ಡಿಕೆಶಿ ನೇತೃತ್ವದ ಪ್ರಚಾರ ಸಮಿತಿಯಲ್ಲಿ ಯಾರು ಯಾರಿದ್ದಾರೆ?
ಬೆಂಗಳೂರು, ಜನವರಿ 28: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು 70 ಸದಸ್ಯರ ಪ್ರಚಾರ ಸಮಿತಿಗೆ ಅನುಮತಿ ನೀಡಿದ್ದಾರೆ. ಪ್ರಚಾರ ಸಮಿತಿಗೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಈ ಸಮಿತಿಯಲ್ಲಿ ಯಾರು ಯಾರಿದ್ದಾರೆ ಇಲ್ಲಿ ಓದಿ...
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮಿತಿಯ ಸದಸ್ಯರಾಗಿರಲಿದ್ದಾರೆ. ಹಾಗೆಯೆ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಕಾಂಗ್ರೆಸ್ ನ ಇತರ ಹಿರಿಯ ಮುಖಂಡರು ಕೂಡ ಈ ಪ್ರಚಾರ ಸಮಿತಿಯ ಭಾಗವಾಗಿದ್ದಾರೆ.

ಈ ಸಮಿತಿಯಲ್ಲಿ ಕೇಂದ್ರದ ಎಲ್ಲ ಮಾಜಿ ಸಚಿವರು, ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲ ಮಾಜಿ ಅಧ್ಯಕ್ಷರು, ಪಕ್ಷದ ಇತರ ಪ್ರಮುಖ ಸಂಘಟನೆಗಳ ಮುಖ್ಯಸ್ಥರು, ಎಐಸಿಸಿ ಪದಾಧಿಕಾರಿಗಳು ಮತ್ತು ರಾಜ್ಯ ಕಾಂಗ್ರೆಸ್‌ನ ಎಲ್ಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಇರಲಿದ್ದಾರೆ.
Congress President Shri Rahul Gandhi has approved @INCKarnataka's Campaign Committee Members list for the upcoming assembly elections. pic.twitter.com/59tz1l0Xjj
— DK Shivakumar (@DKShivakumar) January 28, 2018
ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ 70 ಸದಸ್ಯರ ಪ್ರಚಾರ ಸಮಿತಿಯನ್ನು ರಚಿಸಲಾಗಿದ್ದು, ಈ ಪಟ್ಟಿಯಲ್ಲಿ ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರ ಹೆಸರು ಮಾಜಿ ಸಚಿವ ಅಂಬರೀಷ್ ಅವರಿಗಿಂತ ಮುಂಚಿತವಾಗಿ ಪ್ರಿಂಟ್ ಆಗಿದೆ ಎಂದು ಕೆಲವರು ಕಿರಿಕ್ ಶುರು ಮಾಡಿದ್ದು ನಡೆದಿದೆ.












Click it and Unblock the Notifications