Karnataka Draught Relief: ಬರ ಪರಿಹಾರದ ₹2000 ಪಡೆಯಲು ನೀವು ಅರ್ಹರೆ? ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಇಲ್ಲಿ ಚೆಕ್ ಮಾಡಿ
ಬೆಂಗಳೂರು, ಡಿಸೆಂಬರ್ 05: ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ನಿರೀಕ್ಷಿತವಾಗಿ ಬಾರದೇ ಬೀಕರ ಬರಗಾಲ ಸೃಷ್ಟಿಯಾಗಿದೆ. ಈ ಕುರಿತು ಸರ್ವೇ ನಡೆಸಿರುವ ರಾಜ್ಯ ಸರ್ಕಾರವು ಕೇಂದ್ರದ ಅನುದಾನ ಬರುವವರೆಗೆ ಕಾಯದೇ ಮೊದಲ ಕಂತಿನಲ್ಲಿ 2000 ರೂಪಾಯಿ ವಿತರಿಸುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗಾದರೆ ಮೊದಲ ಕಂತಿನ ಪರಿಹಾರ ವಿತರಣೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೆ? ಎಂಬುದನ್ನು ಪರಿಶೀಲಿಸಿಕೊಳ್ಳುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಗಾಲ ಪ್ರದೇಶ ಎಂದು ಘೋಷಿಸಲಾಗಿದೆ. ಇಷ್ಟು ತಾಲೂಕುಗಳ ರೈತರಿಗೆ ಮೊದಲ ಕಂತಿನಲ್ಲಿ ತಲಾ 2000 ರೂ. ಹಣ ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ.

ಮಳೆ ಬಾರದೇ ಬರಗಾಲ ಉಂಟಾದ ಪರಿಣಾಮ 48ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗಿ ಹಾಳಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಈ ಬೆಳೆ ನಷ್ಟ (18,171 ಕೋಟಿ) ಆರ್ಥಿಕ ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಇತ್ತೀಚೆಗೆ ಸ್ವತಃ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ ಕೇಂದ್ರದ ಹಣ ಬರುವ ಮೊದಲು ಮೊದಲ ಕಂತಿನಲ್ಲಿ ರಾಜ್ಯ ಸರ್ಕಾರವೇ ಹಣ ನೀಡಲು ಮುಂದಾಗಿದೆ ಎಂದಿದ್ದರು.
ರಾಜ್ಯ ಸರ್ಕಾರದ ಈ ವೆಬ್‌ಸೈಟ್‌ನಲ್ಲಿ ನಿಮ್ಮ ಹೆಸರು ಪರಿಶೀಲಿಸಲು ಹಂತ ಹಂತವಾಗಿ ಈ ವಿಧಾನಗಳು ತಿಳಿದುಕೊಳ್ಳಿ. ಮೊದಲು ನೀವು https://parihara.karnataka.gov.in/service87/ ಈ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
* ಈ ಮೇಲಿನ ಲಿಂಕ್ ಕ್ಲಿಕ್ ಮಾಡಿದ ತಕ್ಷಣವೇ ಪರಿಹಾರ ಬೆನಿಫಿಷರಿ (ಫಲಾನುಭವಿ) ಪೇಮೆಂಟ್ ರಿಪೋರ್ಟ್ ಎಂಬ ಪರದೇ ತೆರೆಯುತ್ತದೆ.

* ನಂತರ ಅಲ್ಲಿ ಕೇಳಲಾಗುವ ಅಗತ್ಯ ಮಾಹಿತಿಗಳು ನಮೂದಿಸಬೇಕು.
* ಪರದೆ ಮೇಲೆ ಕಾಣುವ ಖಾಲಿ ಬಾಕ್ಸ್‌ಗಳಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೂಬಳಿ ಮತ್ತು ಹಳಿಯನ್ನು ಆಯ್ಕೆ ಮಾಡಬೇಕು.
* ಜೊತೆಗೆ ವರ್ಷದ ಆಯ್ಕೆ ಮೇಲೆ ಕ್ಲಿಕ್ ಮಾಡಿ ವರ್ಷ (Year) ಆಯ್ಕೆ ಮಾಡಿಕೊಳ್ಳಬೇಕು. ಯಾವ ಋತುವಿನ ಬೆಳೆ (Season) ಎಂಬುದನ್ನು ನಮೂದಿಸಬೇಕು. ನಂತರ ವಿಪತ್ತು ಯಾವುದು (Calamity) ಎಂಬುದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಬರಗಾಲ (Draught) ಎಂಬುದನ್ನು ಆಯ್ಕೆ ಮಾಡಿ.
* ಎಲ್ಲವೂ ಸರಿಯಾಗಿದೆಯೆ ಎಂದು ಒಮ್ಮೆ ಪರಿಶೀಲಿಸಿ ಬಳಿಕ ಗೆಟ್ ರಿಪೋರ್ಟ್ (Get report) ಮೇಲೆ ಕ್ಲಿಕ್ ಮಾಡಿ.
* ಬಳಿಕ ಫಲಾನುಭವಿಗಳ ವರದಿ (Report) ತೆರೆದುಕೊಳ್ಳುತ್ತದೆ.
* ಅಲ್ಲಿ ನೀವು ಬರ ಪರಿಹಾರ ಹಣಕ್ಕೆ ಅರ್ಹರಾಗಿದ್ದರೆ ಅಲ್ಲಿ ನಿಮ್ಮ ಹೆಸರು, ಆಧಾರ ಕಾರ್ಡ್ ಸಂಖ್ಯೆ, ಮೊತ್ತ ಮತ್ತು ಜಮೆ ಆಗಿದೆಯೇ ಇಲ್ಲ ಎಂಬ ಮಾಹಿತಿ (Paid) ಸಿಗುತ್ತದೆ.
* ಅಗತ್ಯವೆನಿಸಿದರೆ ಪರದೆಯ ಬಲಬದಿಯಲ್ಲಿ ಕಾಣುವ ವ್ಯೂವ್ ಸ್ಟೇಟಸ್ (View Status) ಆಯ್ಕೆ ಮಾಡಿಕೊಳ್ಳಬೇಕು.
* ವ್ಯೂವ್ ಸ್ಟೇಟಸ್ ಆಯ್ಕೆ ಬಳಿಕ ಖಾತೆದಾರರ ಹೆಸರು, ಬ್ಯಾಂಕ್ ಖಾತೆ ನಂಬರ್ ಹಣ ಜಮೆ ಆಗಿದೆ-ಇಲ್ಲ ಎಂಬ ಮಾಹಿತಿ, ಸಂದಾಯವಾಗಿದ್ದರೆ ಜಮೆ ಆದ ದಿನಾಂಕವನ್ನು ತೋರಿಸುತ್ತದೆ.
* ಯಾವ ವಿಪತ್ತಿನಡಿ ನಿಮ್ಮ ಖಾತೆ ಹಣ ಜಮೆ ಆಗಿದೆ ಎಂದು ಸ್ಟೇಟಸ್ ಅನ್ನು ಸಹ ನೀವು ಅಲ್ಲಿ ನೋಡಬಹುದಾಗಿದೆ.
'ಪರಿಹಾರ ಹಣ ಸಂದಾಯ ವರದಿ' ವಿಧಾನ
ರಾಜ್ಯ ಸರ್ಕಾರ ಈ ವಿಧಾನ ಜೊತೆಗೆ ಮತ್ತೊಂದು ನೇರ ವಿಧಾನ 'ಪರಿಹಾರ ಹಣ ಸಂದಾಯ ವರದಿ' ಪರಿಚಯಿಸಿದೆ. ಇಲ್ಲಿ ನೀಡಿರುವ ಲಿಂಕ್ https://landrecords.karnataka.gov.in/PariharaPayment/ ಗೆ ಭೇಟಿ ನೀಡಿಬೇಕು.
* ವೆಬ್‌ಸೈಟ್‌ಗೆ ಭೇಟಿ ಬಳಿಕ ಅಲ್ಲಿ ಕಾಣುವ ಪರಿಹಾರ ನಮೂದು ಐಡಿ ಮೇಲೆ ಕ್ಲಿಕ್ ಮಾಡಿ. ಇಲ್ಲವೇ ಆದಾಯ ಸಂಖ್ಯೆಯನ್ನಾದರೂ ಆಯ್ಕೆ ಮಾಡಿಕೊಳ್ಳಬೇಕು.
* ಬಳಿಕ ಯಾವ ವರ್ಷದ ಪರಿಹಾರ ಹುಡುಕುತ್ತಿದ್ದೀರಿ ಎಂದು ವರ್ಷ ಆಯ್ಕೆ ಮಾಡಿಕೊಳ್ಳಿ.
* ಇನ್ನೊಂದು ಕಾಲಂ ನಲ್ಲಿ 12 ಸಂಖ್ಯೆವುಳ್ಳ ನಿಮ್ಮ ಆಧಾರ್ ನಂಬರ್ ನಮೂದಿಸಿ
* ನಂತರ ಖಾಲಿ ಬಾಕ್ಸ್‌ನಲ್ಲಿ ಕ್ಯಾಪ್ಚಾ ಹಾಕಿ ವಿವರ ಪಡೆಯಿರಿ (Fetch Details) ಮೇಲೆ ಕ್ಲಿಕ್ ಮಾಡಬೇಕು.
* ಆಗ ಹಣ ಸಂದಾಯ ವಿವರಗಳ ವರದಿ ತೆರೆದುಕೊಳ್ಳುತ್ತದೆ.
* ಅಲ್ಲಿ ಕ್ರಮವಾಗಿ ಬ್ಯಾಂಕ್ ಖಾತೆ, ಊರು, ಜಿಲ್ಲೆ ಹೆಸರು, ಖಾತೆದಾರರ ಹೆಸರು ಸಮೇತ ಪರಿಹಾರ ಹಣ ಸಂದಾಯವಾಗಿದೆಯೇ ಇಲ್ಲವೊ ಎಂದು ಪ್ರದರ್ಶನವಾಗುತ್ತದೆ.












Click it and Unblock the Notifications