ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರ: ಡಿಕೆಶಿಗೆ ಆನೆಬಲ, ಎಚ್ಡಿಕೆಗೆ ಸೆಟ್ ಬ್ಯಾಕ್

By Srinath
|
Google Oneindia Kannada News

Energy minister DK Shivakumar becomes Ramnagar incharge minister
ಕನಕಪುರ, ಜ.17- ನಿರೀಕ್ಷೆಯಂತೆ ಕಾಂಗ್ರೆಸ್ಸಿನ ಹಿರಿಯ ನಾಯಕ, ಇಂಧನ ಸಚಿವ ಡಿಕೆ ಶಿವಕುಮಾರ್‌ ಅವರನ್ನು ರಾಮನಗರ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.

ಇದುವರೆಗೆ ರಾಮನಗರ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿದ್ದ ಗೃಹ ಸಚಿವ ಕೆಜೆ ಜಾರ್ಜ್‌ ಅವರನ್ನು ಅವರದೇ ಜಿಲ್ಲೆಯಾದ ಕೊಡಗಿನ ಉಸ್ತುವಾರಿಗೆ ಬಿಡಲಾಗಿದೆ. ಚಾಮರಾಜನಗರ ಜಿಲ್ಲೆಯವರಾದ ಲೋಕೋಪಯೋಗಿ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಅವರು ಹಾಸನ ಮತ್ತು ಕೊಡಗು ಜಿಲ್ಲೆ ಉಸ್ತುವಾರಿ ಹೊಂದಿದ್ದರು.

ಇದರಿಂದ ಲೋಕಸಭಾ ಚುನಾವಣೆ ಮುನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜಕೀಯವಾಗಿ ಮಹತ್ವದ ಬದಲಾವಣೆ ಮಾಡಿದಂತಾಗಿದೆ. ಸ್ವತಃ ರಾಮನಗರ ಜಿಲ್ಲೆಯವರೇ ಆದ ಡಿಕೆಶಿ ಅವರು ನಿರ್ಣಾಯಕ ಸಂದರ್ಭದಲ್ಲಿ ಆಯಕಟ್ಟಿನ ಜಿಲ್ಲೆಯ ಹೊಣೆಹೊತ್ತಂತಾಗಿದೆ.

ಕುಮಾರಸ್ವಾಮಿಗೆ ಸೆಟ್ ಬ್ಯಾಕ್:
ರಾಜಕೀಯವಾಗಿ ಇದು ಡಿಕೆಶಿ ಮತ್ತು ದೊಡ್ಡ ಗೌಡರ ಕುಟುಂಬಗಳ ಜಿದ್ದಾಜಿದ್ದಿಗೆ ರಾಮನಗರ ವೇದಿಕೆಯಾಗಿದೆ. ಗಮನಾರ್ಹವೆಂದರೆ ಎಚ್ ಡಿ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಳೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಡಿಕೆಶಿ ರಾಮನಗರದ ುಸ್ತುವಾರಿ ವಹಿಸಿಕೊಳ್ಳುತ್ತಿರುವುದು ಕಾಕತಾಳೀಯವಾಗಿದೆ.

ಇದರಿಂದ ಮುಂದಿನ ಲೋಕಸಭಾ ಚುನಾವಣೆ ಕದನ ಕುತೂಹಲ ಗರಿಗೆದರಿದ್ದು, ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವಣ ಸ್ಟ್ರೈಟ್ ಫೈಟ್ ನಿರೀಕ್ಷಿಸಬಹುದಾಗಿದೆ. ರಾಮನಗರ ಜಿಲ್ಲೆಯ ಉಸ್ತುವಾರಿ, (ಇಂಧನ) ಸಚಿವ ಸ್ಥಾನ ಮತ್ತು ತಮ್ಮ ಸುರೇಶ್ (ಬೆಂಗಳೂರು ಗ್ರಾಮಾಂತರದ) ಸಂಸದರಾಗಿರುವುದು ರಾಜಕೀಯವಾಗಿ ಡಿಕೆ ಶಿವಕುಮಾರ್ ಗೆ ಆನೆಬಲ ಬಂದಂತಾಗಿದೆ.

ಅದೇ ಎಚ್ಡಿಕೆ ಕಡೆಯಿಂದ ನೋಡಿದರೆ ಸ್ವತಃ ಕುಮಾರಸ್ವಾಮಿ ಅವರು ರಾಮನಗರ ಶಾಸಕರಾಗಿರುವುದು ಬಿಟ್ಟರೆ ಹೆಚ್ಚಿನ ಸತ್ವವೇನೂ ಇಲ್ಲ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಇತ್ತೀಚೆಗೆ ಹೀನಾಯ ಸೋಲು ಕಂಡಿರುವುದು ಕುಮಾರಸ್ವಾಮಿಗೆ ನುಂಗಲಾರದ ತುತ್ತಾಗಿದೆ. ಆದರೆ ಈ ಬಾರಿ ಮತ್ತೆ ಅನಿತಾ ಅಥವಾ ಪುತ್ರ ನಿಖಿಲ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ನಿಲ್ಲಿಸಲು ಗೌಡರ ಕುಟುಂಬ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.

ಕನಕಪುರ ಸೋದರರ ಸವಾಲ್:
ಹಾಗಾದಲ್ಲಿ ನಿಜಕ್ಕೂ ಇದು ಡಿಕೆಶಿ ಮತ್ತು ಗೌಡರ ಕುಟುಂಬದ ಫೈಟ್ ಆಗುವಲ್ಲಿ ಯಾವುದೇ ಸಂದೇಹವಿಲ್ಲ. ಈ ಮಧ್ಯೆ, ಕುಮಾರಸ್ವಾಮಿಗೆ ಟಾಂಗ್ ನೀಡಲು ಯೋಗೀಶ್ವರ್ ಜತೆ ಕೈಜೋಡಿಸಿದ ಡಿಕೆಶಿ, ಚನ್ನಪಟ್ಟಣದಲ್ಲಿ ಅನಿತಾ ವಿರುದ್ಧ ಯೋಗೀಶ್ವರ್ ನಿರಾಯಾಸವಾಗಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದು ಗಮನಾರ್ಹ.

English summary
Energy minister DK Shivakumar is given Ramnagar incharge ministership. Earlier KJ George was the incharge minister of Ramnagar. Politically it is considered as a huge setback for JDS leader HD Kumarswamy who is on the verge of losing the Leader of the Opposition status shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X