ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾಗೆ ಇ.ಡಿ ಸಮನ್ಸ್

Recommended Video

      ಡಿಕೆ ಶಿವಕುಮಾರ್ ಮಗಳಿಗೂ ಸಮನ್ಸ್ ನೀಡಿದ ಇ.ಡಿ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 10: ದೆಹಲಿಯ ಫ್ಲ್ಯಾಟ್ ಒಂದರಲ್ಲಿ ಐಟಿ ದಾಳಿ ವೇಳೆ ಅಕ್ರಮ ಹಣ ಸಿಕ್ಕ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧನದಲ್ಲಿಟ್ಟುಕೊಂಡು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಅವರ ಮಗಳಿಗೂ ಸಮನ್ಸ್ ನೀಡಿದೆ.

      ಇದರಿಂದ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ಸತತ ವಿಚಾರಣೆಗೆ ಒಳಗಾಗಿರುವ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

      ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸೋಲ್ ಆಂಡ್ ಸೇಲ್ ಎಂಬ ಕಂಪೆನಿಯಲ್ಲಿ ಐಶ್ವರ್ಯಾ ಹೆಸರಿನಲ್ಲಿ 78 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಈ ಸಂಬಂಧ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಐಶ್ವರ್ಯಾ ಅವರಿಗೆ ಇ.ಡಿ ಸಮನ್ಸ್ ಜಾರಿ ಮಾಡಿದೆ.

      ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಮಂಗಳವಾರ ಮಧ್ಯಾಹ್ನ ತೆರಳಿದ ಇ.ಡಿ. ಅಧಿಕಾರಿಗಳು ಅವರ ಕುಟುಂಬಕ್ಕೆ ಸಮನ್ಸ್ ನೀಡಿದರು.

      20 ಕೋಟಿ ರೂ. ವರ್ಗಾವಣೆ

      20 ಕೋಟಿ ರೂ. ವರ್ಗಾವಣೆ

      20 ಕೋಟಿ ರೂ. ವರ್ಗಾವಣೆಗೆ ಸಂಬಂಧ ಈ ಸಮನ್ಸ್ ನೀಡಲಾಗಿದೆ. ಮೊದಲು ಐಶ್ವರ್ಯಾ ಅವರ ಹೆಸರಿನಿಂದ ಕಾಫಿ ಡೇ ಮತ್ತು ಸೋಲ್ ಆಂಡ್ ಸೇಲ್ಸ್ ಕಂಪೆನಿಗೆ 20 ಕೋಟಿ ರೂ. ವರ್ಗಾವಣೆ ಮಾಡಲಾಗಿತ್ತು. ಬಳಿಕ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರಿಂದ ಐಶ್ವರ್ಯಾ ಅವರಿಗೆ ಹಣ ವರ್ಗಾಯಿಸಲಾಗಿತ್ತು. ಅವರಿಗೆ ಯಾವುದೇ ಉದ್ಯೋಗವಿಲ್ಲ. ಹಾಗಿದ್ದೂ 20 ಕೋಟಿ ರೂ ಸಾಲವಾಗಿ ಬಂದಿದ್ದು ಹೇಗೆ ಎಂದು ಇ.ಡಿ ಪ್ರಶ್ನಿಸಲು ಮುಂದಾಗಿದೆ ಎಂದು ವರದಿಯಾಗಿದೆ.

      ವ್ಯವಹಾರ ಮುಚ್ಚಿಟ್ಟಿದ್ದ ಸಿದ್ಧಾರ್ಥ

      ವ್ಯವಹಾರ ಮುಚ್ಚಿಟ್ಟಿದ್ದ ಸಿದ್ಧಾರ್ಥ

      20 ಕೋಟಿ ಹಣ ವರ್ಗಾವಣೆಯ ವಿಚಾರವನ್ನು ಕಾಫಿ ಡೇ ಮಾಲೀಕರಾಗಿದ್ದ ಸಿದ್ಧಾರ್ಥ ಅವರು ಮುಚ್ಚಿಟ್ಟಿದ್ದರು. ಈ ಹಣದ ವ್ಯವಹಾರದ ಕುರಿತಾದ ದಾಖಲೆ, ಡಿಕೆ ಶಿವಕುಮಾರ್ ಅವರ ಹಣಕಾಸು ಸಲಹೆಗಾರರಾಗಿದ್ದ ಚಂದ್ರಶೇಖರ್ ಸುಖಾಪುರಿ ಅವರ ಮನೆಯಲ್ಲಿ 2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಸಿಕ್ಕಿತ್ತು. ಈ ವರ್ಗಾವಣೆ ಇ.ಡಿ ಅಧಿಕಾರಿಗಳಲ್ಲಿ ಅನುಮಾನ ಮೂಡಿಸಲು ಕಾರಣವಾಗಿದೆ.

      102 ಕೋಟಿ ರೂ. ಆಸ್ತಿ

      102 ಕೋಟಿ ರೂ. ಆಸ್ತಿ

      ಡಿಕೆ ಶಿವಕುಮಾರ್ ಅವರು 2018ರ ವಿಧಾನಸಭೆ ಚುನಾವಣೆಗೆ ಮುನ್ನ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ಮಗಳು ಐಶ್ವರ್ಯಾ ಹೆಸರಿನಲ್ಲಿ 102 ಕೋಟಿ ರೂ. ಆಸ್ತಿ ಇದೆ ಎಂದು ಮಾಹಿತಿ ನೀಡಿದ್ದರು. ಮಗಳ ಹೆಸರಿನಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಸ್ತಿ ಹೊಂದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

      ಜಾಮೀನು ಅರ್ಜಿ ವಿಚಾರಣೆ

      ಜಾಮೀನು ಅರ್ಜಿ ವಿಚಾರಣೆ

      ಡಿಕೆ ಶಿವಕುಮಾರ್ ಅವರು ಸದ್ಯ ಇ.ಡಿ ವಶದಲ್ಲಿದ್ದು, ಸೆ. 13ರಂದು ಅವರ ವಶದ ಅವಧಿ ಮುಕ್ತಾಯವಾಗಲಿದೆ. ಅವರನ್ನು ಇನ್ನಷ್ಟು ಕಾಲ ವಿಚಾರಣೆಗೆ ಒಪ್ಪಿಸುವಂತೆ ಇ.ಡಿ ಕೋರುವ ಸಾಧ್ಯತೆ ಇದೆ. ಆ ದಿನವೇ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ಜಾಮೀನು ಅರ್ಜಿಯ ವಿಚಾರಣೆಯ ಜತೆಗೆ ಇ.ಡಿ ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+