Sringeri: ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ಹೊಸ ಶಾಸಕ - ನೀವು ತಿಳಿಯಬೇಕಾದ 5 ವಿಷಯಗಳು

Sringeri: ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದಿರುವ ಸಂಭ್ರಮದಲ್ಲಿರುವಾಗಲೇ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ಎದುರಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಾಕ್ ಎದುರಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಹಾಲಿ ಶಾಸಕ ರಾಜೇಗೌಡ ಅವರು ಸೋತಿದ್ದು, ಬಿಜೆಪಿಯ ಜೀವರಾಜ್ ಅವರು ಹೆಚ್ಚು ಮತ ಗಳಿಸಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಹಾಗೂ ಶಾಸಕರ ಬದಲಾವಣೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ಮುಖ್ಯ ಅಂಶಗಳು ಇಲ್ಲಿದೆ.

1. ಶೃಂಗೇರಿ ವಿಧಾನಸಭಾ ಕ್ಷೇತ್ರ ಚುನಾವಣೆ ಅಂಚೆ ಮತಗಳ ಪಾತ್ರವೇನು

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲ ಬೆಳವಣಿಗೆಗಳಿಗೆ ಮುಖ್ಯ ಕಾರಣ ಈ ಕ್ಷೇತ್ರದಲ್ಲಿ ಚಲಾವಣೆಯಾದ ಅಂಚೆ ಮತಗಳ ವಿಷಯದಲ್ಲಿ ಸೃಷ್ಟಿಯಾಗಿದ್ದ ಗೊಂದಲ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜೇಗೌಡ ಅವರು 59171 ಮತ ಪಡೆದು ಗೆದಿದ್ದರು. ಬಿಜೆಪಿಯ ಜೀವರಾಜ್ ಅವರು 58970 ಮತಗಳಿಸಿದ್ದರು. ಗೆಲುವಿನ ಅಂತರವು 201 ಮತಗಳಾಗಿವೆ. ಆ ಸಂದರ್ಭದಲ್ಲಿ ಚಲಾವಣೆ ಆದ ಅಂಚೆ ಮತಗಳು 1822.ಇದರಲ್ಲಿ ಜೀವರಾಜ್ 692 ಮಾತ ಪಡೆದರೆ ರಾಜೇಗೌಡ 569 ಮತ ಗಳಿಸಿದ್ದರು. ಅಲ್ಲದೆ 279 ಮತಗಳು ತಿರಸ್ಕೃತವಾಗಿತ್ತು.

Sringeri

2. ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಯಾಕೆ

2023ನೇ ಸಾಲಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ರಾಜೇಗೌಡ ಅವರು ಬಿಜೆಪಿಯ ಜೀವರಾಜ್ ಅವರು ಸ್ಪರ್ಧೆ ಮಾಡಿದ್ದರು. ಅಂಚೆ ಮತಗಳ ಎಣಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಗೆಲುವಿನ ಅಂತರವು ತಿರಸ್ಕೃತ ಮತಗಳಿಗಿಂತ ಕಡಿಮೆಯಾಗಿದ್ದರೆ, ಮರು ಎಣಿಕೆ ಕೇಳುವುದಕ್ಕೆ ಅವಕಾಶವಿದೆ. ಜೀವರಾಜ್ ಅವರ ಪರ ಚುನಾವಣಾ ಏಜೆಂಟರು ಮರು ಎಣಿಕೆ ಕೇಳಿದ್ದರು. ಚುನಾವಣಾಧಿಕಾರಿ ನಿಯಮ ಮೀರಿ ಅದನ್ನು ತಿರಸ್ಕರಿಸಿ ರಾಜೇಗೌಡ ವಿಜೇತ ಅಭ್ಯರ್ಥಿ ಎಂದು ಘೋಷಿಸಿದ್ದರು ಎನ್ನುವ ಆರೋಪವಿದೆ.

3. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಈ ಬೆಳವಣಿಗೆಯ ವಿರುದ್ಧ ಪರಾಜಿತ ಅಭ್ಯರ್ಥಿ ಜೀವರಾಜ್ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ವಿಚಾರಣೆಯನ್ನೇ ನಡೆಸದೆ ವಜಾ ಮಾಡಬೇಕು ಎಂದು ರಾಜೇಗೌಡ ಅವರು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು. ವಾದ - ವಿವಾದ ನಡೆದು ನ್ಯಾಯಾಲಯ ವಿಚಾರಣೆ ನಡೆಸಲು ತೀರ್ಮಾನಿಸಿತ್ತು. ಅಲ್ಲದೆ ಹೈಕೋರ್ಟ್‌ನ ಈ ತೀರ್ಮಾನವನ್ನು ರಾಜೇಗೌಡರು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದ ಮೇಲೆ ಈ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

4. ರಾಜೇಗೌಡರ ಗೆಲುವು ಎಂದು ಸಂಭ್ರಮ

ಇನ್ನು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ಮರು ಎಣಿಕೆಗೆ ನ್ಯಾಯಾಲಯ ಆದೇಶಿಸಿತು. ಈ ತೀರ್ಪಿನ ವಿರುದ್ಧ ರಾಜೇಗೌಡ ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಮತ್ತೆ ವಿಚಾರಣೆ ನಡೆದು ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ಕಳೆದ ಏಪ್ರಿಲ್ 6 ರಂದು ಮರು ಎಣಿಕೆ ಆದೇಶಕ್ಕೆ ರಾಜೇಗೌಡರು 2 ವಾರಗಳ ತಡೆಯಾಜ್ಞೆ ತಂದಿದ್ದರು. ತಡೆಯಾಜ್ಞೆ ಅವಧಿ ಮುಗಿದ ನಂತರ ಮೇ 2 ರಂದು ಮರು ಎಣಿಕೆ ಚಿಕ್ಕಮಗಳೂರಿನಲ್ಲಿ ನಡೆಯಿತು. ಜೀವರಾಜ್ ಪಡೆದ ಮತಗಳ ಎಣಿಕೆ ನಡೆದಾಗ ಅವರ ಎರಡು ಮತಗಳು ತಿರಸ್ಕೃತವಾಯಿತು. ಇದನ್ನು ರಾಜೇಗೌಡರ ಗೆಲುವು ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಸಹ ಮಾಡಿದ್ದರು.

ಆಗ ತಿರಸ್ಕೃತ ಆದ ಮತಗಳು ಈ ಬಾರಿಯೂ ತಿರಸ್ಕೃತ ಆಯಿತು. ಈ ಮತಗಳಿಗೆ ಘೋಷಣಾ ಪತ್ರ ಆಥವಾ ಅಧಿಕಾರಿಗಳ ಪ್ರಮಾಣ ಪತ್ರ ಇರದೇ ತಿರಸ್ಕೃತ ಆಗಿದ್ದವು. ಚುನಾವಣೆ ನಡೆಯುವಾಗಲೇ ವಿರೋಧಿಗೆ ಬೀಳಬಹುದೆಂದು ಊಹೆಯ ಮತಗಳನ್ನು ಹೀಗೆ ತಿರಸ್ಕೃತವಾಗುವಂತೆ ನೋಡಿಕೊಳ್ಳಲು ಪ್ರಯತ್ನ ನಡೆದಿತ್ತೇ ಎನ್ನುವ ಸಂಶಯಕ್ಕೆ ಇದು ದಾರಿ ಮಾಡಿಕೊಟ್ಟಿತ್ತು.

DK Shivakumar: ಬೆಂಗಳೂರು ಅಭಿವೃದ್ಧಿಗೆ 3 ವರ್ಷದಿಂದ ಪ್ರಯತ್ನಿಸುತ್ತಿದ್ದೇವೆ, ಈ ಕೆಲಸ ಮಾಡಲಿದ್ದೇವೆ: ಡಿ.ಕೆ ಶಿವಕುಮಾರ್‌
DK Shivakumar: ಬೆಂಗಳೂರು ಅಭಿವೃದ್ಧಿಗೆ 3 ವರ್ಷದಿಂದ ಪ್ರಯತ್ನಿಸುತ್ತಿದ್ದೇವೆ, ಈ ಕೆಲಸ ಮಾಡಲಿದ್ದೇವೆ: ಡಿ.ಕೆ ಶಿವಕುಮಾರ್‌

5. ಮರು ಎಣಿಕೆಯಲ್ಲಿ255 ಮತ ಕಳೆದುಕೊಂಡ ರಾಜೇಗೌಡರು

ಇಷ್ಟೆಲ್ಲ ಸುದೀರ್ಘ ಪ್ರಕ್ರಿಯೆಯ ನಂತರ ರಾಜೇಗೌಡ ಅವರು ಮತ ಪರಿಶೀಲನೆ ಮಾಡಿದಾಗ ಹೊಸತಾಗಿ 255 ಮತ ತಿರಸ್ಕೃತವಾಯಿತು.ಈ ಮತಪತ್ರದಲ್ಲಿ ಮತದಾರರು ಇಬ್ಬರಿಗೆ ಮತ ಚಲಾಯಿಸಿದ್ದರು, ಆದರೂ ಈ ತಿರಸ್ಕೃತ ಮತಗಳನ್ನು ಸೇರಿಸಿ ರಾಜೇಗೌಡ ಅವನ್ನು ವಿಜಯಿ ಎಂದು ಘೋಷಣೆ ಮಾಡಲಾಗಿತ್ತು. ಮರು ಎಣಿಕೆಯಲ್ಲಿ 255 ಮತ ಕಳೆದುಕೊಂಡ ರಾಜೇಗೌಡರು 52 ಮತಗಳಿಂದ ಸೋಲು ಅನುಭವಿಸಿರು. ಮೇ 4ಕ್ಕೆ ಜೀವರಾಜ್ ಅವರು ಚುನಾವಣಾ ಆಯೋಗದ ಪ್ರಮಾಣ ಪತ್ರ ಪಡೆದುಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+