ಕರ್ನಾಟಕ ಹವಾಮಾನ ವರದಿ, ಬಹುತೇಕ ಜಿಲ್ಲೆಗಳಲ್ಲಿ ಚಳಿ, ಒಣಹವೆ

ಬೆಂಗಳೂರು, ಡಿಸೆಂಬರ್ 31: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಹಾಗೂ ಒಣಹವೆ ಮುಂದುವರೆಯಲಿದೆ.

Recommended Video

      ಕರ್ನಾಟಕದಲ್ಲಿ ಮುಂದಿನ ಎರೆಡು ದಿನ ಮಳೆ | Karnataka Rain | Oneindia Kannada

      ಡಿಸೆಂಬರ್ 31 ಹಾಗೂ ಜನವರಿ 1 ರಂದು ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

      ಕೊಡಗು,ಮಂಡ್ಯ,ಮೈಸೂರಿನಲ್ಲಿ ಮಳೆಯಾಗಲಿದೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ಬೀದರ್‌ನಲ್ಲಿ 11.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

      Dry Weather And Cold Wave Prevailed Over Karnataka

      ಬೆಂಗಳೂರಿನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಉತ್ತರ ಭಾರತದ ಪರ್ವತ ಪ್ರದೇಶಗಳಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಹರಿಯಾಣದ ಹಿಸಾರ್‌ನಲ್ಲಿ ಕೆಲ ಭಾಗಗಳಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

      ಜಮ್ಮು-ಕಾಶ್ಮೀರ, ಲಡಾಖ್, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಶೀತ ವಾತಾವರಣ ಹೆಚ್ಚಾಗಿದೆ. ಪಶ್ಚಿಮ ಹಿಮಾಲಯದಿಂದ ಶೀತ ಮತ್ತು ಶುಷ್ಕ ಮಾರುತಗಳು ಬೀಸುತ್ತಿರುವುದರಿಂದ ತಾಪಮಾನ ಕುಸಿದಿದೆ. ದೆಹಲಿಯಲ್ಲಿ ಶೀತಗಾಳೀ ಬೀಸುತ್ತಿದ್ದು, ಕನಿಷ್ಠ ತಾಪಮಾನ 3.6 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

      ಹೊಸ ವರ್ಷದ ವೇಳೆ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಉತ್ತರ ಕಾಶ್ಮೀರದ ಗುಲ್ಮಾರ್ಗ್ ಬಳಿ ಸುಮಾರು 7ಇಂಚಿನಷ್ಟು ಹಿಮಪಾತವಾಗಿದ್ದು, ದಕ್ಷಿಣದ ಪಹಲ್ಗಮ್ ಮತ್ತು ಮಧ್ಯ ಕಾಶ್ಮೀರದ ಸೋನಮಾರ್ಗ್‌ನಲ್ಲಿ ಮೂರರಿಂದ ನಾಲ್ಕು ಇಂಚುಗಳಷ್ಟು ಹಿಮಪಾತವಾಗಿದೆ. ದೇಶದ ವಿವಿಧ ಭಾಗದ ಪ್ರವಾಸಿಗಳು ಕಣಿವೆಗೆ ಧಾವಿಸುತ್ತಿದ್ದಾರೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+