಿಶ್ವವಿದ್ಯಾನಿಲಯಗಳಂತಹ ಪ್ರತಿನಿಧಿಗಳು ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರೊಂದಿಗೆ ಚರ್ಚಿಸಿದ್ದಾರೆ.

2025ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. 'ಇನ್ವೆಸ್ಟ್‌ ಕರ್ನಾಟಕʼದ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ ಸಚಿವ ಪಾಟೀಲ್ ಅವರು ಲಂಡನ್‌ನಲ್ಲಿ ಇಂಗ್ಲೆಂಡ್‌ನ ಉದ್ಯಮಿಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸರಣಿ ಸಭೆ ನಡೆಸಿದರು.

England Universities Show Interest in Bengaluru s Queen City Project MB Patil Said

ಯೂನಿವರ್ಸಿಟಿ ಆಫ್ ಲಿವರ್‌ಪೂಲ್, ಯುನಿವರ್ಸಿಟಿ ಆಫ್ ಈಸ್ಟ್ ಲಂಡನ್, ಯಾರ್ಕ್ ಯೂನಿವರ್ಸಿಟಿ ಮತ್ತು ವಾಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾನಿಲಯಗಳಂತಹ ಗೌರವಾನ್ವಿತ ಸಂಸ್ಥೆಗಳ ಪ್ರತಿನಿಧಿಗಳು ರಾಜ್ಯ ಸರ್ಕಾರದ ʼಕ್ವಿನ್‌ ಸಿಟಿʼ ಯೋಜನೆಯಲ್ಲಿ ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದಾರೆʼ ಎಂದು ಅವರು ಮಾಹಿತಿ ನೀಡಿದ್ದಾರೆ.

ಕ್ವೀನ್ ಸಿಟಿ: ವಿವಿ ಕ್ಯಾಂಪಸ್ ಆರಂಭಕ್ಕೆ ಭಾರೀ ಅವಕಾಶ

ಜಾಗತಿಕ ಶಿಕ್ಷಣ ಕೇಂದ್ರವಾಗಿ ಕರ್ನಾಟಕವು ಅಭಿವೃದ್ಧಿ ಹೊಂದುತ್ತಿರುವುದನ್ನು ಈ ಸಮಾಲೋಚನೆಗಳಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಅಸ್ತಿತ್ವಕ್ಕೆ ಬರುತ್ತಿರುವ ಮಹತ್ವಾಕಾಂಕ್ಷಿ ʼಕ್ವಿನ್‌ ಸಿಟಿʼಯ ವ್ಯಾಪ್ತಿಯೂ ಸೇರಿದಂತೆ ರಾಜ್ಯದಾದ್ಯಂತ ಇಂಗ್ಲೆಂಡ್‌ ಮೂಲದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್‌ ಆರಂಭಿಸಲು ವಿಪುಲ ಅವಕಾಶಗಳು ಇರುವುದನ್ನು ಸಚಿವರು ಮನದಟ್ಟು ಮಾಡಿಕೊಟ್ಟರು.

England Universities Show Interest in Bengaluru s Queen City Project MB Patil Said

ಕರ್ನಾಟಕದ ಉದ್ದಿಮೆ ಸ್ನೇಹಿ ಪರಿಸರ, ವಿಶ್ವ ದರ್ಜೆಯ ಮೂಲಸೌಲಭ್ಯ ಮತ್ತು ಹೂಡಿಕೆದಾರ-ಸ್ನೇಹಿ ನೀತಿಗಳನ್ನು ಪ್ರಮುಖವಾಗಿ ಬಿಂಬಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಲಿರುವ ಇನ್ವೆಸ್ಟ್‌ ಕರ್ನಾಟಕದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಿದರು. ಆರ್ಥಿಕ ಸಹಕಾರ ವೃದ್ಧಿಸಲು ಮತ್ತು ರಾಜ್ಯದಲ್ಲಿ ವಹಿವಾಟು ವಿಸ್ತರಿಸಲು ಜಾಗತಿಕ ಹೂಡಿಕೆದಾರರ ಸಮಾವೇಶ ನೆರವಾಗಲಿದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶ

ಇಂಗ್ಲೆಂಡ್‌ನ ಸಣ್ಣ ಉದ್ದಿಮೆ ಹಾಗೂ ರಫ್ತು ಸಚಿವ ಗರೆಥ್ ಥಾಮಸ್, ಬ್ರಿಟನ್ನಿನ ಡೆಪ್ಯುಟಿ ಹೈಕಮಿಷನರ್‌ ಹಾಗೂ ಇಂಗ್ಲೆಂಡ್‌ ಭಾರತ ವಹಿವಾಟು ಮಂಡಳಿಯ (ಯುಕೆಐಬಿಸಿ) ಪ್ರತಿನಿಧಿಗಳಿಗೆ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಪುಲ ಅವಕಾಶಗಳನ್ನು ಸಚಿವ ಪಾಟೀಲ ಅವರು ವಿವರಿಸಿದರು.

ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು ಎಂಬಿಡಿಎ, ಸಲಹಾ ಸಂಸ್ಥೆ ಸ್ಕ್ರಮ್‌ ಕನೆಕ್ಟ್ ಹಾಗೂ ರಸೆಲ್‌ ಗ್ರೂಪ್‌ ಆಫ್‌ ಯುಕೆ ಯುನಿವರ್ಸಿಟೀಸ್‌ನ ಪ್ರತಿನಿಧಿಗಳು ಸೇರಿದಂತೆ ಬ್ರಿಟನ್‌ನ ಪ್ರಮುಖ ಕೈಗಾರಿಕೋದ್ಯಮಿಗಳ ಜೊತೆ ಪ್ರತ್ಯೇಕವಾಗಿ ದುಂಡು ಮೇಜಿನ ಸಭೆಗಳನ್ನು ನಡೆಸಿತು.

ಮುಂದಿನ ವರ್ಷದ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ʼಇನ್ವೆಸ್ಟ್ ಕರ್ನಾಟಕ 2025ʼವು ಕರ್ನಾಟಕವನ್ನು ಜಾಗತಿಕ ಹೂಡಿಕೆಯ ಪ್ರಮುಖ ತಾಣವಾಗಿ ವಿಶ್ವಕ್ಕೆ ಪ್ರದರ್ಶಿಸಲು, ಪಾಲುದಾರಿಕೆ ಉತ್ತೇಜಿಸಲು ಮತ್ತು ಕೈಗಾರಿಕೆಗಳಾದ್ಯಂತ ನಾವೀನ್ಯತೆಗೆ ಚಾಲನೆ ನೀಡುವ ಗುರಿ ಹೊಂದಿದೆ ಎಂದರು. ಈ ವೇಳೆ ಸಚಿವರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರು ಸಾಥ್ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+