Get Updates
Get notified of breaking news, exclusive insights, and must-see stories!

ಬಿಜೆಪಿ ಸೋತಿದ್ದೇಗೆ? 4 ದಶಕಗಳ ಮಹಾನ್ ಇತಿಹಾಸ ರಿಪೀಟ್!

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಬಹುತೇಕ ಪಕ್ಕಾ ಆಗಿದ್ದು, ಕಾಂಗ್ರೆಸ್ ಈಗಾಗಲೇ ಬಹುತೇಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಕಳೆದ 4 ದಶಕಗಳಿಂದ ನಡೆದು ಬರುತ್ತಿರುವ ಟ್ರೆಂಡ್ ಮತ್ತೆ ಮುಂದುವರಿದಿದೆ. ಹಾಗಾದರೆ ಯಾವುದು ಆ 40 ವರ್ಷಗಳ ಟ್ರೆಂಡ್? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವತಂತ್ರ ಭಾರತದಲ್ಲಿ 1952ರಿಂದಲೂ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ರಚನೆ ಆಗುತ್ತಿತ್ತು. ಆದರೆ 1983ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಹೊರತು ಬೇರೆ ಪಕ್ಷ ಸರ್ಕಾರ ರಚಿಸಿತ್ತು. ಜನತಾ ಪಕ್ಷ ಚುನಾವಣೆಯಲ್ಲಿ 95 ಸ್ಥಾನ ಗಳಿಸಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 82 ಸ್ಥಾನ ಪಡೆದು 2ನೇ ಸ್ಥಾನಕ್ಕೆ ಕುಸಿದಿತ್ತು. ಹೀಗೆ ಮೊದಲ ಬಾರಿಗೆ ಜನತಾ ಪಕ್ಷ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ 18 ಸ್ಥಾನ ಪಡೆದಿದ್ದ ಬಿಜೆಪಿ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಮುಂದಿನ ಚುನಾವಣೆಯಲ್ಲೇ ಕರ್ನಾಟಕದಲ್ಲಿ 40 ವರ್ಷಗಳ ಟ್ರೆಂಡ್ ರೂಪುಗೊಂಡಿತ್ತು.

karnataka election Results 2023

1985ರಲ್ಲಿ ಜನತಾ ಪಕ್ಷದ ದಿಗ್ವಿಜಯ

ಕೇವಲ 2 ವರ್ಷದ ಬಳಿಕ 1985ರಲ್ಲಿ ಮತ್ತೆ ಕರ್ನಾಟಕ ವಿಧಾನಸಭೆ ಚುನಾವಣೆ ಎದುರಾಗಿತ್ತು. ರಾಮಕೃಷ್ಣ ಹೆಗಡೆ ಸರ್ಕಾರ 139 ಸ್ಥಾನಗಳ ಬಹುಮತದ ಮೂಲಕ ರಚನೆಯಾಯಿತು. ಕಾಂಗ್ರೆಸ್ 65 ಸ್ಥಾನಕ್ಕೆ ಕುಸಿತ ಕಂಡರೆ, 1983ರಲ್ಲಿ 18 ಸ್ಥಾನ ಗೆದ್ದಿದ್ದ ಬಿಜೆಪಿ 1985ರಲ್ಲಿ ಕೇವಲ 2 ಸ್ಥಾನ ಗಳಿಸಿತ್ತು. ಈ ಮೂಲಕ ಆಡಳಿತ ಪಕ್ಷ ಮರು ಆಯ್ಕೆಯಾಗುವ ಟ್ರೆಂಡ್ 4 ದಶಕದ ಹಿಂದೆ ಕೊನೆಯಾಗಿತ್ತು. 1985ರಲ್ಲಿ ಜನತಾ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದ್ದು ಬಿಟ್ಟರೆ, ಬೇರೆ ಯಾವುದೇ ಪಕ್ಷ ಈ ರೀತಿ ಸತತ 2ನೇ ಬಾರಿಗೆ ಆಯ್ಕೆ ಆಗಲಿಲ್ಲ.

1989ರಲ್ಲಿ ಮತ್ತೆ ಕಾಂಗ್ರೆಸ್‌ಗೆ ಗೆಲುವು

ಸತತ 2 ಬಾರಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷ, 1989ರ ಚುನಾವಣೆಯಲ್ಲಿ 178 ಸ್ಥಾನಗಳಲ್ಲಿ ಭರ್ಜರಿ ಗೆಲುವು ಕಂಡಿತ್ತು. ಜನತಾ ದಳ 24 ಸ್ಥಾನ ಪಡೆದರೆ, ಬಿಜೆಪಿ 4 ಸ್ಥಾನದಲ್ಲಿ ಗೆದ್ದಿತ್ತು. ನಂತರ ಸ್ಥಾನದಲ್ಲಿ ಜನತಾ ಪಕ್ಷ 2 ಸ್ಥಾನ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ 2 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಅಂತಿಮವಾಗಿ ಇತರರು 14 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಈ ಚುನಾವಣೆ ಬಳಿಕ ಮತ್ತೆ ಕಾಂಗ್ರೆಸ್ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುವಲ್ಲಿ ವಿಫಲವಾಗಿತ್ತು. ಈ ಮೂಲಕ 1989ರಲ್ಲೂ ಆಡಳಿತ ಪಕ್ಷ ಮರು ಆಯ್ಕೆ ಆಗಿರಲಿಲ್ಲ.

1994ರ ಚುನಾವಣೆಯಲ್ಲಿ ಮಹತ್ತರ ಬದಲಾವಣೆ

ಕಾಂಗ್ರೆಸ್ ಮತ್ತೆ ಅಧಿಕಾರ ಕಳೆದುಕೊಂಡ ವರ್ಷ 1994. ಚುನಾವಣೆಯಲ್ಲಿ ಜನತಾ ದಳ 115 ಸ್ಥಾನ ಪಡೆದಿತ್ತು. ಮತ್ತೊಂದ್ಕಡೆ ಬಿ.ಎಸ್. ಯಡಿಯೂರಪ್ಪ ನೇರತ್ವದಲ್ಲಿ ಬಿಜೆಪಿ 40 ಸ್ಥಾನ ಪಡೆದಿತ್ತು. ಆಗ ಕಾಂಗ್ರೆಸ್ 34 ಸ್ಥಾನದ ಮೂಲಕ 3ನೇ ಸ್ಥಾನ ಪಡೆದಿತ್ತು. ಕರ್ನಾಟಕ ಕಾಂಗ್ರೆಸ್ ಪಾರ್ಟಿ 10 ಸ್ಥಾನ ಗಳಿಸಿತ್ತು. ಉಳಿದವರು 25 ಸ್ಥಾನದಲ್ಲಿ ಗೆದ್ದಿದ್ದರು. ಈ ಮೂಲಕ 1994ರ ಚುನಾವಣೆಯಲ್ಲಿ ಮಹತ್ವದ ಬದಲಾವಣೆಯನ್ನ ಕರ್ನಾಟಕ ಕಂಡಿತ್ತು. ಇದು ಬಿಜೆಪಿಗೆ ಕರ್ನಾಟಕದಲ್ಲಿ ಮೊದಲ ಅತಿದೊಡ್ಡ ಗೆಲುವು. ಇಲ್ಲೂ ಆಡಳಿತ ಪಕ್ಷ ಅಧಿಕಾರ ಕಳೆದುಕೊಂಡಿತ್ತು.

1999ರಲ್ಲಿ ಎಸ್.ಎಂ.ಕೃಷ್ಣ ಸರ್ಕಾರ ಅಧಿಕಾರಕ್ಕೆ

ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಮತ್ತೆ 1999ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. 224 ಸ್ಥಾನಗಳ ಪೈಕಿ 132 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಿತ್ತು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆದರು. ಮತ್ತೊಂದು ಕಡೆ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಇನ್ನೂ 4 ಸ್ಥಾನ ಹೆಚ್ಚು ಗೆದ್ದು, 44 ಸ್ಥಾನಗಳ ಮೂಲಕ 2ನೇ ಅತಿದೊಡ್ಡ ಪಕ್ಷವಾಗಿತ್ತು. ಜನತಾ ದಳ-U 18 ಸ್ಥಾನ ಗೆದ್ದರೆ, ಜನತಾ ದಳ-S 10 ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇತರರು 20 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

2004ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ದಿಗ್ವಿಜಯ

ಸ್ವತಂತ್ರ ಭಾರತದಲ್ಲಿ ಕರ್ನಾಟಕ ವಿಧಾಸಭೆ ಚುನಾವಣೆಯಲ್ಲಿ ಬಿಜೆಪಿ ಮೊಟ್ಟಮೊದಲ ಬಾರಿಗೆ ಅತಿದೊಡ್ಡ ಪಕ್ಷ ಎನಿಸಿಕೊಂಡಿದ್ದು 2004ರಲ್ಲಿ. ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ರಾಜ್ಯದಲ್ಲಿ ಬಿಜೆಪಿ ಇಂತಹ ಗೆಲುವನ್ನ ಸಾಧಿಸಿತ್ತು. ಬಿ.ಎಸ್. ಯಡಿಯೂರಪ್ಪ ನೃತ್ವದಲ್ಲಿ ಬಿಜೆಪಿ 79 ಸ್ಥಾನ ಗಳಿಸಿತ್ತು, ಆಗ ಕಾಂಗ್ರೆಸ್ 65 ಸ್ಥಾನ ಮತ್ತು ಜನತಾ ದಳ-S 58 ಸ್ಥಾನಗಳಲ್ಲಿ ಗೆದ್ದಿತ್ತು. ಉಳಿದವರು 22 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

2008ರಲ್ಲಿ ಮೊಟ್ಟಮೊದಲ ಬಿಜೆಪಿ ಸರ್ಕಾರ

2004ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 79 ಸ್ಥಾನ ಗಳಿಸಿದ್ದ ಬಿಜೆಪಿ, 2008ರಲ್ಲಿ ಬರೋಬ್ಬರಿ 110ಕ್ಕೆ ತನ್ನ ಸ್ಥಾನ ಹಿಗ್ಗಿಸಿಕೊಂಡಿತ್ತು. ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಆ ಮೂಲಕ ಕರ್ನಾಟಕದಲ್ಲಿ ಸರ್ಕಾರ ರಚಿಸಿತ್ತು. 80 ಸ್ಥಾನ ಪಡೆದರೂ ಕಾಂಗ್ರೆಸ್ 2 ಸ್ಥಾನಕ್ಕೆ ಕುಸಿದಿತ್ತು. 28 ಸ್ಥಾನ ಪಡೆದು ಜನತಾ ದಳ-S 3ನೇ ಸ್ಥಾನ ಪಡೆದಿತ್ತು. ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಗಳ ಸಂಖ್ಯೆ ಕೇವಲ 6 ಸ್ಥಾನಕ್ಕೆ ಕುಸಿದಿದ್ದು ವಿಶೇಷ.

2013ರಲ್ಲಿ ಬಿಜೆಪಿಗೆ ಭಾರಿ ಮುಖಭಂಗ

ಬಿ.ಎಸ್. ಯಡಿಯೂರಪ್ಪ ಬಿಜೆಪಿ ತೊರೆದ ನಂತರ 2013ರಲ್ಲಿ ಬಿಜೆಪಿಗೆ ದೊಡ್ಡ ಸೋಲು ಎದುರಾಗಿತ್ತು. ಇದೇ ಚುನಾವಣೆಯಲ್ಲಿ ಯಡಿಯೂರಪ್ಪ ಕೆಜಿಪಿ ಪಕ್ಷ ಕಟ್ಟಿದ್ದರು. ಆಗ ಕಾಂಗ್ರೆಸ್ 122 ಸ್ಥಾನ ಗಳಿಸಿ ಸರ್ಕಾರ ರಚಿಸಿತು. ಜನತಾ ದಳ-S 40 ಸ್ಥಾನ, ಬಿಜೆಪಿ 40 ಸ್ಥಾನ ಪಡೆದರೆ ಶೇಕಡಾ 9.8ರಷ್ಟು ವೋಟ್ ಪಡೆದಿದ್ದ ಕೆಜಿಪಿ 4ನೇ ಸ್ಥಾನ ಪಡೆದಿತ್ತು. ಬಿಎಸ್‌ಆರ್ 4 ಸ್ಥಾನ ಪಡೆದಿತ್ತು. ಇತರರು 12 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು.

2018ರಲ್ಲಿ ಬಿಜೆಪಿ ಮತ್ತೊಮ್ಮೆ ದೊಡ್ಡ ಪಕ್ಷ

ಬದಲಾದ ಕಾಲಘಟ್ಟದಲ್ಲಿ ಮತ್ತೆ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಬಂದರು. ಆಗ ಬಿಜೆಪಿ 104 ಸ್ಥಾನ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನೃತೃತ್ವದಲ್ಲಿ ಸರ್ಕಾರ ರಚನೆ ಆಗಿತ್ತು. ಮುಂದೆ ಒಂದೇ ವರ್ಷದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಇದೀಗ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇದ್ದರೂ ಭಾರತೀಯ ಜನತಾ ಪಾರ್ಟಿ ಹಿನ್ನಡೆ ಸಾಧಿಸಿದೆ. ಈ ಮೂಲಕ ಸುಮಾರು 40 ವರ್ಷಗಳಿಂದ ಕರ್ನಾಟಕದಲ್ಲಿ ಈ ಟ್ರೆಂಡ್ ಮುಂದುವರಿದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+