ಬರೋಬ್ಬರಿ 25 ಸಾವಿರ ಕೋಟಿ ಬಾಕಿ; ಯಾವ ಡೀಲ್, ಕಮಿಷನ್ ಬೇಡಿಕೆಯೂ ಗೊತ್ತಿಲ್ಲ: ಡಿ.ಕೆಂಪಣ್ಣ
ಬೆಂಗಳೂರು, ಆಗಸ್ಟ್ 11: ರಾಜ್ಯಾದ್ಯಂತ 25 ಸಾವಿರ ಕೋಟಿ ಬಾಕಿ ಉಳಿದಿದ್ದು, ಕಳೆದ 7 ತಿಂಗಳಿನಿಂದ ಗುತ್ತಿಗೆದಾರರ ಬಾಕಿ ಬಿಡುಗಡೆಯಾಗಿರುವುದಿಲ್ಲ. ಆದರೆ ಕಮಿಷನ್ ಬೇಡಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.

ಈ ಕುರಿತು ಶುಕ್ರವಾರ ಮಹತ್ವದ ಸುದ್ದಿಗೋಷ್ಠಿಯನ್ನ ನಡೆಸಿದ ಕೆಂಪಣ್ಣ, ಈಗಾಗಲೇ ಏಳು ತಿಂಗಳಿಂದ ಬಾಕಿ ಬರಬೇಕು. ಈಗಾಗಲೇ ಕೆಲವಷ್ಟು ಹಣ ಬಿಡುಗಡೆ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದ್ರು. ಅದಕ್ಕೆ ಮೂರು ವರ್ಷದಿಂದ ಅಂತ ಹೇಳ್ದೆವು, ಅದಕ್ಕೆ ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದ್ರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ ಎಂದು ಹೇಳಿದರು.

ನಮ್ಮ ಸಮಸ್ಯೆಯ ಕುರಿತು ನಾವು ಮೊದಲು ಆರಂಭ ಮಾಡಿದಾಗ ಸಿಎಂ ಯಡಿಯೂರಪ್ಪ ಗೆ ಪತ್ರ ಕೊಟ್ಟೆವು. ಬಳಿಕ ಪ್ರಧಾನಿ ಗೆ ಪತ್ರ ಕೊಟ್ಟಿದ್ದೇವೆ. ಈ ಹಿಂದೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಪತ್ರ ಕೊಟ್ಟಿದ್ದೇವೆ. ಕುಮಾರಸ್ವಾಮಿ ನಮ್ಮ ಕೇಸ್ ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಕೂಡ ಕೇಸ್ ತೆಗೆದುಕೊಳ್ಳಲಿಲ್ಲ. ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಈ ಹಿಂದೆ ಕರೆದಿದ್ರು, ಹಾಗಾಗಿ ಹೋದೆ. ಈಗ ಬಿಜೆಪಿ ವಿರೋಧ ಪಕ್ಷದ ನಾಯಕರು ಕರೆದರು ಹೋಗುತ್ತೇನೆ. ಕಾಮಗಾರಿಗಳ ತನಿಖೆಗೆ ಎಸ್ ಐಟಿ ತನಿಖೆಗೆ ವಹಿಸುವುದು ಬೇಡ ಎಂದು ಹೇಳಿದರು.
ನಾವು 40% ಭ್ರಷ್ಟಾಚಾರ ನಡೀತಿದೆ ಅಂತ ಆರೋಪ ಮಾಡಿದ್ದೆವು.ನಮ್ಮ ಬಳಿ ದಾಖಲೆ ಇದೆ, ಒನ್ ಮ್ಯಾನ್ ಕಮೀಷನ್ ಬಳಿ ಹೋಗಿ ದಾಖಲೆ ಕೊಡುತ್ತೇನೆ. ಬವಸರಾಜ ಬೊಮ್ಮಾಯಿಗೆ ಎಷ್ಟು ಬಾರಿ ಭೇಟಿ ಮಾಡಲು ಸಮಯ ಕೇಳಿದ್ದೇವು. ಆದರೆ, ಅವರು ನಮಗೆ ಭೇಟಿಗೆ ಅವಕಾಶವೇ ಕೊಡಲಿಲ್ಲ. ಅವರಿಗೆ ಚೀಟಿ ಕೊಟ್ಟೆವು, ಜೇಬಲ್ಲಿ ಇಟ್ಟುಕೊಂಡು ಹೋದರು. ಕರೆದು ಮಾತಾಡೋ ಕೆಲಸ ಮಾಡಲಿಲ್ಲ. ಅವರಿಗೆ ಬೇಕಾದವರಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ. ಆದರೂ ನಮಗೆ ಈಗಲೂ ಅವರ ಮೇಲೆ ಗೌರವ ಇದೆ ಎಂದು ಹೇಳಿದರು.
ಆಗಸ್ಟ್ 31ರೊಳಗೆ ಗುತ್ತಿಗೆದಾರರ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು.ಕಾಮಗಾರಿಗಳನ್ನು ಪ್ರಮುಖವಾಗಿ ಕೈಗೊಳ್ಳುವ ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಲಾಖೆಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಕೆಲಸಗಳಿಗೂ ಹಣ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
25 ಸಾವಿರ ಕೋಟಿ ಬಿಲ್ ಬಾಕಿ ಇದೆ. ಈ ಕುರಿತು ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡುತ್ತೇವೆ, ಮುಂದೆ ಕಾದು ನೋಡಿ ಮೀಟಿಂಗ್ ಕರೆದು ತಿರ್ಮಾನ ಮಾಡುತ್ತೇವೆ. ಎಷ್ಟೋ ಭಾಗ್ಯ ಸರ್ಕಾರ ಕೊಟ್ಟಿದೆ ನಮಗೂ ಕಂಟ್ರಾಕ್ಟರ್ ಭಾಗ್ಯ ಕೊಡಿ ಎಂದು ಹೇಳಿದರು.
ಎಲ್ಲಾ ಕಾಮಗಾರಿ ತನಿಖೆ ಮಾಡುವ ವಿಚಾರವಾಗಿ ಮಾತನಾಡಿ, ನಮಗೆ ಗ್ಯಾರಂಟಿ ಪೀರಿಯಡ್ ಇರೋದು ಒಂದು ವರ್ಷ. ಮೂರು ವರ್ಷವಾದ್ರೂ ಹಣ ಬಿಡುಗಡೆ ಮಾಡಿಲ್ಲ, ನಾವು ಕಾಂಗ್ರೆಸ್ ಸರ್ಕಾರ ಹಾಕಿರೋ ಕಂಡೀಷನ್ ವಿರೋಧ ಮಾಡುತ್ತೇವೆ. ಹಣ ಬಿಡುಗಡೆ ಮಾಡುವಾಗ ತನಿಖೆ ಮಾಡ್ತಾರೆ. ಚೀಫ್ ಕಮೀಷನರ್ ಮಾಡುವ ನೀತಿಗೆ ನಮ್ಮ ವಿರೋಧ ಇದೆ. ಗುತ್ತಿಗೆದಾರರು ಸರಿಯಾಗಿದ್ದು, ನಮ್ಮ ಬಳಿ ಬಂದು ಮನವಿ ಮಾಡಿಕೊಂಡ್ರೆ ಅವರ ಪರವಾಗಿ ನಿಲ್ಲುತ್ತೇವೆ ಎಂದು ಹೇಳಿದರು.












Click it and Unblock the Notifications