Vote From Home: ಚುನಾವಣಾ ಆಯೋಗದ ಕಾರ್ಯಕ್ಕೆ ಏನಂದ್ರು ಹಿರಿಯರ ನಾಗರಿಕರು
ಬೆಂಗಳೂರು, ಮೇ 02: ಕರ್ನಾಟಕ ರಾಜ್ಯ ಚುನಾವಣಾ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಭಾರತದ ಚುನಾವಣಾ ಆಯೋಗವು ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ಆಯೋಗದ ಈ ಉಪಕ್ರಮಕ್ಕೆ ರಾಜ್ಯದ ಹಿರಿಯ ನಾಗರಿಕರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯಾದ್ಯಂತ ಮನೆಯಿಂದಲೇ ಮತದಾನಕ್ಕಾಗಿ ಒಟ್ಟು ಸುಮಾರು 80,000 ಸೂಪರ್ ಸೀನಿಯರ್ (ಹಿರಿಯ ನಾಗರಿಕರು/ವೃದ್ಧರು) ಮನೆಯಿಂದಲೇ ಮತ ಚಲಾಯಿಸಲು ಆಯೋಗದೊಂದಿಗೆ ನೋಂದಣಿ ಮಾಡಿಕೊಂಡಿದ್ದಾರೆ.

ಮತದಾನ ಪ್ರಮಾಣ ಹೆಚ್ಚಳಕ್ಕೆ ಆಯೋಗ ಹೀಗೆ ಮನೆಯಿಂದ ಮತದಾನಕ್ಕೆ ಅವಕಾಶ ನೀಡಿದೆ. ಈ ಕುರಿತು ಮಂಗಳೂರು ಮೂಲದ ಮಾರ್ನಮಿಕಟ್ಟಾ ನಿವಾಸಿ ಪ್ರಮೀಳಾ ಬಾಸ್ಕರ್ ಎಂಬುವವರು ಪ್ರಶಂಶೆ ವ್ಯಕ್ತಪಡಿಸಿದ್ದಾರೆ. ನೋಂದಣಿ ಆಗಿದ್ದ ನನ್ನಿಂದ ಮತದಾನ ಪಡೆಯಲು ಮಧ್ಯಾಹ್ನ 1 ಗಂಟೆಗೆ ಮನೆಗೆ ಬಂದ ಚುನಾವಣಾಧಿಕಾರಿಗಳಿಗೆ ಈಗ ಮತದಾನ ಪ್ರಕ್ರಿಯೆ ಮಾಡಬಹುದೇ ಎಂದು ಕೇಳಿದ್ದರು.
ಆದರೆ ನಾನು ಬೇಸರಿಂದಲೇ ಈಗ ಊಟ ಸಮಯವಾಗಿದೆ ಎಂದು ಹೇಳಿದ್ದೆ. ಅಷ್ಟಕ್ಕೆ ಅವರು ಸ್ವಲ್ಪ ಸಮಯದ ನಂತರ ಮತ್ತೆ ಬಂದು ಮತದಾನ ಪ್ರಕ್ರಿಯೆ ಮುಗಿಸಿದರು. ಈ ಮೂಲಕ ಹಿರಿಯ ನಾಗರಿಕರ ಭಾವನೆಗಳಿಗೆ ಚುನಾವಣಾಧಿಕಾರಿಗಳು ಸ್ಪಂದಿಸಿದ್ದಾರೆ. ಸ್ನೇಹಪರವಾಗಿ ಮತದಾನ ಪ್ರಕ್ರಿಯೆ ಮುಗಿಸಿದರು.
ಹಿರಿಯ ನಾಗರಿಕರಿಗಾಗಿ ತಂದ ಈ ಉಪಕ್ರಮ ಹೆಚ್ಚು ಪ್ರಯೋಜನಕಾರಿಯಾಗಿದೆ. ಮನೆಯಿಂದ ಮತದಾನ ಕೆಲಸ ಕೆಲವೇ ನಿಮಿಷಗಳದ್ದು. ಅಧಿಕಾರಿಗಳು ಮನೆಗೆ ಬಂದು ಮತದಾನ ಪ್ರಕ್ರಿಯೆ ಮುಗಿಸಿ ಹೋಗುವವರೆಗೆ ತಗುಲಿದ ಸಮಯ ಕೇವಲ 10 ರಿಂದ 15 ನಿಮಿಷ ಎಂದು ಪ್ರಮಿಳಾ ಭಾಸ್ಕರ್ ವಿವರಿಸಿದರು.

ಬೆಂಗಳೂರಿನ ಬಸವನಗುಡಿಯ ನಿವಾಸಿಯೊಬ್ಬರು ಚುನಾವಣಾ ಆಯೋಗದ ಕಾರ್ಯ ಶ್ಲಾಘಿಸಿದ್ದಾರೆ. ಚುನಾವಣಾ ಆಯೋಗದ ಈ ಮನೆಯಿಂದ ಮತದಾನ ಘೋಷಣೆ ಒಂದು ವರದಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ಶತಾಯುಷಿ ಶ್ಲಾಘನೆ
ಇತ್ತೀಚೆಗಷ್ಟೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಶತಾಯುಷಿ ಮಹದೇವ ಮಹಾಲಿಂಗ ಮಾಳಿ ಅವರು ಮನೆಯಿಂದಲೇ ಮತವನ್ನು ಚಲಾಯಿಸಿದರು. ಈ ಮೂಲಕ ಅವರುಚಿಕ್ಕೋಡಿ-ಸಾದಲಗಾ ವಿಧಾನಸಭಾ ಕ್ಷೇತ್ರದ ಅತ್ಯಂತ ಹಿರಿಯ ಮತದಾರರೆನಿಸಿಕೊಂಡಿದ್ದಾರೆ.
ಮಹದೇವ ಮಹಾಲಿಂಗ ರವರು ಎಲ್ಲಾ ಮತದಾರರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಈ ವಯಸ್ಸಿನಲ್ಲಿಯೂ ತಮ್ಮ ಕೆಲಸಗಳನ್ನು ಸ್ವತ: ತಾವೇ ಮಾಡಿಕೊಳ್ಳುವ ಮಹದೇವ ಮಹಾಲಿಂಗ ಮಾಳಿ ಅವರು ಮತದಾನದ ಪ್ರಾಮುಖ್ಯತೆ ವಿವರಿಸಿದರು.
ಚುನಾವಣಾ ಆಯೋಗದ ಈ ನೂತನ ಸೇವೆಯನ್ನು ಶ್ಲಾಘಿಸಿದರು. ಜವಾಬ್ದಾರಿಯುತ ಪ್ರತಿ ಪ್ರಜೆಗಳು ತಪ್ಪದೇ ಮತವನ್ನು ಚಲಾಯಿಸಬೇಕೆಂದು ಕರೆ ನೀಡಿದರು.












Click it and Unblock the Notifications