ಯುಪಿಎಸ್ ಸಿ ಹಾಗೂ ಐಎಫ್ ಎಸ್ ಪರೀಕ್ಷೆ ಅಧಿಸೂಚನೆ
ನವದೆಹಲಿ, ಮೇ.24: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ ಸಿ) ಹಾಗೂ ಭಾರತೀಯ ಅರಣ್ಯ ಸೇವೆ(ಐಎಫ್ ಎಸ್) ಪರೀಕ್ಷೆಗಳಿಗೆ ಅಧಿಸೂಚನೆ ಪ್ರಕಟಗೊಂಡಿದೆ. ಒಟ್ಟು 24 ವಿಭಾಗಗಳ 1,129 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ.
ನಾಗರಿಕ ಸೇವಾ ಪರೀಕ್ಷೆ(CSE) ಯಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್(ಸಿಸ್ಯಾಟ್) ಮುಂದುವರೆಸಲಾಗಿದೆ. ಪಾಸ್ ಆಗಲು ಶೇ 33 ರಷ್ಟು ಅಂಕಗಳನ್ನು ಪಡೆಯಬೇಕಾಗುತ್ತದೆ. ಪೇಪರ್ II ನಲ್ಲಿ 'English language comprehension skills ಅಂಕಗಳನ್ನು ಸಿಎಸ್ ಇ2014ರ ಮೆರಿಟ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸದಿರಲು ನಿರ್ಧರಿಸಲಾಗಿದೆ.
ಸಿಎಸ್ ಇ 2011ರ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಸಿಎಸ್ ಇ 2015ರ ಪರೀಕ್ಷೆ ಬರೆಯುವ ಮತ್ತೊಂದು ಅವಕಾಶ ನೀಡಲಾಗಿದೆ
ಮೂರು ಹಂತಗಳಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆ ನಡೆಸಲಾಗುತ್ತದೆ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಶ್ರೇಯಾಂಕ(ranking)ಪಟ್ಟಿ ಸಿದ್ಧಪಡಿಸಲಾಗುತ್ತದೆ. ಈ ಮೂಲಕ ಐಎಎಸ್, ಐಪಿಎಸ್, ಐಎಫ್ಎಸ್ ಹಾಗೂ ಇತರೆ ಸೇವೆಗಳ ಸ್ಥಾನಗಳಿಗೆ ನೇಮಕಾತಿ ನಡೆಯುತ್ತದೆ.
ಒಟ್ಟು ಸ್ಥಾನ: 1,129
ಅರ್ಜಿ ಸಲ್ಲಿಕೆಗೆ ಕೊನೇ ದಿನ: ಜೂನ್ 19
ಪ್ರಿಲಿಮ್ಸ್ ಪರೀಕ್ಷೆ: ಆಗಸ್ಟ್ 23
ವೆಬ್ಸೈಟ್: http://www.upsc.gov.in/
ಅರ್ಜಿ ಶುಲ್ಕ
* ಸಾಮಾನ್ಯ ವರ್ಗದ ಪುರುಷ ಅಭ್ಯರ್ಥಿಗಳಿಗೆ 100 ರು
* ಓಬಿಸಿ ವರ್ಗದ ಪುರುಷ ಅಭ್ಯರ್ಥಿಗಳಿಗೆ 200 ರು.
* ಮಹಿಳೆಯರು/ ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ರಿಯಾಯಿತಿ.

* ಕನಿಷ್ಠ 21 ವರ್ಷ ಹಾಗೂ ಗರಿಷ್ಠ 32 ವರ್ಷ (6 ಪ್ರಯತ್ನ)
* ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ (9 ಪ್ರಯತ್ನ) ಹಾಗೂ ಅಂಗವಿಕಲರಿಗೆ 10 ವರ್ಷ ಸಡಿಲಿಕೆ. [ಯುಪಿಎಸ್ಸಿ ಅಭ್ಯರ್ಥಿಗಳಿಗೆ ನಿರಾಶೆ ಮೂಡಿಸಿದ ಸರ್ಕಾರ ]
ವಿದ್ಯಾರ್ಹತೆ
* ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ
* ಕೊನೆ ಸೆಮಿಸ್ಟರ್ನಲ್ಲಿರುವ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಕೆ ಅವಕಾಶ
* ಆಗಸ್ಟ್ 23ರಂದು ಪೂರ್ವಭಾವಿ ಪರೀಕ್ಷೆಗಳು ನಡೆಯಲಿವೆ.
* 200 ಅಂಕಗಳ ಬಹು ಆಯ್ಕೆ ಮಾದರಿಯ ಎರಡು ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿರುತ್ತವೆ (ಸಾಮಾನ್ಯ ಅಧ್ಯಯನ ಮತ್ತು ಸಿಸ್ಯಾಟ್).
* ಪ್ರತಿ ತಪ್ಪು ಉತ್ತರಕ್ಕೆ ಶೇ.0.33 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
* 250 ಅಂಕಗಳಿಗೆ ಇಂಗ್ಲಿಷ್ ಪತ್ರಿಕೆ, 250 ಅಂಕಗಳ ನಾಲ್ಕು ಸಾಮಾನ್ಯ ಅಧ್ಯಯನ ಪತ್ರಿಕೆ, 500 ಅಂಕಗಳಿಗೆ ಐಚ್ಛಿಕ ವಿಷಯಗಳ ಪರೀಕ್ಷೆ ಹಾಗೂ ಸಂದರ್ಶನ/ ವ್ಯಕ್ತಿತ್ವ ಪರೀಕ್ಷೆಯನ್ನು( 275 ಅಂಕ). ಒಟ್ಟು 2025 ಅಂಕಗಳಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಶ್ರೇಯಾಂಕ ಪಟ್ಟಿ ಸಿದ್ಧಪಡಿಸಲಾಗುತ್ತದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications