ಕರ್ನಾಟಕದ 11 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಆಗಸ್ಟ್ 07: ಕೆಎಎಸ್ ಅಧಿಕಾರಿಗಳನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಿದ್ದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಈಗ 11 ಜನ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಗುರುವಾರ ಸಂಜೆ ಆದೇಶ ಹೊರಡಿಸಿದೆ.
ಜುಲೈ 23ರಂದು 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು, ಈ ಪೈಕಿ ಹರ್ಷ ಗುಪ್ತಾ, ಶ್ರೀವತ್ಸ ಕೃಷ್ಣ ಅವರ ವರ್ಗಾವಣೆ ಸರ್ಕಾರದ ತಪ್ಪು ನಡೆಗೆ ಸಾಕ್ಷಿಯಾಗಿದೆ. ಹರ್ಷ ಗುಪ್ತಾ ಅವರನ್ನು ಮೈಸೂರು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. [ಪೂರ್ಣ ವಿವರ ಇಲ್ಲಿದೆ]
ಈ ಬಾರಿ ವರ್ಗಾವಣೆಗೊಂಡವರ ಪೈಕಿ ಅಜಯ ಸೇಠ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಗೊಂಡಿದ್ದಾರೆ. ಎಂ.ವಿ.ಜಯಂತಿ,ಅಂಜುಮ್ ಪರ್ವೆಜ್, ಪಲ್ಲವಿ ಆಕರಾತಿ ಅವರ ವರ್ಗಾವಣೆ ಗಮನ ಸೆಳೆಯುತ್ತದೆ.

ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಹಾಗೂ ಹುದ್ದೆಗಳ ವಿವರ:
* ಅಜಯ ಸೇಠ್-ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಬೆಂಗಳೂರು.
* ಡಾ.ಪಿ.ಸಿ.ಜಾಫರ್-ರಿಜಿಸ್ಟ್ರಾರ್, ಲೋಕಾಯುಕ್ತ, ಬೆಂಗಳೂರು.
* ಎಂ.ವಿ.ಜಯಂತಿ-ಪ್ರಾದೇಶಿಕ ಆಯುಕ್ತೆ, ಬೆಂಗಳೂರು ವಿಭಾಗ, ಬೆಂಗಳೂರು.
* ಅಂಜುಮ್ ಪರ್ವೆಜ್-ವ್ಯವಸ್ಥಾಪಕ ನಿರ್ದೇಶಕ. ಕೃಷ್ಣಾ ಭಾಗ್ಯ ಜಲ ನಿಗಮ, ಬೆಂಗಳೂರು.
* ಆರ್.ಆರ್.ಜನ್ನು- ಆಯುಕ್ತ, ಧಾರ್ವಿುಕ ದತ್ತಿ ಇಲಾಖೆ ಮತ್ತು ಹೆಚ್ಚುವರಿ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು.
* ಖುಷ್ಬೂ ಗೋಯಲ್ ಚೌಧರಿ-ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಧಾರವಾಡ.
* ರಮಣದೀಪ್ ಚೌಧರಿ-ಜಿಲ್ಲಾಧಿಕಾರಿ, ಕೊಪ್ಪಳ.
* ಪಲ್ಲವಿ ಆಕರಾತಿ-ಜಿಲ್ಲಾಧಿಕಾರಿ, ತುಮಕೂರು.
* ಎಸ್.ಎಸ್. ನಕುಲ್-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಬಳ್ಳಾರಿ.
* ಡಿ.ಎಸ್.ರಮೇಶ್- ಯೋಜನಾ ನಿರ್ದೇಶಕ, ರಾಜ್ಯ ನೀರು ಮತ್ತು ಒಳಚರಂಡಿ ಯೋಜನೆ, ಬೆಂಗಳೂರು.
* ಎಂ.ಜಿ.ಹಿರೇಮಠ-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ.












Click it and Unblock the Notifications