ಮನಕಲಕುವ ಚಿತ್ರಕ್ಕೆ ಸ್ನೇಹಿತರ ಅದ್ಭುತ ಪ್ರತಿಸ್ಪಂದನೆ

Subscribe to Oneindia Kannada

ಬೇಸಿಗೆ, ಬರ, ಕುಡಿಯುವ ನೀರಿಗೆ ಹಾಹಾಕಾರ ಇವು ಒಂದಕ್ಕೊಂದು ಪೂರಕ ಶಬ್ದಗಳು ಎಂಬಂತೆ ಭಾಸವಾಗುತ್ತಿದೆ. ಇಡೀ ದೇಶ, ಅರ್ಧ ಕರ್ನಾಟಕ ಬರದ ಬವಣೆಗೆ ತಲುಪಿದೆ. ವರುಣನ ಕೃಪೆಯೊಂದೇ ಉಳಿದಿರುವ ಪರಿಹಾರ.

ಬಾಯಾರಿದ ಮನುಷ್ಯರು ಎಲ್ಲೋ, ಹೇಗೋ ನೀರು ಕುಡಿದು ದಾಹ ಇಂಗಿಸಿಕೊಂಡಾರು? ಆದರೆ ಜಾನುವಾರುಗಳ ಪರಿಸ್ಥಿತಿ? ಹೌದು ಇಂಥದ್ದೊಂದು ಪ್ರಶ್ನೆಯನ್ನು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗುತ್ತದೆ. ಬಾಯಾರಿದ ಹಸುವೊಂದು ಕೊಳವೆ ಬಾವಿಯ ನೀರಿಗೆ ಬಾಯಿ ಒಡ್ಡುತ್ತಿದ್ದ ಚಿತ್ರ ಬರದ ಕತೆ ನಿಮ್ಮ ಮುಂದೆ ಇಡುತ್ತದೆ. ಇದೊಂದು ಫೋಟೋ ಸಾಕು ಇಂದಿನ ಪರಿಸ್ಥಿತಿಯನ್ನು ವಿವರಿಸಲು.[ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]

drinking water

ಒನ್ಇಂಡಿಯಾ ಕನ್ನಡ ಫೇಸ್ ಬುಕ್ ಪೇಜ್ ಗೆ ಹಾಕಿದ್ದ ಇಂಥದ್ದೊಂದು ಫೋಟೋಕ್ಕೆ ಜನ ಅವರದ್ದೇ ಆದ ಬಗೆಯಲ್ಲಿ ಶೀರ್ಷಿಕೆ ನೀಡುತ್ತಾ ಹೋಗಿದ್ದಾರೆ. ಜನರ ನಿಜವಾದ ಭಾವನೆಗಳು ಇಲ್ಲಿ ವ್ಯಕ್ತವಾಗಿದ್ದು, ಸ್ನೇಹಿತರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಸ್ನೇಹಿತರು ಮನಕರಗಿಸುವಂಥ ಚಿತ್ರಕ್ಕೆ ನೀಡಿದ ಕಾಮೆಂಟುಗಳಲ್ಲಿ ಕೆಲವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಜನರು ಜಲ ಸಂರಕ್ಷಣೆ ಮತ್ತು ಬರದ ಬವಣೆ ಬಗ್ಗೆ ಅಂತರಾಳದ ಮಾತುಗಳನ್ನು ಹೊರಹಾಕಿದ್ದಾರೆ.

ಮನಕಲಕುವ ಚಿತ್ರ 8.5 ಸಾವಿರ ಲೈಕ್ ಗಳನ್ನು ಪಡೆದುಕೊಂಡಿದ್ದರೆ 4 ನೂರು ಶೇರ್ ಆಗಿದೆ. 500ಕ್ಕೂ ಅಧಿಕ ಕಮೆಂಟ್ ಗಳು ಬಂದಿದ್ದು ಜಲಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಮಾತನಾಡಿದ್ದಾರೆ. ಕಮೆಂಟ್ ಗಳ ಮೂಲಕ ಸ್ಪಂದಿಸಿದ ಓದುಗರ ಕಾಳಜಿಗೆ ನಾವು ಚಿರಋಣಿ.

ಮನೆ ಮುಂದೆ ನೀರು ಇಡಿ
ಹಿಂದಿನ ಕಾಲದಲ್ಲಿ ಮನೆಯ ಮುಂದೆ ತೊಟ್ಟಿಗಳಲ್ಲಿ ನೀರು ತುಂಬಿ ಬೀದಿ ದನಗಳು ಕುಡಿಯಲೆಂದು ಇಡುತ್ತಿದ್ದರು. ಈರೀತಿ ಮಾಡುವದರಿಂದ ದನಗಳಿಗೆ ತಮ್ಮ ದಾಹ ತೀರಿಸಿಕೊಳ್ಳುವ ಅವಕಾಶ ಸಿಗುತ್ತಿತ್ತು-Nagalakshmi[ಕುಡಿಯಾಕ್ ತೊಟ್‌ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]

ನೀರು ಪೋಲು ಮಾಡದಿರಿ
ಅನವಶ್ಯಕವಾಗಿ ನೀರನ್ನು ಪೋಲು ಮಾಡುವ ಮನುಷ್ಯರು ಪ್ರಾಣಿಗಳ ಬಾಯಾರಿಕೆಯನ್ನು ತೀರಿಸಲು ಮನಸ್ಸು ಮಾಡಬೇಕು. ನೀರನ್ನು ಮೊದಲು ಉಳಿಸಿ-Anusha Salyan

ಜನನಾಯಕರಿಗೆ ಕಾಣಿಸಲ್ಲವೆ?
ರಾಜಕಾರಿಣಿಗಳ ಮನೇಲಿ ಬಿಸ್ಲೆರಿ ವಾಟರ್, ಆದರೆ ಈ ಮೂಖ ಪ್ರಾಣಿಯ ಬಾಯಾರಿಕೆ ಜನನಾಯಕರಿಗೆ ಕಾಣಿಸೋದಿಲ್ಲವೇ? ಸಾವ೯ಜನಿಕ ಸ್ಥಳಗಳಲ್ಲಿ ಪ್ರಾಣಿಳಿಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು-Somashekhar Shekhar

ಎಫ್ ಬಿಯಲ್ಲಿ ಲೈಕ್ ಗಿಟ್ಟಿಸುವುದಲ್ಲ
ಫೇಸ್ ಬುಕ್ ನಲ್ಲಿ ಚಿತ್ರ ಹಾಕಿ ಲೈಕ್ ಗಿಟ್ಟಿಸಿಕೊಳ್ಳುವುದಲ್ಲ. ಒಂದು ಪಾತ್ರೆಯಲ್ಲಿ ನೀರು ತುಂಬಿ ಮನೆಯ ಹೊರಗೆ ಇಡೀ, ಆಗ ದೇವರೇ ನಿಮಗೆ ಲೈಕ್ ಕೊಡುತ್ತಾನೆ-Chitru Pradeep

ಹನಿ ನೀರಿನ ಮಹತ್ವ ಸಾರುವ ಚಿತ್ರ

ಒಂದು ಹನಿ ನೀರಿನ ಬೆಲೆ ಮತ್ತು ಮಹತ್ವ ಈ ಚಿತ್ರದಿಂದ ಗೊತ್ತಾಗುತ್ತದೆ-Manjunath Karajanagi

ಪಶುಗಳಿಗೆ ನೀರು ನೀಡದ ರಾಜ್ಯ ಸರ್ಕಾರದ ಪಶುಗಳು-Chandru H Siddaiah
ಭಗವಂತ ನೀನೇಕೆ ಇಷ್ಟು ಕ್ರೂರಿಯಾದೆ.. ಗೋಮಾತೆ ಮಾಡಿದ ತಪ್ಪೇನು...?-Chaithra Acharya
ರಾಜಕಾರಣಿಗಳ ಧನ ದಾಹದ ನಡುವೆ ಕಾಣದ ದನದ ದಾಹ "-Dharane Rn
ಬೆಂಕಿಯ ಮಳೆ ನೀರಿಕ್ಷೆ-Basavaraj Chabbi Chabbi
ಸಾವಿರಾರು ವರ ನೀಡೊ ಗೋಮಾತೆಗೆ ತೀರುತ್ತಿಲ್ಲ ನೀರಿನ ದಾಹ-CM Basava Galag
"ಅಮೃತಾಂಗನೆಯ ಅಳಲು"-Shridhar K Yash

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Almost Karnataka facing Drinking water problem. Our oneindia posted a picture which shows the pathetic condition of drought and drinking water problem mainly animals. Readers express their own opinion and solution through comments. Here are the best comments.
Please Wait while comments are loading...