ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಕುಸಿತ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 17 : ಸಾಮಾನ್ಯವಾಗಿ ಜಲವಿದ್ಯುತ್ ಘಟಕಗಳು ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವುದು ಸಾಮಾನ್ಯವಾದ ಸಂಗತಿ. ಈ ವರ್ಷ ತೀವ್ರ ಬರಗಾಲ ಇರುವುದರಿಂದ ಐತಿಹಾಸಿಕ ಶಿವನಸಮುದ್ರದ ಜಲವಿದ್ಯುತ್ ಘಟಕಗಳು ಸಂಪೂರ್ಣವಾಗಿ ಸ್ಥಬ್ದಗೊಂಡಿವೆ.

ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಯಾಗಲು ಕಾವೇರಿ ನದಿ ತುಂಬಿ ಹರಿಯಬೇಕು. ಈ ಬಾರಿ ಕೆಆರ್‍ಎಸ್ ತುಂಬದ ಕಾರಣ ಮತ್ತು ಈಗಾಗಲೇ ನೀರಿನ ಮಟ್ಟ ತಳ ಸೇರಿರುವುದರಿಂದ ಅಣೆಕಟ್ಟಿನಿಂದ ಹೊರಕ್ಕೆ ನೀರು ಬಿಡಲಾಗುತ್ತಿಲ್ಲ. ಆದ್ದರಿಂದ, ವಿದ್ಯುತ್ ಉತ್ಪಾದನೆ ಶೇ.98ರಷ್ಟು ಉತ್ಪಾದನೆ ಕುಂಠಿತಗೊಂಡಿದೆ. [ಬಕ್ಕ ಬರಿದಾದ ಕೆಆರ್ ಎಸ್, ಕೊಡಗಿನಲ್ಲಿ ಮಳೆ ಸಿಂಚನ]

shivanasamudra

ಇಲ್ಲಿರುವ ಒಟ್ಟು 12 ವಿದ್ಯುತ್ ಉತ್ಪಾದನಾ ಘಟಕಗಳ ಪೈಕಿ 11 ಘಟಕಗಳು ಉತ್ಪಾದನೆಯನ್ನು ನೀರಿನ ಕೊರತೆಯಿಂದಾಗಿ ನಿಲ್ಲಿಸಿವೆ. ಕೇವಲ ಒಂದು ಘಟಕ ಮಾತ್ರ ಉತ್ಪಾದನೆಯಲ್ಲಿ ತೊಡಗಿದೆ. [ಮುಂಗಾರು ಪ್ರವೇಶ ಒಂದು ವಾರ ವಿಳಂಬ]

ಹಾಗೆ ನೋಡಿದರೆ ಶಿವನಸಮುದ್ರದಲ್ಲಿ ಶ್ರೀ ಕೆ.ಶೇಷಾದ್ರಿ ಅಯ್ಯರ್ ವಿದ್ಯುತ್ ಕೇಂದ್ರ ಮತ್ತು ಶಿವಪುರಂ ಜಲ ವಿದ್ಯುತ್ ಉತ್ಪಾದನಾ ಕೇಂದ್ರವು ಪ್ರಮುಖವಾಗಿವೆ. ಶ್ರೀ ಕೆ.ಶೇಷಾದ್ರಿ ಅಯ್ಯರ್ ವಿದ್ಯುತ್ ಕೇಂದ್ರ 1902ರಲ್ಲಿಯೂ, ಶಿವಪುರಂ ಜಲ ವಿದ್ಯುತ್ ಉತ್ಪಾದನಾ ಕೇಂದ್ರ 1939ರಲ್ಲಿ ಕಾರ್ಯಾರಂಭ ಮಾಡಿವೆ. ಅಲ್ಲಿಂದ ಇಲ್ಲಿ ತನಕವೂ ವಿದ್ಯುತ್ ಉತ್ಪಾದನಾ ಕಾರ್ಯದಲ್ಲಿ ತಮ್ಮ ಛಾಪು ಮೂಡಿಸುತ್ತಾ ಬಂದಿವೆ. [ಉತ್ತರ ಕನ್ನಡದ ಜೀವನಾಡಿ ಅಘನಾಶಿನಿಯೂ ಬರಿದು]

ದಿನನಿತ್ಯ 1.5 ಮಿಲಿಯನ್ ಯೂನಿಟ್ಸ್ ನಿಂದ 3 ಮಿಲಿಯನ್ ಯೂನಿಟ್ಸ್ ವರೆಗೆ ವಿದ್ಯುತ್ ಉತ್ಪಾದಿಸುತ್ತಿದ್ದ ಘಟಕಗಳು ಈಗ ಕೇವಲ 20,640 ಯೂನಿಟ್‌ ಉತ್ಪಾದನೆಗೆ ಸೀಮಿತಗೊಂಡಿವೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ಕಾವೇರಿ ನದಿ ತುಂಬಿ ಹರಿದರೆ ವಿದ್ಯುತ್ ಉತ್ಪಾದನೆ ಕೂಡ ಹೆಚ್ಚಳವಾಗಲಿದೆ ಅಲ್ಲಿ ತನಕ ವಿದ್ಯುತ್ ಉತ್ಪಾದನೆಯಲ್ಲಿ ಇಳಿಕೆ ಸಾಮಾನ್ಯವಾಗಿದೆ.

ಅಂದಹಾಗೆ ಶಿವನಸಮುದ್ರದಲ್ಲಿ 1902ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಲಾಯಿತು. ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರವಿದಾಗಿದೆ. ಮೇ 16ರಂದು ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 79.13 ಅಡಿಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The drought situation has affected the power generation in Shivanasamudra, Mandya. 11 of its generating units have stopped operations due to shortage of water.
Please Wait while comments are loading...