ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಕೆಟ್ ಕಳೆದುಕೊಳ್ತಿದೆ ಎಂಜಿನಿಯರಿಂಗ್: ಮೂಲ ವಿಜ್ಞಾನಕ್ಕೆ ಡಿಮ್ಯಾಂಡ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ರಾಜ್ಯದಲ್ಲಿ ಎಂಜಿನಿಯರಿಂಗ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

ವರ್ಷದಿಂದ ವರ್ಷಕ್ಕೆ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಮೂಲ ವಿಜ್ಞಾನ ಅಂದರೆ ಬಿಎಸ್‌ಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಆರೇಳು ವರ್ಷಗಳ ಹಿಂದೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡರೆ ಸಾಕು ನಂತರ ಎಂಜಿನಿಯರಿಂಗ್ ಗೆ ಸೇರುವುದು ಪಕ್ಕಾ ಆಗಿತ್ತು. ಆದರೆ ವಿದ್ಯಾರ್ಥಿಗಳ ಆಯ್ಕೆ ಬೇರೆಯಾಗಿದೆ. ಅಪ್ಲೈಡ್ ಸೈನ್ಸ್‌ನ್ನು ಎಂಜಿನಿಯರಿಂಗ್ ತಾಂತ್ರಿಕ ಕೋರ್ಸ್‌ಗಳಾದ ಏರೋಸ್ಪೇಸ್ ಎಂಜಿನಿಯರಿಂಗ್, ಆಟೋಮಡಿವ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಗಳಲ್ಲಿ ಕಲಿಸಲಾಗುತ್ತಿದೆ.

 ನಿರುದ್ಯೋಗ ಮೂಲ ಕಾರಣ

ನಿರುದ್ಯೋಗ ಮೂಲ ಕಾರಣ

ವಿಜ್ಞಾನ ವಿಷಯಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ ಮೊದಲಿಂದಲೂ ಇದೆ, ಬದಲಾದ ಟ್ರೆಂಡ್ ನಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ನತ್ತ ಹೆಚ್ಚು ವಿದ್ಯಾರ್ಥಿಗಳು ಆಸಕ್ತರಾಗಿದ್ದರು.ಆದರೆ ಇದೀಗ ಬಿಇ ಪಡೆದ ಭಾಗಶಃ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ ಬಿಇ ವ್ಯಾಸಂಗಕ್ಕೆ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರಿಗೆ ಅದನ್ನು ಭರಿಸಲು ಕಷ್ಟವಾಗುತ್ತಿದ್ದು, ಅವರಿಗೆ ಆಸಕ್ತಿ ಇದ್ದರೂ ಕೂಡ ಅನಿವಾರ್ಯವಾಗಿ ಬಿಎಸ್‌ಸಿ ಮಾಡುವ ಪರಿಸ್ಥಿತಿ ಇದೆ.

ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ

 ಅಂಕಿ ಅಂಶಗಳು ಏನು ಹೇಳುತ್ತಿವೆ

ಅಂಕಿ ಅಂಶಗಳು ಏನು ಹೇಳುತ್ತಿವೆ

ಕಳೆದ ಮೂರು ವರ್ಷಗಳಲ್ಲಿ ಒಂದು ವಿಚಾರ ಸ್ಪಷ್ಟವಾಗುವುದೇನೆಂದರೆ ರಾಜ್ಯದಲ್ಲಿ ಒಟ್ಟಾರೆ 68 ಸಾವಿರ ಎಂಜಿನಿಯರಿಂಗ್ ಸೀಟುಗಳು ಲಭ್ಯವಿದೆ. ಆದರೆ ಈ ಸೀಟುಗಳು ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಅಷ್ಟೇ ಅಲ್ಲ ವರ್ಷದಿಂದ ವರ್ಷಕ್ಕೆ ಉಳಿಕೆಯಾಗುತ್ತಿರುವ ಸೀಟುಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು?ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು?

 ಎಷ್ಟು ಎಂಜಿನಿಯರಿಂಗ್ ಸೀಟು ಉಳಿಕೆ

ಎಷ್ಟು ಎಂಜಿನಿಯರಿಂಗ್ ಸೀಟು ಉಳಿಕೆ

2016-17ನೇ ಸಾಲಿನಲ್ಲಿ ಕ್ರಮವಾಗಿ 24,892, 29,345, 25061 ಸೀಟುಗಳು ಉಳಿಕೆಯಾಗಿವೆ. ಉದ್ಯೋಗ ಅವಕಾಶಗಳು ನಿರಂತರವಾಗಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂಲ ವಿಜ್ಞಾನವಾದ ಬಿಎಸ್‌ಸಿಯತ್ತ ಹೆಚ್ಚು ಆಸಕ್ತರಾಗಿದ್ದಾರೆ. ಅಪ್ಲೈಡ್ ಸೈನ್ಸ್‌ಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ ಹಾಗೂ ಕ್ಯಾಂಪಸ್ ಆಯ್ಕೆಯಲ್ಲಿ ಉದ್ಯೋಗ ಕಲ್ಪಿಸುವಂತಹ ಕಾಲೇಜುಗಳಿಗೆ ಬೇಡಿಕೆ ಇದೆ.

ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ! ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ!

 ಬಿಎಸ್‌ಸಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳು

ಬಿಎಸ್‌ಸಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳು

2016-17ನೇ ಅವಧಿಯಲ್ಲಿ ಬಿಎಸ್‌ಸಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಉಂಟಾಗಿದೆ. 2016-17ರಲ್ಲಿ ಪದವಿ ಮೊದಲ ವರ್ಷಕ್ಕೆ 33971 ಇದ್ದ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2017-18ರಲ್ಲಿ 40,755 ಮತ್ತು 2018-19ನೇ ಸಾಲಿನಲ್ಲಿ 47,705 ಪ್ರವೇಶ ಪಡೆದಿದ್ದಾರೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ.

English summary
As engineering courses have losing demand in the changing scenario and basic science courses are becoming more popular than ever in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X