ಶಿವಮೊಗ್ಗದಿಂದ ಈಶ್ವರಪ್ಪ ಸ್ಪರ್ಧೆ, ಇದು ರಾಯಣ್ಣ ಬ್ರಿಗೇಡ್ ಬೇಡಿಕೆ
ಬೆಂಗಳೂರು, ಫೆಬ್ರವರಿ 23: ಸಂಗೊಳ್ಳಿರಾಯಣ್ಣ ಬ್ರಿಗೇಡ್ ನ ಚಟುವಟಿಕೆಗಳು ಮತ್ತೆ ಆರಂಭಗೊಂಡಿದೆ. ರಾಯಣ್ಣ ಬ್ರಿಗೇಡ್ ನ ರಾಜ್ಯಾಧ್ಯಕ್ಷ ಕೆ. ವಿರುಪಾಕ್ಷಪ್ಪ ನೇತೃತ್ವದಲ್ಲಿ ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದರು.
ಸಭೆ ಬಳಿಕ ರಾಜ್ಯ ಬಿಜೆಪಿ ಪ್ರಭಾರಿ ಪಿ ಮುರಳೀಧರ ರಾವ್ ಅವರನ್ನು ಬ್ರಿಗೇಡ್ ಸದಸ್ಯರು ಭೇಟಿ ಮಾಡಿ ತಮ್ಮ ಬೇಡಿಕೆ ಸಲ್ಲಿಸಿದ್ದಾರೆ.
ಸುಮಾರು 21 ಅಸೆಂಬ್ಲಿ ಕ್ಷೇತ್ರಗಳಿಗೆ ಬ್ರಿಗೇಡ್ ವತಿಯಿಂದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಶಿವಮೊಗ್ಗದಿಂದ ಕೆಎಸ್ ಈಶ್ವರಪ್ಪ ಅವರ ಹೆಸರು ಅಂತಿಮಗೊಳಿಸಲಾಗಿದೆ.

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಈಶ್ವರಪ್ಪ ಅವರ ಬದಲಿಗೆ ಪಕ್ಷದ ಜಿಲ್ಲಾಧ್ಯಕ್ಷ ರುದ್ರೇಗೌಡ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ, ಈಗ ಅಂತಿಮವಾಗಿ ಕೆಎಸ್ ಈಶ್ವರಪ್ಪ ಅವರಿಗೆ ಟಿಕೆಟ್ ಅಂತಿಮವಾಗಿದೆ.
ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು, ಭಿನ್ನಮತಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಖಡಕ್ ಸೂಚನೆ ನೀಡಿದ್ದಾರೆ. ಅದರಂತೆ, ಮುರಳೀಧರ ರಾವ್ ಅವರು ರಾಯಣ್ಣ ಬ್ರಿಗೇಡ್ ನ ಪ್ರಮುಖರನ್ನು ಕರೆಸಿಕೊಂಡು ಮಾತನಾಡಿಸಿ, ಅವರ ಬೇಡಿಕೆ ಪಟ್ಟಿ ಸ್ವೀಕರಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಹಿಂದುಳಿದ ವರ್ಗದವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವರದಿಗಳು ಸುಳ್ಳು. ಸಮೀಕ್ಷೆ ಆಧಾರಿಸಿ ಟಿಕೆಟ್ ನೀಡಲಾಗುತ್ತಿದೆ. ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದವಿಲ್ಲ ಎಂದು ಮುರಳೀಧರ ರಾವ್ ಹೇಳಿದ್ದಾರೆ.

ಟಿಕೆಟ್ ಆಕಾಂಕ್ಷಿಗಳ ಪಟ್ಟಿ:
* ಕೆಎಸ್ ಈಶ್ವರಪ್ಪ (ಶಿವಮೊಗ್ಗ)
* ಕೆ ವಿರೂಪಾಕ್ಷಪ್ಪ (ಸಿಂಧನೂರು)
* ಪದ್ಮಾಕರ ಪಾಟೀಲ್ (ಹುಮ್ನಾಬಾದ್)
* ಪುಟ್ಟಸ್ವಾಮಿ (ಅರಕಲಗೂಡು)
* ವೆಂಕಟೇಶಮೂರ್ತಿ (ಪದ್ಮನಾಭನಗರ)
* ಸೋಮಶೇಖರ್ (ಚಿಕ್ಕಪೇಟೆ)
* ದೊಡ್ಡಯ್ಯ (ಬೆಂಗಳೂರು ದಕ್ಷಿಣ)
* ಡಿ ಭೀಮಣ್ಣ ಮೇಟಿ (ಯಾದಗಿರಿ)
* ಸುಬ್ಬಣ್ಣ (ಗುರಮಿಠಕಲ್)
* ಧರ್ಮಣ್ಣ (ಜೇವರ್ಗಿ)












Click it and Unblock the Notifications