ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಡ್ಲಿಗಿಯ 'ಹಳೆ ಹುಲಿ' ಬೊಮ್ಮಣ್ಣ, ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ

By ಜಿಎಂ ರೋಹಿಣಿ, ಬಳ್ಳಾರಿ
|
Google Oneindia Kannada News

ಬಳ್ಳಾರಿ, ಮಾರ್ಚ್. 03: ಎನ್.ಟಿ. ಬೊಮ್ಮಣ್ಣ- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 'ಹಳೆಯ ಹುಲಿ’. ಚುನಾವಣಾ ಕಣದಲ್ಲಿ ಅನುಭವಿ. ಜನಸೇವೆ, ಶಿಕ್ಷಣ ಸಂಸ್ಥೆ, ಜನಪರ ಹೋರಾಟಗಳ ಮೂಲಕ ಮನೆ ಮಾತಾಗಿರುವ ಎನ್.ಟಿ. ಬೊಮ್ಮಣ್ಣ, ರಾಜಕೀಯದಲ್ಲಿ ಏಳುಬೀಳುಗಳನ್ನು ಅನುಭವಿಸಿದವರು. ಸೋಲು - ಗೆಲುವನ್ನು ಸಮಾನ ಮನಸ್ಕರಾಗಿ ಸ್ವೀಕರಿಸಿದ್ದ ಇವರು, ಕಾಂಗ್ರೆಸ್, ಬಿಜೆಪಿ ಕದ ತಟ್ಟಿ, ಜೆಡಿ(ಎಸ್) ನೊಗ ಹೊತ್ತಿದ್ದಾರೆ.

ಅದು, ಬಳ್ಳಾರಿ ಜಿಲ್ಲೆ ಕಾಂಗ್ರೆಸ್‍ನ ಭದ್ರಕೋಟೆ ಆಗಿದ್ದ ಕಾಲ. 1983 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋಲನುಭವಿಸಿದ್ದರು.

ಆದರೆ, ಕ್ಷೇತ್ರದ ಜನರು 1985ರ ಚುನಾವಣೆಯಲ್ಲಿ ಕೈಹಿಡಿದು, ಬೆಂಬಲ ನೀಡಿ ಗೆಲ್ಲಿಸಿದರು. 74ರ ಹರೆಯದಲ್ಲಿಯೂ ಯುವಕರನ್ನು ನಾಚಿಸುವಂಥ ಹೋರಾಟದ ಮತ್ತು ಜನಸೇವೆಯ ಕಿಚ್ಚನ್ನು ಹೊಂದಿರುವ ಬೊಮ್ಮಣ್ಣ, ಸದ್ಯಕ್ಕೆ ಜೆಡಿಎಸ್‍ನ ಜಿಲ್ಲೆಯ ಅಚ್ಚುಮೆಚ್ಚಿನ ಕ್ಯಾಂಡಿಡೇಟ್!.

ಎಲೆಕ್ಷನ್ flashback : 'ಇಂದಿರಾಕಟ್ಟೆ' ಪಕ್ಕದಲ್ಲೇ ರಾಹುಲ್ ಭಾಷಣಎಲೆಕ್ಷನ್ flashback : 'ಇಂದಿರಾಕಟ್ಟೆ' ಪಕ್ಕದಲ್ಲೇ ರಾಹುಲ್ ಭಾಷಣ

ಸಹೋದರ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಅನುಭವಿಸಿದ್ದ ಸೋಲನ್ನೇ ಗೆಲುವಿನ ಮೆಟ್ಟಿಲಾಗಿ, ಸ್ಪೂರ್ತಿಯಾಗಿ ಪರಿಗಣಿಸಿ, ಕೊಟ್ಟೂರು ಪಟ್ಟಣದಿಂದ ನರಸಿಂಹಗಿರಿಗೆ ಕಾಲ್ನಡಿಗೆಯಲ್ಲೇ ಹೋಗಿದ್ದರು.

ತಾಲೂಕು ಬೋರ್ಡ್ ಮಂಡಲಿ ಸದಸ್ಯರಾಗಿ ಇವರು ಮಾಡಿದ ಮೊದಲ ಕೆಲಸವೂ ಕೊಟ್ಟೂರು - ನರಸಿಂಹಗಿರಿ ರಸ್ತೆ ರಿಪೇರಿ. ತಮ್ಮ ಚುನಾವಣಾ ರಾಜಕೀಯದ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟ ಬೊಮ್ಮಣ್ಣ ಹೇಳಿಕೊಂಡಿದ್ದೇನು? ಮುಂದೆ ಓದಿ...

ಎನ್.ಟಿ. ಬೊಮ್ಮಣ್ಣ- ಕೂಡ್ಲಿಗಿ ಕ್ಷೇತ್ರದ 'ಹಳೆಯ ಹುಲಿ’

ಎನ್.ಟಿ. ಬೊಮ್ಮಣ್ಣ- ಕೂಡ್ಲಿಗಿ ಕ್ಷೇತ್ರದ 'ಹಳೆಯ ಹುಲಿ’

ಎನ್.ಟಿ. ಬೊಮ್ಮಣ್ಣ- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 'ಹಳೆಯ ಹುಲಿ'. ಚುನಾವಣಾ ಕಣದಲ್ಲಿ ಅನುಭವಿ. ಜನಸೇವೆ, ಶಿಕ್ಷಣ ಸಂಸ್ಥೆ, ಜನಪರ ಹೋರಾಟಗಳ ಮೂಲಕ ಮನೆ ಮಾತಾಗಿರುವ ಎನ್.ಟಿ. ಬೊಮ್ಮಣ್ಣ, ರಾಜಕೀಯದಲ್ಲಿ ಏಳುಬೀಳುಗಳನ್ನು ಅನುಭವಿಸಿದವರು

ಓದಿದ್ದು ಐದನೇ ಕ್ಲಾಸ್. ಕೃಷಿ ಕುಟುಂಬ. ಮೇಲ್ಜಾತಿಯ ಪ್ರಾಭಲ್ಯದಲ್ಲಿ ಎಸ್ಟಿ ಜನಾಂಗದ ಜನಾಂಗದ ಮಾಸ್ ಲೀಡರ್ ಆಗಿ ಬೆಳೆದದ್ದೂ ಇತಿಹಾಸ. ಕೂಡ್ಲಿಗಿ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‍ನ ಪ್ರಭಾವಿ ಮುಖಂಡ. ಮಾಜಿ ಶಾಸಕ. ಹೀಗೇ ಲೋಕಾಭಿರಾಮವಾಗಿ ಮಾತಿಗಿಳಿದಾಗ ಅವರು ಹೇಳಿದ್ದು ಹೀಗೆ;

1978ರಲ್ಲಿ ಬೋರ್ಡ್ ಸದಸ್ಯನಾಗಿ ಆಯ್ಕೆ

1978ರಲ್ಲಿ ಬೋರ್ಡ್ ಸದಸ್ಯನಾಗಿ ಆಯ್ಕೆ

ನನ್ನಣ್ಣ ತಾಲೂಕು ಬೋರ್ಡ್ ಸದಸ್ಯ. 1978ರ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರು. ಆಗ, ಸ್ಪರ್ಧೆಯ ಅವಕಾಶ ಸಹಜವಾಗಿಯೇ ನನಗೆ ಬಂತು. ಜನರ ಬೆಂಬಲ, ಆಶೀರ್ವಾದದಂತೆ ಅವರ ಒತ್ತಾಸೆಯ ಪ್ರಕಾರ ನಾನು, ಬೋರ್ಡ್ ಸದಸ್ಯನಾಗಿ ಆಯ್ಕೆ ಆದೆ. ಅಣ್ಣನ ಗರಡಿಯಲ್ಲೇ ರಾಜಕೀಯದ ತಾಲೀಮು ನಡೆಸಿದ್ದು. ಅಣ್ಣನ ಆಡಳಿತದ ಪ್ರಭಾವ, ಯುವ ನಾಯಕತ್ವದ ಸಾಮರ್ಥ್ಯಗಳ ಕಾರಣ ತಾಲೂಕು ಬೋರ್ಡ್ ನ ಅಧ್ಯಕ್ಷನೂ ಆಗಿ ಆಯ್ಕೆ ಆದೆ.

ಪ್ರಭಾವಿ ಯುವ ನಾಯಕನಾಗಿ

ಪ್ರಭಾವಿ ಯುವ ನಾಯಕನಾಗಿ

ತಾಲೂಕು ಬೋರ್ಡ್ ಅಧ್ಯಕ್ಷನಾಗಿ ನಡೆಸಿದ ಆಡಳಿತದ ಕಾರಣ ಕಾಂಗ್ರೆಸ್ ಪಕ್ಷದ ವಲಯದಲ್ಲಿ ಪ್ರಭಾವಿ ಯುವ ನಾಯಕನಾಗಿ ಬೆಳೆಯತೊಡಗಿದ್ದೆ. ಪಕ್ಷ ನನ್ನ ಬದ್ಧತೆಯನ್ನು ಗುರುತಿಸಿತ್ತು. 1983ರ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಪಕ್ಷದ ಬಿ ಫಾರಂ ನನ್ನ ಕೈಗೆ ಸಿಕ್ಕಾಗ ಆದ ಸಂತೋಷ ಅಷ್ಟಿಷ್ಟಲ್ಲ. ಸ್ಪರ್ಧಿಸಿದ್ದೆ, ಗೆದ್ದೆ.

ಪಾಠ ಕಲಿಸಿತು

ಪಾಠ ಕಲಿಸಿತು

ಈಗಿನಂತೆ ಸ್ಪರ್ಧೆಗೆ ನಾನು ಅರ್ಜಿ ಹಿಡಿದು, ಮುಖಂಡರ ಬಳಿ ಹೋಗಿರಲಿಲ್ಲ. ಚುನಾವಣೆಯಲ್ಲಿ 402 ಮತಗಳ ಅಂತರದಲ್ಲಿ ಸೋಲನುಭವಿಸಿದ್ದೆ. ರೀ ಕೌಟಿಂಗ್‍ಗೆ ಅರ್ಜಿ ಹಾಕುವ ಬದಲು, ನನ್ನ ಏಜೆಂಟ್ ಮಲ್ಲಪ್ಪ ರೀ ಟೋಟಲಿಂಗ್‍ಗೆ ಅರ್ಜಿ ಹಾಕಿದ್ದ. ಈ ತಾಂತ್ರಿಕ ಕಾರಣಕ್ಕಾಗಿ ಸೋಲನುಭವಿಸಿದ್ದೆ. ತುಂಬಾ ಬೇಸರದಲ್ಲೇ ಮನೆಗೆ ಹೋಗಿದ್ದೆ. ಗೆಲ್ಲುವ ಅವಕಾಶವನ್ನು ಕೈಚೆಲ್ಲಿದ್ದಕ್ಕೆ ಬೇಸರಗೊಂಡಿದ್ದೆ. ಇದು ನನಗೆ ಒಂದು ಪಾಠವಾಗಿತ್ತು.

ನನ್ನನ್ನು ಪುನಃ ಚುನಾವಣೆ ಕಣಕ್ಕಿಳಿದೆ

ನನ್ನನ್ನು ಪುನಃ ಚುನಾವಣೆ ಕಣಕ್ಕಿಳಿದೆ

ಆದರೆ, ಮುಂದಿನ ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಛಲ ಮೂಡಿ, ಕ್ಷೇತ್ರದ ಮತದಾರರ ಜೊತೆ ನಿರಂತರ ಸಂಪರ್ಕ ಹೊಂದಿದ್ದೆ. ಮೇಲ್ವರ್ಗದ ಮತದಾರರ ಜೊತೆ ಜೊತೆಯಲ್ಲಿ ಹಿಂದುಳಿದ ವರ್ಗದ ಮುಖಂಡರನ್ನೂ ಸಂಪರ್ಕ ಮಾಡುತ್ತಿದ್ದೆ. ನನ್ನ ಕನಸು, ಸೋತ ಅನುಭವ, ಗೆಲ್ಲಲೇ ಬೇಕು ಎನ್ನುವ ಅದಮ್ಯ ಛಲಗಳು ನನ್ನನ್ನು ಪುನಃ ಚುನಾವಣೆ ಕಣಕ್ಕಿಳಿಸಿ, ಮತದಾರರ ಬೆಂಬಲದಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನ ಭದ್ರಕೋಟೆ ಆಗಿದ್ದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ನನ್ನ ಕೈ ಹಿಡಿದು, ಕಾಂಗ್ರೆಸ್ಸಿಗೆ ಗೆಲುವು ನೀಡಿತ್ತು.

ನನ್ನನ್ನು ಕಣಕ್ಕಿಳಿಸಲು ಎಚ್ಡಿಕೆ ಒಲವು

ನನ್ನನ್ನು ಕಣಕ್ಕಿಳಿಸಲು ಎಚ್ಡಿಕೆ ಒಲವು

ಕ್ಷೇತ್ರದ ಅಭಿವೃದ್ಧಿ, ನೀರಾವರಿ ಯೋಜನೆಗಳು, ಕುಡಿಯುವ ನೀರು ಸೇರಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಗಲಿರುಳೂ ದುಡಿದೆ. ಜಿಲ್ಲೆಯ ರಾಜಕೀಯ ಒಳಹೊರಗುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡೆ. ಗಣಿಯ ಧೂಳಿನಲ್ಲಿ ನಾನು, ಕ್ರಮೇಣ ಮರೆಗೆ ಸರಿದೆ. ಪ್ರಸ್ತುತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಸ್ವಯಂ ಆಸಕ್ತಿಯಿಂದ ನನ್ನನ್ನು ಕಣಕ್ಕಿಳಿಸುವ ಮಾತನ್ನಾಡಿದ್ದಾರೆ.

ಚುನಾವಣಾ ಪ್ರಚಾರವನ್ನೂ ಕೈಗೊಂಡಿದ್ದೇನೆ

ಚುನಾವಣಾ ಪ್ರಚಾರವನ್ನೂ ಕೈಗೊಂಡಿದ್ದೇನೆ

ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಎಸ್ಟಿಗೆ ಮೀಸಲಾಗಿರುವ ಕಾರಣ ಜೆಡಿಎಸ್ ಮುಖಂಡರೂ ನನ್ನ ಮೇಲೆ ಸಾಕಷ್ಟು ಒತ್ತಡ ಹೇರಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಉತ್ತಮ ನಾಯಕರು. ಅವರ ನಾಯಕತ್ವಕ್ಕೆ ಸಾಕಷ್ಟು ಪ್ರಭಾವವಿದೆ. ಎಚ್.ಡಿ. ದೇವೇಗೌಡರ ವಯಸ್ಸು, ಅನುಭವ ನನಗೆ ಪ್ರೇರಣೆ - ಪ್ರೋತ್ಸಾಹ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ. ಗೆಲ್ಲುವ ವಿಶ್ವಾಸವಿದೆ. ಈಗಾಗಲೇ ಚುನಾವಣಾ ಪ್ರಚಾರವನ್ನೂ ಕೈಗೊಂಡಿದ್ದೇನೆ ಎನ್ನುತ್ತಾರೆ.

ಪಕ್ಷ ಬಯಸಿದರೆ ಮಾತ್ರ ಕ್ಷೇತ್ರ ಬದಲಾಯಿಸುವೆ : ಬಿ. ನಾಗೇಂದ್ರಪಕ್ಷ ಬಯಸಿದರೆ ಮಾತ್ರ ಕ್ಷೇತ್ರ ಬದಲಾಯಿಸುವೆ : ಬಿ. ನಾಗೇಂದ್ರ

English summary
Elections 2018 : Know more about your candidate -N T Bommanna - JDS candidate for Kudligi Assembly Elections 2018. NT Bomanna likely to face challenge against B Nagendra who is ticket aspirant from Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X