ಎಸ್‌ ಟಿ ಸೋಮಶೇಖರ್ ಕಾಂಗ್ರೆಸ್ ಗೆ ಬರುವುದಕ್ಕೆ ಅನುದಾನ ಬಿಡುಗಡೆಯೇ? : ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

ರಾಮನಗರ, ಆಗಸ್ಟ್‌ 22: ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್‌ ಕಾಂಗ್ರೆಸ್‌ಗೆ ಹೋಗ್ತಾರೆ ಎಂಬ ಚರ್ಚೆ ಬೆನ್ನಲ್ಲೇ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಸರ್ಕಾರದಿಂದ ಬಂಪರ್‌ ಅನುದಾನ ನೀಡಿದ್ದು, ಕಾಂಗ್ರೆಸ್‌ ಗೆ ಬರುವುದಕ್ಕೆ ಈ ಅನುದಾನ ಬಿಡುಗಡೆಯಾಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ರಾಮನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮಗೂ ಕೂಡ ಹಣ ಬಿಡುಗಡೆಯಾಗಿದೆ. ಬಿಜೆಪಿ ಇದ್ದಾಗ ಕಾಂಗ್ರೆಸ್ ಶಾಸಕರಿಗೆ ಕಡಿಮೆ ಹಣ ಬಿಡುಗಡೆ ಮಾಡಿದ್ರೂ.
100 ರಲ್ಲಿ 10% ಕೊಡೋರು‌. ಈಗ ಸೋಮೇಶ್ವರ್ ಕೇಳಿದ್ದಾರೆ, ಅವರಿಗೂ ಹಣ ಕೊಟ್ಟಿದ್ದಾರೆ. ಚುನಾವಣೆಗಳನ್ನ ಪಕ್ಷದಿಂದ ಗೆಲ್ಲಲು ಆಗುವುದಿಲ್ಲ. ಪಕ್ಷದ ಜೊತೆ ವ್ಯಕ್ತಿತ್ವ ಬೇಕು. 1999 ರಲ್ಲಿ 166 ಸ್ಥಾನ ಬಂದಿತ್ತು. ಅದನ್ನ ಬಿಟ್ಟರೆ 135 ಸ್ಥಾನ ಬಂದಿರುವುದೇ ಈಗ. ಪಕ್ಷ ಹಾಗೂ ವ್ಯಕ್ತಿತ್ವ ಇದ್ರೆ ಮಾತ್ರ ಗೆಲ್ಲಲು ಸಾಧ್ಯ ಎಂದು ಹೇಳಿದರು.

Elections Cannot Be Won By A Party Said Transport Minister Ramalinga reddy

ಮಂಡ್ಯದಲ್ಲಿ ಕಾವೇರಿ ನೀರು ಪ್ರತಿಭಟನೆ ವಿಚಾರವಾಗಿ ಮಾತನಾಡಿ,ಕಾವೇರಿ ನೀರಿನ ವಿಚಾರದಲ್ಲಿ ಟ್ರಿಬಿನಲ್ ಇದೆ. ನಮ್ಮಲ್ಲಿ ಸಾಕಷ್ಟು ನೀರು ಇದ್ದಿದ್ರೆ ತಮಿಳುನಾಡಿಗೆ ಬಿಡಬಹುದಿತ್ತು. ನಾವು ಬಿಡುವುದಿಲ್ಲ ಎಂಬುದು ಕೂಡ ಕಷ್ಟ. ಟ್ರಿಬಿನಲ್ ನಿಯಮ ಫಾಲೋ ಮಾಡಬೇಕಾಗುತ್ತದೆ, ಕಳೆದ ಬಾರಿ ಸಾಕಷ್ಟು ಮಳೆಯಾಗಿತ್ತು. ನೂರಾರು ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಯ್ತು. ಈಗ ಮಳೆ ಇಲ್ಲ, ನೀರಿನ ಕೊರತೆ ಕೂಡ ಹೆಚ್ಚಿದೆ. KRS ಡ್ಯಾಂ ತುಂಬಿದ್ರೆ ಯಾವುದೇ ಸಮಸ್ಯೆ ಇರಲ್ಲ, ಮಳೆ ಬರಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದರು.

ಕನಕಪುರಕ್ಕೆ ಮೆಡಿಕಲ್ ಕಾಲೇಜು ವರ್ಗಾ ವಿಚಾರವಾಗಿ ಮಾತನಾಡಿ, ಡಿಸಿಎಂ ಡಿ ಕೆ ಶಿವಕುಮಾರ್‌ ಹಾಗೂ ಸಂಸದರು ಮೆಡಿಕಲ್ ಕಾಲೇಜು ಬಗ್ಗೆ ತಿರ್ಮಾನ ಮಾಡಿದ್ದಾರೆ. ಮುಂದೆ ಇನ್ನೋಂದು ಮೆಡಿಕಲ್ ಕಾಲೇಜ್‌ ನ ಇಲ್ಲಿಯೂ ಮಾಡೋಣ. ಮೆಡಿಕಲ್ ಕಾಲೇಜು ಜಿಲ್ಲೆಯ ಕೇಂದ್ರ ಸ್ಥಾನದಲ್ಲೇ ಇರಬೇಕು.ಆದರೆ, ಡಿ.ಕೆ. ಶಿವಕುಮಾರ್, ಸುರೇಶ್ ಅವರು ತಿರ್ಮಾನ ಮಾಡಿದ್ದಾರೆ. ನಾನು ಕೂಡ ಸಿಎಂ ಅವರಿಗೆ ಮನವಿ ಮಾಡುತ್ತೇನೆ. ಜಿಲ್ಲಾ ಕೇಂದ್ರಕ್ಕೂ ಒಂದು ಮೆಡಿಕಲ್ ಕಾಲೇಜು ಕೊಡಿ ಎನ್ನುತ್ತೇನೆ. ಮೆಡಿಕಲ್ ಕಾಲೇಜು, ಕ್ಯಾಂಪಸ್ ಒಂದೇ ಕಡೆ ಇರಬೇಕು. ಹೀಗಾಗಿ ಇನ್ನೊಂದು ಕಾಲೇಜು ಕೊಡಿ ಎಂದು ಸಿಎಂ ಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಕೆಎಸ್‌ಆರ್ಟಿಸಿ ಲಾರಿಗಳನ್ನ ಪರಿಚಯಿಸುತ್ತಿರೋ ವಿಚಾರವಾಗಿ ಮಾತನಾಡಿ, ನಮ್ಮಲ್ಲಿ ಡಿಕ್ಕಿ ಇದೆ. ಅದನ್ನ ಕಮರ್ಷಿಯಲ್ ನವರಿಗೆ ಕೊಡುತ್ತಿದ್ವಿ. ಅದರಿಂದ 4ಕೋಟಿ ಹಣ ಬರುತ್ತಿದೆ‌, ನಾವೇ ಮಾಡುತ್ತಿರುವುದರಿಂದ 30 ಕೋಟಿ ಹಣ ಬರುತ್ತಿದೆ‌. ಕೆಎಸ್‌ಆರ್‌ಟಿಸಿ ನೇ ಬೇರೆ ಇದೆ ಬೇರೆ ಎಂದರು.

ಎಸ್.ಟಿ. ಸೋಮಶೇಖರ್ ಕ್ಷೇತ್ರಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿರುವ ವಿಚಾರವಾಗಿ ಮಾತನಾಡಿ, ಅಭಿವೃದ್ಧಿ ಮಾಡಲು ಯಾವ ತೊಂದರೆ ಇಲ್ಲ. ನಮ್ಮಲ್ಲಿ ಸ್ಕೀಮ್ಸ್ ತಂದಿದ್ದೇವೆ. ಹೀಗಾಗಿ ಅಭಿವೃದ್ಧಿ ಮಾಡಲು ಹಣ ಇಲ್ಲ ಅಂತ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ನಾಲ್ಕು ವರ್ಷ ಬಿಜೆಪಿ ಅವರು ಏನು ಕಡಿದು ಕಟ್ಟೆ ಹಾಕಿದ್ರೂ. ಅವರು ಏನು ಮಾಡಿಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+