E Khata: ಇ ಪ್ರಾಪರ್ಟಿ & ಇ - ಸ್ವತ್ತಿನ ಬಗ್ಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ!
E Khata: ಕರ್ನಾಟಕ ಸರ್ಕಾರವು ಆಸ್ತಿ ಸಂರಕ್ಷಣೆಯ ವಿಚಾರದಲ್ಲಿ ಇ ಖಾತಾ ಪರಿಚಯಿಸಿದೆ. ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ಯಾವುದೇ ಲೋಪವಾಗಬಾರದು ಎನ್ನುವ ಕಾರಣಕ್ಕೆ ಇ - ಖಾತಾ ಪರಿಚಯಿಸಲಾಗಿದೆ. ಇದರೊಂದಿಗೆ ಗ್ರಾಮೀಣ ಭಾಗದ ಆಸ್ತಿಗಳ ಸಂರಕ್ಷಣೆಯ ಉದ್ದೇಶದಿಂದ ಇ - ಸ್ವತ್ತು ಸಹ ಪರಿಚಯಿಸಲಾಗಿದೆ. ಇದೀಗ ಇ ಸ್ವತ್ತುಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ಅಪ್ಡೇಟ್ಸ್ ಕೊಟ್ಟಿದೆ.
ವಾರದೊಳಗೆ ಇ-ಸ್ವತ್ತು ಕರಡು ಪ್ರಕಟ ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ. ಕರ್ನಾಟಕದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ನಿಯಮಗಳ ಕರಡನ್ನು ಮುಂದಿನ ಒಂದು ವಾರದೊಳಗೆ ಪ್ರಕಟಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ.

ಈ ಕುರಿತು ವಿಕಾಸಸೌಧದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿ, ಕರಡು ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನೂ ಅವರು ಸೂಚಿಸಿದ್ದಾರೆ. ಅಲ್ಲದೇ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲೂ ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ತೆರಿಗೆ ದರ, ಶುಲ್ಕಗಳನ್ನು ವಿಧಿಸುವ ಪ್ರಕ್ರಿಯೆ, ಕಟ್ಟಡಗಳು ಮತ್ತು ಭೂಮಿಯ ಮೇಲೆ ತೆರಿಗೆ ವಿಧಿಸುವುದು, ನಮೂನೆ 11 ಎ ನಿರ್ವಹಣೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ನಿಯಮ, 2025 ರ ನಂತರ ನಮೂನೆ 11 ಎ ರಿಜಿಸ್ಟರ್‌ಗೆ ಹೊಸ ಆಸ್ತಿಗಳ ಸೇರ್ಪಡೆ, ಮೇಲ್ಮನವಿ, ದಂಡನೆಗಳು, ನೀರು ಸರಬರಾಜು ದರ ಮತ್ತು ಇತರ ದರಗಳ ನಿರ್ಧರಣೆ, ದಂಡ ನಿರ್ಧಾರ, ಸ್ಥಿರ ಸ್ವತ್ತಿನ ಪರಿಶೀಲನೆ, ಮೇಲ್ಮನವಿ, ತಗಾದೆ ನೋಟಿಸ್, ಜಪ್ತಿ ಮತ್ತು ಮಾರಾಟ ಮುಂತಾದ ವಿಷಯಗಳ ಕುರಿತು ಚರ್ಚೆ ಮಾಡಿರುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಇ-ಸ್ವತ್ತು ರೂಪಿಸುವ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮುನೀಶ್ ಮೌದ್ಗಿಲ್ ಹಲವು ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಗ್ರಾಮ ಪಂಚಾಯಿತಿಗಳಿಗೆ ಆದಾಯಮೂಲ ವೃದ್ಧಿಸುವುದು ಮತ್ತು ಜನರ ಆಸ್ತಿಗೆ ರಕ್ಷಣೆ ಒದಗಿಸುವುದು ಇ- ಸ್ವತ್ತಿನ ಆಶಯವಾಗಿದೆ. ರಾಜ್ಯದಾದ್ಯಂತ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇ-ಸ್ವತ್ತು ಜಾರಿಗೆ ತರಲು ಪೂರ್ವಭಾವಿಯಾಗಿ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರಡು ನಿಯಮಾವಳಿಗಳನ್ನು ಪರಿಶೀಲಿಸಿ, ಒಂದು ವಾರದ ಅವಧಿಯಲ್ಲಿ ಕರಡು ನಿಯಮಾವಳಿಗಳನ್ನು ಪ್ರಕಟಿಸಲು ಸೂಚಿಲಾಯಿತು ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
ಇ ಖಾತಾ: ಇನ್ನು ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ಅದರಲ್ಲೂ ನಗರ ಭಾಗದಲ್ಲಿನ ಪ್ರಾಪರ್ಟಿಗಳ ಖರೀದಿ ಮತ್ತು ಮಾರಾಟ - ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಇ ಖಾತಾ ಪರಿಚಯಿಸಲಾಗಿದೆ. ಆದರೆ, ಇದೀಗ ಇ ಖಾತಾ ಎಲ್ಲಾ ಆಸ್ತಿದಾರರಿಗೂ ಸಿಕ್ಕಿಲ್ಲ. ಬೆಂಗಳೂರಿನಂತಹ ನಗರದಲ್ಲೇ ಇ - ಖಾತಾ ಸಂಪೂರ್ಣವಾಗಿಲ್ಲ. ಆದರೆ ಇ ಖಾತಾ ನೀಡುವ ಪ್ರಕ್ರಿಯೆ ಜೋರಾಗಿದೆ.












Click it and Unblock the Notifications