ದಿಢೀರ್ ಬೆಳವಣಿಗೆ: 14 ಮಂದಿ ಐಎಎಸ್ ಅಧಿಕಾರಿಗಳು ವರ್ಗ
ಬೆಂಗಳೂರು, ಜೂ.12: ರಾಜ್ಯದ ಆಡಳಿತ ಯಂತ್ರ ಚುರುಕುಗೊಳಿಸಲು ಕರ್ನಾಟಕ ಸರ್ಕಾರ ಭರ್ಜರಿ ಸರ್ಜರಿ ಮಾಡಿದೆ. ದಿಢೀರ್ ಬೆಳವಣಿಗೆಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಕೆ.ಎಸ್.ಸತ್ಯಮೂರ್ತಿ ಯವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಕೊಡಗು, ಬೀದರ್ ಹಾಗೂ ಚಿಕ್ಕಮಗಳೂರಿಗೆ ಹೊಸ ಜಿಲ್ಲಾಧಿಕಾರಿಗಳ ನೇಮಕವಾಗಿದೆ. [ಯುಪಿಎಸ್ ಸಿ ಹಾಗೂ ಐಎಫ್ ಎಸ್ ಪರೀಕ್ಷೆ ಅಧಿಸೂಚನೆ]
ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕಿಯಾಗಿದ್ದ ರಶ್ಮಿ ವಿ. ಮಹೇಶ್ ಸೇರಿದಂತೆ ಒಟ್ಟು ಐವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಏ.30ರಂದು ಆದೇಶ ಹೊರಡಿಸಿತ್ತು.
ರಶ್ಮಿ ವಿ. ಮಹೇಶ್ ಅವರನ್ನು ಆಹಾರ ಸಂಸ್ಕರಣೆ ಮತ್ತು ಕೊಯ್ಲು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗ ಮಾಡಲಾಗಿತ್ತು. ಇದಾದ ಬಳಿಕ ಬೃಹತ್ ಪ್ರಮಾಣದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ಆದೇಶಿಸಿದೆ. [ಆಹಾರ ಸಂಸ್ಕರಣೆ ಇಲಾಖೆಗೆ ರಶ್ಮಿ ಮಹೇಶ್ ವರ್ಗ]

* ಎಸ್.ಪಿ.ಷಡಕ್ಷರಿ ಸ್ವಾಮಿ - ಜಿಲ್ಲಾಧಿಕಾರಿಗಳು, ಚಿಕ್ಕಮಗಳೂರು ಜಿಲ್ಲೆ.
* ಮೀರ್ ಅನೀಸ್ ಅಹಮದ್- ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ.
* ಅನುರಾಗ್ ತಿವಾರಿ- ಜಿಲ್ಲಾಧಿಕಾರಿಗಳು, ಬೀದರ್.
* ಕೆ.ಎಸ್.ಸತ್ಯಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ
* ಬಿ.ಜಿ.ನಂದಕುಮಾರ್- ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಾರ್ತಾ ಇಲಾಖೆ.
* ಡಾ.ಪಿ.ಸಿ.ಜಾಫರ್- ರಾಜ್ಯ ಯೋಜನಾ ನಿರ್ದೇಶಕರು, ಸರ್ವಶಿಕ್ಷಣ ಅಭಿಯಾನ.
* ಬಿ.ಎಸ್.ಶೇಖರಪ್ಪ -ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯ ಕೆಐಎಡಿಬಿ ಬೆಂಗಳೂರು.
* ಕೆ.ಬಿ.ಶಿವಕುಮಾರ್-ಹೆಚ್ಚುವರಿ ಆಯುಕ್ತರು, ವಾಣಿಜ್ಯ ತೆರಿಗೆ(ಜಾಗೃತದಳ), ಬೆಂಗಳೂರು.
* ವಾಸಿರೆಡ್ಡಿ ವಿಜಯ ಜೋತ್ಸ್ನಾ- ಕೆಪಿಎಸ್‌ಸಿ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿ.
* ಆರ್.ವೆಂಕಟೇಶ್ ಕುಮಾರ್- ಸಿಇಒ, ಹಾಸನ ಜಿಲ್ಲಾಪಂಚಾಯ್ತಿ.
* ಎಚ್.ಆರ್. ಕೋಲಾರ ಪತಿ-ಸಿಇಒ, ವಿಜಯಾಪುರ ಜಿಲ್ಲಾ ಪಂಚಾಯ್ತಿ.
* ಡಾ.ಆರ್.ರಾಗಪ್ರಿಯ -ಸಿಇಒ, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ.
* ರಿಚರ್ಡ್ ವಿನ್ಸೆಂಟ್ ಡಿಸೋಜ- ಸಿಇಒ, ರಾಯಚೂರು ಜಿಲ್ಲಾ ಪಂಚಾಯ್ತಿ.
* ಬಿ.ಆರ್.ಮಮತ -ಸಿಇಒ, ತುಮಕೂರು ಜಿಲ್ಲಾ ಪಂಚಾಯ್ತಿ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications