ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಮುಖ ಹೆದ್ದಾರಿಗಳಲ್ಲಿ ಶೀಘ್ರ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಕೇಂದ್ರ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್‌ 1: ನಗರದಲ್ಲಿ ಹಾಗೂ ಒಂದು ನಗರದಿಂದ ಇನ್ನೊಂದು ನಗರಗಳ ಮಧ್ಯೆ ವಿದ್ಯುತ್‌ ಚಾಲಿತ ವಾಹನಗಳ ಸಂಚಾರವನ್ನು ಹೆಚ್ಚಿಸುವ ಸಲುವಾಗಿ ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಘಟಕಗಳನ್ನು ಸ್ಥಾಪಿಸಲು ಚಿಂತನೆ ನಡೆದಿದೆ.

ಯೋಜನೆಯ ಅನುಷ್ಠಾನಕ್ಕಾಗಿ ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು-ಚೆನ್ನೈ ಹೆದ್ದಾರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಘಟಕಗಳನ್ನು ಆರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಘಟಕ ಆರಂಭಕ್ಕೆ ಬೇಕಾದ ಭೂಮಿ, ಸ್ಥಳ ಸಹಿತ ಪೂರ್ಣ ಮೂಲ ಸೌಲಭ್ಯ ಕಲ್ಪಿಸಲು ಬೇಕಾದ ಪೂರಕ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದೆ.

ಶೀಘ್ರದಲ್ಲೇ ಮಾಹಿತಿಯನ್ನು ಸಂಗ್ರಹಿಸಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಈಗಾಗಲೇ ಹಲವು ಉಪಕ್ರಮಗಳನ್ನು ಕೈಗೆತ್ತಿಕೊಂಡು ರಾಜ್ಯಗಳಿಗೆ ನೆರವು ನೀಡಿದೆ. ಇದೀಗ 40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ಒಂಭತ್ತು ನಗರಗಳನ್ನು ಆಯ್ಕೆ ಮಾಡಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಶೀಘ್ರ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಕೇಂದ್ರ ಆರಂಭ ಮೆಟ್ರೋ ನಿಲ್ದಾಣದಲ್ಲಿ ಶೀಘ್ರ ಎಲೆಕ್ಟ್ರಿಕ್‌ ವಾಹನ ಚಾರ್ಜಿಂಗ್‌ ಕೇಂದ್ರ ಆರಂಭ

ನವದೆಹಲಿ, ಮುಂಬೈ, ಬೆಂಗಳೂರು, ಕೊಲ್ಕತ್ತಾ, ಚೆನ್ನೈ, ಅಹಮದಾಬಾದ್‌, ಪೂನಾ, ಸೂರತ್‌ ಸೇರಿದಂತೆ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹೆದ್ದಾರಿಗಳಲ್ಲಿ ಮೂಲಸೌಕರ್ಯ ಒದಗಿಸಲು ನೆರವನ್ನು ಕೇಂದ್ರ ಇಂಧನ ಸಚಿವಾಲಯ ಒದಗಿಸಲಿದೆ.

ಬೆಸ್ಕಾಂನಿಂದ ಘಟಕಗಳಿಗೆ ವಿದ್ಯುತ್‌ ಸಂಪರ್ಕ

ಬೆಸ್ಕಾಂನಿಂದ ಘಟಕಗಳಿಗೆ ವಿದ್ಯುತ್‌ ಸಂಪರ್ಕ

ಬೆಂಗಳೂರು-ಮೈಸೂರು ಮಾರ್ಗದ ಬಹುತೇಕ ಪ್ರದೇಶ ಬೆಸ್ಕಾಂ ವ್ಯಾಪ್ತಿಗೆ ಒಳಪಡಲಿದೆ. ಮಂಡ್ಯದಿಂದ ಮೈಸೂರಿನ ವರೆಗಿನ ಪ್ರದೇಶ ಚಾಮುಂಡೇಶ್ವರಿ ಎಸ್ಕಾಂ ಒಳಪಡುವುದರಿಂದ ಆ ಭಾಗದಲ್ಲಿ ಮಾತ್ರ ಚೆಸ್ಕಾಂ ಹೊಣೆ ಹೊರಲಿದೆ. ಇದೇ ರೀತಿ ಬೆಂಗಳೂರು-ಹೊಸೂರು ಮಾರ್ಗದ ಗಡಿವರೆಗೆ ಬೆಸ್ಕಾಂ ನಂತರ ರಾಜ್ಯದ ಗಡಿಯಿಂದ ಚೆನ್ನೈವರೆಗೆ ತಮಿಳುನಾಡಿನ ವಿದ್ಯುತ್‌ ಸಂಪರ್ಕ ನಿಗಮಗಳು ಮೂಲಸೌಕರ್ಯ ಒದಗಿಸಲಿದೆ.

ಪ್ರತಿ 25 ಕಿ.ಮೀಗೆ ಒಂದು ಘಟಕ

ಪ್ರತಿ 25 ಕಿ.ಮೀಗೆ ಒಂದು ಘಟಕ

ಹೆದ್ದಾರಿಗಳಲ್ಲಿ ಪೆಟ್ರೋಲ್ ಬಂಕ್‌ ರೀತಿ ಎಲೆಕ್ಟ್ರಿಕ್‌ ಚಾರ್ಜಿಂಗ್ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಪ್ರತಿ 25 ಕಿ.ಮೀಗೆ ಒಂದರಂತೆ ಘಟಕ ಸ್ಥಾಪಿಸುವ ಪ್ರಸ್ತಾಪ ಇದೆ. ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಬೆಂಗಳೂರು-ಮೈಶೂರು ನಡುವೆ 140 ಕಿ.ಮೀ ಹಾಗೂ ಬೆಂಗಳೂರು-ಚೆನ್ನೈ ನಡುವೆ 345 ಕಿ.ಮೀ ಇದೆ.

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ

ಇದೀಗ 40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯಿರುವ ಒಂಭತ್ತು ನಗರಗಳ ಪಟ್ಟಿ ಮಾಡಲಾಗಿದೆ. ದೆಹಲಿ, ಮುಂಬೈ, ಕೋಲ್ಕತ್ತ, ಅಹಮದಾಬಾದ್‌, ಹೈದರಾಬಾದ್‌, ಚೆನ್ನೈ, ಬೆಂಗಳೂರುಟ ಹೀಗೆ ಆಯ್ಕೆ ಮಾಡಲಾಗಿದೆ. ಈ ಹೆದ್ದಾರಿಗಳಲ್ಲಿ ಮೂಲ ಸೌಕರ್ಯ ಒದಗಿಸಲು ಮುಂದಾಗಿದೆ.

ಬೆಸ್ಕಾಂ ಆವರಣದಲ್ಲಿ ಇ-ಚಾರ್ಜಿಂಗ್‌ ಸ್ಟೇಷನ್‌

ಬೆಸ್ಕಾಂ ಆವರಣದಲ್ಲಿ ಇ-ಚಾರ್ಜಿಂಗ್‌ ಸ್ಟೇಷನ್‌

ಬೆಸ್ಕಾಂನ ಮುಖ್ಯ ಕಚೇರಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಸ್ಥಾಪಿಸಲಾದ ಇ-ಚಾರ್ಜಿಂಗ್ ಕೇಂದ್ರಕ್ಕೆ ನೀರಸ ಪ್ರತಿಕ್ರಿಯೆ ಲಭ್ಯವಾಗಿದೆ. ಫೆಬ್ರವರಿ 10ರಂದು ಬೆಸ್ಕಾಂ ಪ್ರಾಯೋಗಿಕವಾಗಿ ಕೆಎಆರ್ ವೃತ್ತದ ಬಳಿ ಇರುವ ಮುಖ್ಯ ಕಚೇರಿ ಆರವಣದಲ್ಲಿ ಆರಂಭಿಸಲಾಗಿತ್ತು. ಇದುವರೆಗೆ ಕೇವಲ 15 ಕಾರುಗಳು ಮಾತ್ರ ಅಲ್ಲಿಗೆ ಬಂದು ರೀಚಾರ್ಜ್ ಮಾಡಿಸಿಕೊಂಡಿವೆ. ಬೆಸ್ಕಾಂನ ಮುಖ್ಯ ಕಚೇರಿಯಲ್ಲಿರುವ ಐದು ಕಾರುಗಳು ಮಾತ್ರ ನಿತ್ಯ ಅದನ್ನು ಬಳಕೆ ಮಾಡುತ್ತಿವೆ.

English summary
Central govt is planning to setup electric charging unit between the cities in highway. This is to promote electric vehicles in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X