ಐಎಎಸ್ ಅಧಿಕಾರಿಗಳ ವರ್ಗಾವಣೆ ಏನಿದರ ಅಸಲಿಯತ್ತು?

ಬೆಂಗಳೂರು, ಜು.23: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರ ಬುಧವಾರದಿಂದಲೇ ಜಾರಿಗೆ ಬರುವಂತೆ 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಮೂಲಕ ಈ ಹಿಂದಿನ ಬಿಜೆಪಿ ಸರ್ಕಾರ ನಡೆಸುತ್ತಿದ್ದ ವರ್ಗಾವಣೆ ಎಂಬ ಶಿಕ್ಷೆಯನ್ನು ಕಾಂಗ್ರೆಸ್ ಕೂಡಾ ಮುಂದುವರೆಸಿದೆ.

ಒಟ್ಟಾರೆ 18 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಈ ಪೈಕಿ ಹರ್ಷ ಗುಪ್ತಾ, ಶ್ರೀವತ್ಸ ಕೃಷ್ಣ ಅವರ ವರ್ಗಾವಣೆ ಸರ್ಕಾರದ ತಪ್ಪು ನಡೆಗೆ ಸಾಕ್ಷಿಯಾಗಿದೆ. ಹರ್ಷ ಗುಪ್ತಾ ಅವರನ್ನು ಮೈಸೂರು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಐಟಿ ಬಿಟಿ ಸಚಿವ ಎಸ್ ಆರ್ ಪಾಟೀಲ್ ಅವರ ಜೊತೆ ಹೊಂದಾಣಿಕೆಯಾಗದ ಕಾರಣ ಐಟಿ ಬಿಟಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀವತ್ಸ ಕೃಷ್ಣ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿ ವಿ ಮಂಜುಳಾ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. [14 ಮಂದಿ ಐಎಎಸ್ ಅಧಿಕಾರಿಗಳು ವರ್ಗ]

Harsha Gupta

* ವಿ.ಮಂಜುಳಾ-ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ
* ಡಾ.ಎನ್. ನಾಗಾಂಬಿಕಾ ದೇವಿ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ.

* ಗಂಗಾರಾಮ್ ಬಡೇರಿಯಾ-ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ
* ನಿಲಯ ಮಿತಾಶ್-ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ
* ಉಮಾ ಮಹದೇವನ್-ಯೋಜನೆ, ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿ.
* ಎನ್.ಮಂಜುನಾಥ ಪ್ರಸಾದ್-ಕೃಷಿ ಇಲಾಖೆಯ ಕಾರ್ಯದರ್ಶಿ. [ಆಹಾರ ಸಂಸ್ಕರಣೆ ಇಲಾಖೆಗೆ ರಶ್ಮಿ ಮಹೇಶ್ ವರ್ಗ]

* ಶ್ರೀವತ್ಸ ಕೃಷ್ಣ-ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ(ಇ-ಆಡಳಿತ) ಇಲಾಖೆಯ ಕಾರ್ಯದರ್ಶಿ
* ಹರ್ಷಾ ಗುಪ್ತ-ಮೈಸೂರು ಕಾಗದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ
* ಮುನೀಷ್ ವೌದ್ಗಿಲ್-ಸರ್ವೇ ಹಾಗೂ ಭೂ ದಾಖಲೆ ವಿಭಾಗದ ಆಯುಕ್ತ.

* ಎಂ.ಕೆ.ಅಯ್ಯಪ್ಪ-ಸಹಕಾರ ಸಂಘಗಳ ರಿಜಿಸ್ಟ್ರಾರ್,
* ಎಚ್.ಎಸ್.ಅಶೋಕಾನಂದ- ಈಶಾನ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ
* ಸೌಜನ್ಯಾ- ಕೆಎಚ್‌ಎಸ್‌ಡಿಆರ್‌ಪಿ ಯೋಜನಾ ಆಡಳಿತಾಧಿಕಾರಿ ಹಾಗೂ ಎನ್‌ಎಚ್‌ಎಂ ಯೋಜನಾ ನಿರ್ದೇಶಕಿ
* ಮುಹಮ್ಮದ್ ಸಲಾಹುದ್ದೀನ್-ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿ-1
* ಸಲ್ಮಾ ಕೆ.ಫಹೀಮ್- ಕೆಎಸ್ಸಾರ್ಟಿಸಿ (ಸಿಬ್ಬಂದಿ ಮತ್ತು ಪರಿಸರ) ನಿರ್ದೇಶಕಿ
* ಜಿ.ಎನ್.ಶಿವಮೂರ್ತಿ-ಕೃಷಿ ಮಾರುಕಟ್ಟೆ ನಿರ್ದೇಶಕ
* ಎಸ್.ಪಾಲಯ್ಯ-ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ.
* ಡಿ.ಎಸ್.ರಮೇಶ್-ಬಳ್ಳಾರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
* ಜೆ.ಮಂಜುನಾಥ್‌ -ಉದ್ಯೋಗ ಮತ್ತು ತರಬೇತಿ ವಿಭಾಗದ ಆಯುಕ್ತ.
(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+