ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಸ್ಸಿ ಅಭ್ಯರ್ಥಿಗಳಿಗೆ ನಿರಾಶೆ ಮೂಡಿಸಿದ ಸರ್ಕಾರ

By Mahesh
|
Google Oneindia Kannada News

ನವದೆಹಲಿ, ಡಿ.11: 'ಕೇಂದ್ರೀಯ ಲೋಕಸೇವಾ ಆಯೋಗ(ಯುಪಿಎಸ್ ಸಿ) ದ ಹುದ್ದೆಗಳ ಆಕಾಂಕ್ಷಿಗಳ ವಯೋಮಿತಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ, ಕೇಂದ್ರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಈಗಾಗಲೇ ನೂತನ ಅಧಿಸೂಚನೆ ಹೊರಡಿಸಿದೆ' ಎಂಬ ಸುದ್ದಿ ಸುಳ್ಳಾಗಿದೆ. ಈ ರೀತಿ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಯುಪಿಎಸ್ ಸಿ ಆಕಾಂಕ್ಷಿಗಳ ವಯೋಮಿತಿ ಇಳಿಕೆ ಹಾಗೂ ಪರೀಕ್ಷೆ ಯತ್ನ ಮಿತಿ ಹೆಚ್ಚಳದ ಬಗ್ಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಸರ್ಕಾರ ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಂಸತ್ತಿನಲ್ಲಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಯುಪಿಎಸ್ ಸಿ ಹುದ್ದೆ ಆಕಾಂಕ್ಷಿಗಳಿಗೆ ನಿರಾಶೆ ಮೂಡಿದೆ.

ಮುಂದಿನ ವರ್ಷದ ಪರೀಕ್ಷೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಯೋಮಿತಿ 30 ರಿಂದ 26 ವರ್ಷಕ್ಕೆ ಇಳಿಕೆ ಮೂರು ಬಾರಿ ಪರೀಕ್ಷೆ ಯತ್ನ ನೀಡಲಾಗುವುದು ಎಂಬ ಸುದ್ದಿ ಬಂದಿತ್ತು.[ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಸಿಗುವುದೇ?]

No proposal to reduce age limit for civil services exam: Government

ಈ ಬಗ್ಗೆ ಲಿಖಿತ ಉತ್ತರ ನೀಡಿದ ಸಚಿವ ಜಿತೇಂದ್ರ ಸಿಂಗ್ ಅವರು ನಾಗರಿಕ ಸೇವಾ ಪರೀಕ್ಷೆ(CSE) ಯಲ್ಲಿ ಬದಲಾವಣೆಗೆ ಕೇಂದ್ರದ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಶಿಫಾರಸು ಮಾಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಚರ್ಚೆ ನಡೆಸಿ ನಿರ್ಣಯಕ್ಕೆ ಬಂದಿದೆ.

ಬದಲಾವಣೆಗಳು: ನಾಗರಿಕ ಸೇವಾ ಪರೀಕ್ಷೆ(Preliminary) ಪೇಪರ್ II ನಲ್ಲಿ 'English language comprehension skills ಅಂಕಗಳನ್ನು ಸಿಎಸ್ ಇ2014ರ ಮೆರಿಟ್ ಪಟ್ಟಿಯಲ್ಲಿ ಸೇರ್ಪಡೆಗೊಳಿಸದಿರಲು ನಿರ್ಧರಿಸಲಾಗಿದೆ.

ಇದರ ಜೊತೆಗೆ ಸಿಎಸ್ ಇ 2011ರ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಸಿಎಸ್ ಇ 2015ರ ಪರೀಕ್ಷೆ ಬರೆಯುವ ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.(ಪಿಟಿಐ)

English summary
There is no proposal at present before the government to reduce the upper age limit and number of attempts in civil service examination, the Lok Sabha was informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X