DySPs Transfer: ರಾಜ್ಯದಲ್ಲಿ ಎಂಟು ಮಂದಿ ಡಿವೈಎಸ್‌ಪಿ ಅಧಿಕಾರಿಗಳ ದಿಢೀರ್ ವರ್ಗಾವಣೆ

DySP Officers Transfer: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಸರ್ಜರಿ ಮಾಡುತ್ತಲಿರುತ್ತದೆ. ಇದೀಗ 8 ಮಂದಿ ಸಿವಿಎಲ್‌ ಡಿವೈಎಸ್‌ಪಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರು ಎಲ್ಲಿಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ 8 ಸಿವಿಲ್ ಡಿವೈಎಸ್‌ಪಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕರ ಪರವಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಸೌಮೇಂದು ಮುಖರ್ಜಿ ಅವರು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

DySPs Transfer 8 Officers Transferred in Karnataka State Order by ADGP Soumendu Mukherjee

ಕೆಲವರಿಗೆ ಹಳೆಯ ಹುದ್ದೆಗಳಲ್ಲೇ ಮುಂದುವರಿಕೆ

ಕೆಲ ಅಧಿಕಾರಿಗಳ ವರ್ಗಾವಣೆ ರದ್ದುಪಡಿಸಿ ಅದೇ ವಿಭಾಗದಲ್ಲಿ ಮುಂದುವರಿಸಲಾಗಿದೆ. ಇನ್ನೂ ಉಳಿದವರಿಗೆ ಲೋಕಾಯುಕ್ತ ಎಸ್‌ಐಟಿ, ಆಂತರಿಕ ಭದ್ರತಾ ವಿಭಾಗ, ಡಿ.ಸಿ.ಆರ್.ಇ ಹಾಗೂ ಸಿಐಡಿಗೆ ಹೊಸ ಹುದ್ದೆಗಳಿಗೆ ನಿಯೋಜನೆ ನೀಡಲಾಗಿದೆ. ಅಧಿಕಾರಿಗಳು ತಕ್ಷಣವೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಯ ವಿವರ

* ಶಿವರಾಜ ಕಟಕ್‌ಭಾವಿ: ಹುಬ್ಬಳ್ಳಿ-ಧಾರವಾಡ ನಗರದ ಸಿ.ಸಿ.ಪಿ.ಎಸ್‌ನಿಂದ ಯಾದಗಿರಿ ಜಿಲ್ಲೆಯ ಶೋರಾಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

* ಜಾವೀದ್ ಇನಾಂದಾರ್: ಯಾದಗಿರಿ ಜಿಲ್ಲೆಯ ಶೋರಾಪುರ ಉಪ ವಿಭಾಗದಿಂದ ಡಿ.ಸಿ.ಆರ್.ಇ (DCRE) ವಿಭಾಗಕ್ಕೆ ನಿಯೋಜಿಸಲಾಗಿದೆ.

* ಪ್ರಶಾಂತ್ ಜಿ. ಮುನ್ನೋಳಿ: ಬೆಳಗಾವಿ ಜಿಲ್ಲೆಯ ಅಥಣಿ ಉಪ ವಿಭಾಗದಿಂದ ಹುಬ್ಬಳ್ಳಿಯ ಸಿ.ಐ.ಡಿ (CID) ಅರಣ್ಯ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ

* ಮಲ್ಲೇಶಪ್ಪ ಮಲ್ಲಾಪುರ: ರಾಜ್ಯ ಗುಪ್ತವಾರ್ತೆಯಲ್ಲಿದ್ದ ಇವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ಮಾಡಲಾಗಿದ್ದ ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ರಾಜ್ಯ ಗುಪ್ತವಾರ್ತೆಯಲ್ಲೇ ಮುಂದುವರಿಸಲಾಗಿದೆ.

* ಅಯ್ಯನಗೌಡ ಟಿ. ಪಾಟೀಲ್: ರಾಜ್ಯ ಗುಪ್ತವಾರ್ತೆಯಲ್ಲಿದ್ದ ಇವರನ್ನು ಡಿ.ಸಿ.ಆರ್.ಇಗೆ ಮಾಡಲಾಗಿದ್ದ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ, ರಾಜ್ಯ ಗುಪ್ತವಾರ್ತೆಯಲ್ಲೇ ಮುಂದುವರಿಸಲಾಗಿದೆ.

* ಬಾಲಾಜಿ ಸಿಂಗ್‌ ಎಂ.ಜೆ.: ಚಿಕ್ಕಮಗಳೂರಿನ ಕೊಪ್ಪ ಉಪ ವಿಭಾಗದಿಂದ ವರ್ಗಾವಣೆಗೊಂಡು ಸ್ಥಳ ನಿರೀಕ್ಷೆಯಲ್ಲಿದ್ದ ಇವರಿಗೆ ಡಿ.ಸಿ.ಆರ್.ಇ ವಿಭಾಗಕ್ಕೆ ಸ್ಥಳ ನಿಯುಕ್ತಿ ಮಾಡಲಾಗಿದೆ.

* ಶಿವಾನಂದ ಎಂ. ಮದರಖಂಡಿ: ದಾಂಡೇಲಿ ಉಪ ವಿಭಾಗದಿಂದ ಡಿ.ಸಿ.ಆರ್.ಇಗೆ ಮಾಡಲಾಗಿದ್ದ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ, ಆಂತರಿಕ ಭದ್ರತಾ ವಿಭಾಗಕ್ಕೆ ನಿಯೋಜಿಸಲಾಗಿದೆ.

* ಜಯರಾಜ ಹೆಚ್.: ಡಿ.ಸಿ.ಆರ್.ಇ ವಿಭಾಗದಿಂದ ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+