ಬಾದಾಮಿಯನ್ನು ಸಿದ್ದರಾಮಯ್ಯಗೆ ಚಿಮ್ಮನಕಟ್ಟಿ ಬಿಟ್ಟು ಕೊಟ್ಟಿದ್ದೇಕೆ?

Posted By:
Subscribe to Oneindia Kannada
   ಬಾದಾಮಿ ಕ್ಷೇತ್ರದಿಂದ ಸಿದ್ದು ಸ್ಪರ್ಧೆ | ಬಿ ಬಿ ಚಿಮ್ಮನಕಟ್ಟಿ ಮೌನ ಯಾಕೆ? | Oneindia Kannada

   ಬಾಗಲಕೋಟೆ, ಏಪ್ರಿಲ್ 12: ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆಗೆ ಕಾಂಗ್ರೆಸ್ ಹೈಕಮಾಂಡ್ ಓಕೆ ಎನ್ನುತ್ತಿದ್ದಂತೆ, ಕ್ಷೇತ್ರದಲ್ಲಿ ಬಿರುಸಿನ ಚಟುವಟಿಕೆಗಳು ಶುರುವಾಗಿವೆ. ಈ ಕ್ಷೇತ್ರದ ಹಾಲಿ ಶಾಸಕ, ಪ್ರಶ್ನಾತೀತ ಕಾಂಗ್ರೆಸ್ ನಾಯಕ ಬಿ.ಬಿ ಚಿಮ್ಮನಕಟ್ಟಿ ಅವರು ಒಲ್ಲದ ಮನಸ್ಸಿನಿಂದಲೇ ಸಿಎಂಗೆ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಬೇಕಾಗಿದೆ.

   ಎರಡು ಕ್ಷೇತ್ರಗಳಿಂದ ಸಿದ್ದರಾಮಯ್ಯ ಕಣಕ್ಕಿಳಿಯುವುದು ಖಾತ್ರಿ

   ನಾಲ್ಕು ದಶಕಗಳಿಂದ ಈ ಕ್ಷೇತ್ರದಲ್ಲಿ ತಮ್ಮ ತಮ್ಮ ಪ್ರಭಾವ ಉಳಿಸಿಕೊಂಡು ಬಂದಿದ್ದ ಬಿ. ಬಿ ಚಿಮ್ಮನಕಟ್ಟಿ ಅವರು ಈ ಅನಿವಾರ್ಯ ಪರಿಸ್ಥಿತಿ, ಅಭಿಮಾನಿಗಳ ಆಗ್ರಹಕ್ಕೆ ಮಣಿದು ಕಾಂಗ್ರೆಸ್ ಹೈಕಮಾಂಡ್ ಸಂಪರ್ಕಿಸಿ ತಮ್ಮ ಅಳಲು ತೋಡಿಕೊಂಡಿದ್ದು, ಅರಣ್ಯ ರೋದನದ್ದಂತಾಗಿದೆ.

   ಬಾದಾಮಿ ಕ್ಷೇತ್ರ ಪರಿಚಯ : ಸಿದ್ದರಾಮಯ್ಯ ಕ್ಷೇತ್ರದಿಂದ ಸ್ಪರ್ಧಿಸುವರೇ?

   ಇದೇ ನನ್ನ ಕೊನೆಯ ಚುನಾವಣೆ, ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎನ್ನುವ ಸಿದ್ದರಾಮಯ್ಯ ಅವರಿಗೆ ಈ ಬಾರಿ ಸೋಲಿನ ಭೀತಿ ಕಾಡುತ್ತಿದೆಯೆ? ಮುಖ್ಯಮಂತ್ರಿಯಾಗಿ ಹತ್ತು ಹಲವು ಜನಪ್ರಿಯ ಯೋಜನೆಗಳನ್ನು ಯಶಸ್ವಿಯಾಗಿ ಜನತೆ ಮುಂದಿಟ್ಟರೂ, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿರುವುದೇಕೆ? ರಾಜಕೀಯ ವೃತ್ತಿ ಬದುಕಿನ ಪರ್ವಕಾಲದಲ್ಲಿದ್ದರೂ ಸಿದ್ದರಾಮಯ್ಯ ಅವರ ಈ ನಡೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ಸ್ಥಳೀಯರ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಮುಂದಾಗಿರುವುದಾದರೂ ಏಕೆ? ಮಲ್ಲಿಕಾರ್ಜುನ ಖರ್ಗೆ ಬಣದ ಚಿಮ್ಮನಕಟ್ಟಿ ವಿರುದ್ಧ ಸಿದ್ದರಾಮಯ್ಯ ಅವರ ಸೇಡು ತೀರಿಸಿಕೊಳ್ಳುತ್ತಿದ್ದಾರೆಯೆ?

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

   ಚಿಮ್ಮನಕಟ್ಟಿ ಜತೆ ಸಂಧಾನ ಸಭೆ

   ಚಿಮ್ಮನಕಟ್ಟಿ ಜತೆ ಸಂಧಾನ ಸಭೆ

   ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಬಿ.ಬಿ.ಚಿಮ್ಮನಕಟ್ಟಿ, ನಿವೃತ್ತ ವಿಧಾನಸಭೆ ಕಾರ್ಯದರ್ಶಿ ಕುಳಗೇರಿ, ಡಾ.ದೇವರಾಜ್ ಪಾಟೀಲ್, ಕಿತ್ತಲಿ, ಸಚಿವ ಎಚ್ ಎಂ ರೇವಣ್ಣ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಎಸ್.ಆರ್.ಪಾಟೀಲ್ ಸೇರಿದಂತೆ ಇತರೆ ಮುಖಂಡರು ಸಿಎಂ ಜತೆಗಿನ ಸಭೆಯಲ್ಲಿ ಭಾಗಿಯಾಗಿದ್ದರು. ಅಂತಿಮವಾಗಿ ಸಿದ್ದರಾಮಯ್ಯ ಅವರು ಏಪ್ರಿಲ್ 24ರಂದು ಬಾದಾಮಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಸುದ್ದಿ ಬಂದಿದೆ.

   ಯಾವುದೇ ಷರತ್ತಿಲ್ಲದೆ ನಾನು ನನ್ನ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದೇನೆ, ಸಿದ್ದರಾಮಯ್ಯ್ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಚಿಮ್ಮನಕಟ್ಟಿ ಕೂಡಾ ಘೋಷಿಸಿದ್ದಾರೆ.

   ಬಾದಾಮಿ ಕ್ಷೇತ್ರ ಆಯ್ಕೆಮಾಡಿಕೊಂಡಿದ್ದೇಕೆ?

   ಬಾದಾಮಿ ಕ್ಷೇತ್ರ ಆಯ್ಕೆಮಾಡಿಕೊಂಡಿದ್ದೇಕೆ?

   ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರವಲ್ಲದೆ, ರಾಜ್ಯದ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿತ್ತು. ಸಕಲೇಶಪುರ, ಬೆಂಗಳೂರಿನ ಯಾವುದಾದರೂ ಕ್ಷೇತ್ರ ಸುಲಭವಾಗಿ ಗೆಲುವಿನ ನಿರೀಕ್ಷೆ ತಂದುಕೊಡುತ್ತಿತ್ತು. ಆದರೆ, ಕಾಂಗ್ರೆಸ್ಸಿನ ಆಂತರಿಕ ಸಮೀಕ್ಷೆಯಂತೆ ಕುರುಬ ಜನಾಂಗದ ಮತಗಳು ನಿರ್ಣಾಯಕ ಎನ್ನುವ ಕ್ಷೇತ್ರವನ್ನು ಪಟ್ಟಿ ಮಾಡಲಾಯಿತು. ಈ ಪೈಕಿ ಬಾದಾಮಿಯನ್ನು ಆಯ್ಕೆ ಮಾಡಲಾಯಿತು. ಬಿ.ಬಿ ಚಿಮ್ಮನಕಟ್ಟಿ ಅವರಿಗೆ ಅನಾರೋಗ್ಯದ ಕಾರಣ ಟಿಕೆಟ್ ನಿರಾಕರಿಸಲು ಹೈಕಮಾಂಡ್ ಚಿಂತನೆ ನಡೆಸಿತ್ತು. ಮಿಕ್ಕಂತೆ ಡಾ.ದೇವರಾಜ ಪಾಟೀಲ್, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಸೇರಿದಂತೆ ಹಲವಾರು ಮಂದಿ ಟಿಕೆಟ್ ರೇಸ್‌ನಲ್ಲಿದ್ದರು.

   2013ರಲ್ಲಿ ಸಿದ್ದರಾಮಯ್ಯ ಅವರ ಹಿಡಿತ ತಪ್ಪಿತ್ತು

   2013ರಲ್ಲಿ ಸಿದ್ದರಾಮಯ್ಯ ಅವರ ಹಿಡಿತ ತಪ್ಪಿತ್ತು

   2013ರಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬಣದ ದೇವರಾಜ ಪಾಟೀಲ್ ರನ್ನು ಬಾದಾಮಿಯಿಂದ ಕಣಕ್ಕಿಳಿಸಲು ಮುಂದಾಗಿದ್ದರು. ದೇವರಾಜ್ ಗೆ ಟಿಕೆಟ್ ಎಂದು ಘೋಷಿಸಲಾಗಿತ್ತು. ಆದರೆ, ಚಿಮ್ಮನಕಟ್ಟಿ ಅವರು ಹೋರಾಟ ಮಾಡಿ, ಹೈಕಮಾಂಡ್ ನಾಯಕರ ಮನ ಓಲೈಸಿ, ಕೊನೆ ಕ್ಷಣದಲ್ಲಿ ಬಿ ಫಾರಂ ಪಡೆದು, ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಅಂದಿನಿಂದ ಇಂದಿನ ತನಕ ಸಿದ್ದರಾಮಯ್ಯ ಹಾಗೂ ಚಿಮ್ಮನಕಟ್ಟಿ ನಡುವೆ ಶೀತಲ ಯುದ್ಧ ನಡೆಯುತ್ತಲೇ ಇದೆ.

   2013ರ ಫಲಿತಾಂಶ

   2013ರ ಫಲಿತಾಂಶ

   * ಬಿ.ಬಿ.ಚಿಮ್ಮನಕಟ್ಟಿ : 57,103
   * ಮಹಾಂತೇಶ ಮಮದಾಪೂರ (ಜೆಡಿಎಸ್) : 41,957
   * ಎಂ.ಕೆ.ಪಟ್ಟಣ ಶೆಟ್ಟಿ (ಬಿಜೆಪಿ) : 30,143

   ***

   * 10 ಮಂದಿ ನಾಮಪತ್ರ ಸಲ್ಲಿಸಿದ್ದರು, 2 ನಾಮಪತ್ರ ಹಿಂಪಡೆದರು, 8 ಮಂದಿ ಸ್ಪರ್ಧಿಸಿದ್ದರು ಈ ಪೈಕಿ ಐವರು ಠೇವಣಿ ಕಳೆದುಕೊಂಡರು.
   * ಒಟ್ಟು ಶೇ 70.71ರಷ್ಟು ಮತದಾನವಾಗಿತ್ತು. 139071 ಮತಗಳ ಪೈಕಿ ಕಾಂಗ್ರೆಸ್ಸಿನ ಚಿಮ್ಮನಕಟ್ಟಿ ಬಾಳಪ್ಪ ಭೀಮಪ್ಪ 57446 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದರು. ಜೆಡಿಎಸ್ ನ ಮಹಾಂತೇಶ್ ಗುರುಪಾದಪ್ಪ ಮಾಮದಪುರ್ 42333 ಮತಗಳಿಸಿ ಸೋಲು ಅನುಭವಿಸಿದರು. 15113ಮತಗಳ (ಶೇ10.87) ಅಂತರದಿಂದ ಚಿಮ್ಮನಕಟ್ಟಿ ಜಯ ದಾಖಲಿಸಿದರು. ಬಿಜೆಪಿಯ ಎಂ.ಕೆ ಪಟ್ಟಣಶೆಟ್ಟಿ 30143 ಮತಗಳಿಸಿ ಮೂರನೇ ಸ್ಥಾನ ಗಳಿಸಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Elections 2018: Congress high command suggested Chief Minister Siddaramaiah to contest from Badami Assembly seat in Bagalkot district. Sitting MLA and popular leader in this region B.B Chimmanakatti is very keen to contest and forced to leave his home constituency to Sidddaramaiah.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ