ಅನುಪಮಾ ಶೆಣೈ ಫೇಸ್‌ಬುಕ್‌ಗೆ ಕ್ಯಾಂಡಿ ಕ್ರಷ್ ರಿಕ್ವೆಸ್ಟ್!

Posted By:
Subscribe to Oneindia Kannada

ಬೆಂಗಳೂರು, ಜನವರಿ 29 : ಕೂಡ್ಲಿಗಿ ಡಿವೈಎಸ್‍ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಫೇಸ್‌ಬುಕ್‌ನಲ್ಲಿಯೂ ಅವರಿಗೆ ನೈತಿಕ ಬೆಂಬಲ ಸಿಗುತ್ತಿದೆ. ಇಂತಹ ಸಮಯದಲ್ಲಿಯೇ ವ್ಯಕ್ತಿಯೊಬ್ಬರು ಅವರಿಗೆ ಕ್ಯಾಂಡಿ ಕ್ರಷ್ ರಿಕ್ವೆಸ್ಟ್ ಕಳಿಸಿದ್ದಾರೆ. ಫೇಸ್‌ಬುಕ್ ಬಳಕೆದಾರರು ಕ್ಯಾಂಡಿ ಕ್ರಷ್ ವಿರುದ್ಧ ಹೊರಹಾಕುವಷ್ಟು ಆಕ್ರೋಶವನ್ನು ಅನುಪಮಾ ಅವರ ಪ್ರಕರಣದಲ್ಲಿ ಸರ್ಕಾರ ವಿರುದ್ಧ ಹೊರಹಾಕುತ್ತಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆ ಪ್ರಕರಣದಲ್ಲಿ ಮೌನ ಮುರಿದಿದ್ದು, ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅನುಪಮಾ ಶೆಣೈ ಅವರ ಫೇಸ್‌ಬುಕ್‌ ಪುಟದಲ್ಲಿ ನೂರಾರು ಜನರು ಅವರಿಗೆ ನೈತಿಕ ಬೆಂಬಲ ನೀಡುತ್ತಿದ್ದಾರೆ. 'ವಿ ಆರ್ ವಿತ್ ಯೂ ಮೇಡಮ್' ಮತ್ತು 'ಜಸ್ಟೀಸ್ ಫಾರ್ ಅನುಪಮಾ ಶೆಣೈ' ಎಂಬ ಕಮೆಂಟ್‌ಗಳು ಅವರ ಫೇಸ್‌ಬುಕ್ ಪೇಜ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. [ಅನುಪಮಾ ಶೆಣೈ ವರ್ಗಾವಣೆ, ಮೌನ ಮುರಿದ ಸಿದ್ದರಾಮಯ್ಯ]

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರ ಒತ್ತಡದಿಂದಾಗಿ ಅನುಪಮಾ ಶೆಣೈ ಅವರನ್ನು ವಿಜಯಪುರದ ಇಂಡಿಯ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಆದರೆ, ಅವರು ಅಲ್ಲಿ ಅಧಿಕಾರ ಸ್ವೀಕರಿಸುವ ಮೊದಲೇ ಅವರಿಗೆ 15 ದಿನಗಳ ಕಾಲ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂಬುದು ಸದ್ಯದ ಸುದ್ದಿ.

ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪರಮೇಶ್ವರ ನಾಯಕ್ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವರ್ಗಾವಣೆ ಮಾಡಿಸಿದ ಸಚಿವರಿಗೆ ನೋಟಿಸ್ ನೀಡುವುದು ಬಿಟ್ಟು, ದಕ್ಷ ಪೊಲೀಸ್ ಅಧಿಕಾರಿಗೆ ರಜೆ ನೀಡಿದ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ. ಇಂತಹ ಸಮಯದಲ್ಲಿಯೇ ವ್ಯಕ್ತಿಯೊಬ್ಬರು ಅನುಪಮಾ ಶೆಣೈ ಅವರಿಗೆ ಕ್ಯಾಂಡಿ ಕ್ರಷ್ ರಿಕ್ವೆಸ್ಟ್ ಕಳಿಸಿದ್ದಾರೆ....

ಅನುಪಮಾ ಶೆಣೈ ಅವರಿಗೆ ನೈತಿಕ ಬೆಂಬಲ

ಅನುಪಮಾ ಶೆಣೈ ಅವರಿಗೆ ನೈತಿಕ ಬೆಂಬಲ

ಕೂಡ್ಲಿಗಿ ಡಿವೈಎಸ್‍ಪಿ ಅನುಪಮಾ ಶೆಣೈಅವರಿಗೆ ಫೇಸ್‌ಬುಕ್‌ನಲ್ಲಿ ನೈತಿಕ ಬೆಂಬಲ ಸಿಗುತ್ತಿದೆ. ‪#‎justiceforAnupamaShenoy [ಅನುಪಮಾ ಅವರ ಫೇಸ್ ಬುಕ್ ಪುಟ]

ಪ್ರೊಫೈಲ್ ಚಿತ್ರ ಬದಲಾವಣೆ

ಪ್ರೊಫೈಲ್ ಚಿತ್ರ ಬದಲಾವಣೆ

ಅನುಪಮಾ ಶೆಣೈ ಅವರು ಇಂದು ತಮ್ಮ ಫೇಸ್‌ಬುಕ್ ಪ್ರೊಫೈಲ್ ಚಿತ್ರವನ್ನು ಬದಲಾವಣೆ ಮಾಡಿದ್ದಾರೆ.

ಇದ ಪಾಲಿಸಿದೊಡೆ ವರ್ಗಾವಣೆ

ಇದ ಪಾಲಿಸಿದೊಡೆ ವರ್ಗಾವಣೆ

ಕವನದ ಮೂಲಕ ಡಿವೈಎಸ್‍ಪಿ ಅನುಪಮಾ ಶೆಣೈಅವರಿಗೆ ನೈತಿಕ ಬೆಂಬಲ ನೀಡಲಾಗಿದೆ.

ರಿಕ್ಕಿ ಸ್ಟೈಲಲ್ಲಿ ಪಂಚ್

ರಿಕ್ಕಿ ಸ್ಟೈಲಲ್ಲಿ ಪಂಚ್

ಕಳೆದ ವಾರ ಬಿಡುಗಡೆಯಾದ ರಿಕ್ಕಿ ಚಿತ್ರದ ಸ್ಟೈಲ್‌ನಲ್ಲಿ ಸಚಿವ ಪರಮೇಶ್ವರ ನಾಯಕ್ ಅವರಿಗೆ ಪಂಚ್ ನೀಡಲಾಗಿದೆ. [ರಿಕ್ಕಿ ಚಿತ್ರದ ವಿಮರ್ಶೆ ಓದಿ]

ಕ್ಯಾಂಡಿ ಕ್ರಷ್ ರಿಕ್ವೆಸ್ಟ್

ಕ್ಯಾಂಡಿ ಕ್ರಷ್ ರಿಕ್ವೆಸ್ಟ್

ಫೇಸ್‌ಬುಕ್ ಬಳಸುವವವರು ಕ್ಯಾಂಡಿ ಕ್ರಷ್ ರಿಕ್ವೆಸ್ಟ್ ಬಗ್ಗೆ ಎಂತಹ ದ್ವೇಷ ಹೊಂದಿದ್ದಾರೆ ಎಂದು ತಿಳಿದಿದೆ. ಅನುಪಮಾ ಅವರಿಗೂ ವ್ಯಕ್ತಿಯೊಬ್ಬ ಇಂತಹ ಸಮಯದಲ್ಲಿ ಕ್ಯಾಂಡಿ ಕ್ರಷ್ ರಿಕ್ವೆಸ್ಟ್ ಕಳುಹಿಸಿದ್ದಾನೆ.

ಸಚಿವರನ್ನು ಮನೆಗೆ ಕಳಿಸಿ

ಸಚಿವರನ್ನು ಮನೆಗೆ ಕಳಿಸಿ

ಸಚಿವ ಪರಮೇಶ್ವರ್ ನಾಯಕ್ ಅವರನ್ನು ಮನೆಗೆ ಕಳಿಸಿ ಅನುಪಮಾ ಶೆಣೈ ಅವರನ್ನು ಪುನಃ ಅದೇ ಜಾಗಕ್ಕೆ ತನ್ನಿ ಎಂದು ಒತ್ತಾಯಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kudligi Deputy Superintendent of Police (DYSP) Anupama Shenoy gets moral support in Social media. Hundreds of people blamed CM Siddaramaiah lead Congress government for transferring Anupama Shenoy to Vijayapura and demanding for action against Labour minister Parameshwar Nayak.
Please Wait while comments are loading...