ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗಣಪತಿ ಅವರಿಗೆ ಅವರ ವಿರುದ್ಧದ ಕೇಸ್ ಗಳು ಕಾಡುತ್ತಿತ್ತು'

By Mahesh
|
Google Oneindia Kannada News

ಬೆಂಗಳೂರು, ಜುಲೈ 12 : ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಮಾನಸಿಕ ಖಿನ್ನತೆಯೇ ಕಾರಣ ಎಂದು ಮೇಲ್ನೋಟ ಕಂಡು ಬಂದಿದೆ. ಹೀಗಾಗಿ ಈ ಪ್ರಕರಣದಲ್ಲಿ ರಾಜಕೀಯ ಒತ್ತಡ, ಕಿರುಕುಳ ಎಂಬ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ಗಣಪತಿ ಅವರ ವಿರುದ್ಧ ದಾಖಲಾದ ಪ್ರಕರಣಗಳು ಅವರನ್ನು ಕಾಡುತ್ತಿತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಹೇಳಿದ್ದಾರೆ.

2011ರಲ್ಲಿ ಯಶವಂತ ಪುರದಲ್ಲಿ ನಡೆದ ರೌಡಿಯನ್ನು ಹತ್ಯೆಗೈದ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಸರ್ಕಾರವೇ ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. [ಕರ್ನಾಟಕ: ಪೊಲೀಸರ ಆತ್ಮಹತ್ಯೆ ಆಘಾತಕಾರಿ ಅಂಕಿ ಅಂಶ]

ಕೆಲವು ವರ್ಷಗಳಿಂದ ಗಣಪತಿ ಅವರು ಮಾನಸಿಕವಾಗಿ ಸಂಪೂರ್ಣವಾಗಿ ಕುಗ್ಗಿದ್ದರು, ಖಿನ್ನತೆ, ನರದೌರ್ಬಲ್ಯಗಳಿಂದ ಬಳಲುತ್ತಿದ್ದರು ಎಂದು ಗಣಪತಿ ಅವರ ಸೋದರ ಡಿವೈಎಸ್ಪಿ ತಮ್ಮಯ್ಯ ಹಾಗೂ ಗಣಪತಿ ಅವರ ತಂದೆ ಕೂಡಾ ಹೇಳಿದ್ದಾರೆ.

G Parameshwara

ಎಂ. ಕೆ ಗಣಪತಿ ಅವರು ಮಂಗಳೂರಿನ ಏಜೆ ಆಸ್ಪತ್ರೆಯ ನರ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದಿರುವುದು ಗೊತ್ತಿರಬಹುದು. ಕಳೆದ ಆರು ತಿಂಗಳಿನಲ್ಲಿ ಗಣಪತಿ ಅವರಿಗೆ ಬಡ್ತಿ ನೀಡಿ ಅನುಕಂಪದ ಆಧಾರದ ಮೇಲೆ ಅವರನ್ನು ಐಜಿ ಕಚೇರಿಗೆ ವರ್ಗಾವಣೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಮರೆಯುವಂತಿಲ್ಲ. [ಎಂ.ಕೆ.ಗಣಪತಿ ಅವರ ಮೇಲಿದ್ದ ಆರೋಪಗಳು]

ಆತ್ಮಹತ್ಯೆಗೊಳಗಾಗಿರುವ ಡಿವೈಎಸ್ಪಿ ಗಣಪತಿ, ತನ್ನ ಆತ್ಮಹತ್ಯೆಗೆ ಇಂತಹ ಪೊಲೀಸ್ ಅಧಿಕಾರಿಗಳು, ಇಂತಹ ಸಚಿವರೇ ಹೊಣೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಅಂದರೆ ಅವರ ಒತ್ತಡ ತನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ. ಆದರೆ, ಅವರ ಮೇಲೆ ಎಂತಹ ಒತ್ತಡ, ಯಾವ ಸಂದರ್ಭದಲ್ಲಿ ಈ ಒತ್ತಡ ಬಿದ್ದಿದೆ ಎನ್ನುವ ವಿವರಗಳನ್ನು ಅವರು ಬಹಿರಂಗ ಪಡಿಸಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

DYSP Ganapati
ಗಣಪತಿ ಅವರ ಸೇವಾ ಅವಧಿ ನೋಡಿದರೆ ಮಾರ್ಚ್ 10, 2014 ರಿಂದ ಏಪ್ರಿಲ್ 10, 2014 ರ ತನಕ ಸಸ್ಪೆಂಡ್ ಆಗಿದ್ದರು. ಯಶವಂತಪುರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಆಗಸ್ಟ್ 26, 2009 ರಿಂದ ನವೆಂಬರ್ 12, 2011 ರ ತನಕ ಕರ್ತವ್ಯ ನಿರ್ವಹಿಸಿದ್ದರು. ಏಪ್ರಿಲ್ 13, 2016ರಂದು ಡಿವೈಎಸ್ಪಿಯಾಗಿ ಬಡ್ತಿ ನೀಡಲಾಯಿತು.
English summary
Deputy superintendent of police Ganapathi had hanged himself in Madikeri on Thursday after blaming Bengaluru Development Minister K J George and two senior police officers. M K Ganapathi faced an enquiry in the 2011 encounter case when the BJP was in power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X