• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Corona ಉಸಿರಾಟದ ತೊಂದರೆಯನ್ನು ಮನೆಯಲ್ಲಿಯೆ ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ!

|

ಬೆಂಗಳೂರು, ಸೆ. 10: ಕೊರೊನಾ ವೈರಸ್‌ನ್ನು ಎದುರಿಸಿ ಗುಣಮುಖರಾದವರು ಅದೊಂದು ಖಾಯಿಲೆಯೆ ಅಲ್ಲ ಬಿಡಿ ಎನ್ನುತ್ತಾರೆ. ಆದರೆ ಕೊರೊನಾ ವೈರಸ್ ನಿಂದ ಸಾವು ಸಂಭವಿಸುವುದೇ ಇಲ್ಲ ಎನ್ನುವಂತಿಲ್ಲ. ಬೇರೆಲ್ಲ ರೋಗ ಲಕ್ಷಣಗಳಿಗಿಂತ ಉಸಿರಾಟದ ತೊಂದರೆ ಕಾಣಿಸಿಕೊಂಡ ಹೆಚ್ಚಿನ ಸೋಂಕಿತರು ಮೃತಪಟ್ಟಿರುವುದು ನಿಜ. ಹೀಗಾಗಿ ಕೊರೊನಾ ವೈರಸ್ ಸೋಂಕಿತರು ಪ್ರಮುಖವಾಗಿ ಆಕ್ಸಿಜನ್ ಸ್ಯಾಚುರೇಶನ್ (ರಕ್ತದಲ್ಲಿನ ಆಮ್ಲಜನಕದ ಪ್ರಮಾಣ) ಗಮನ ಕೊಡಲೇ ಬೇಕು ಎನ್ನುತ್ತಾರೆ ತಜ್ಞ ವೈದ್ಯರು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಉಸಿರಾಟದ ತೊಂದರೆ ಕಾಣಿಸಿಕೊಂಡವರೆಲ್ಲರಿಗೂ ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ಕೊಡಬೇಕು ಎಂದೇನಿಲ್ಲ. ಮನೆಯಲ್ಲಿಯೇ ಹಲವು ಕ್ರಮಗಳನ್ನು ಪಾಲನೆ ಮಾಡುವುದರಿಂದ ಉಸಿರಾಟದ ತೊಂದರೆಯಿಂದ ಚೇತರಿಸಿಕೊಳ್ಳಬಹುದು. ಯೋಗ ಸಾಧನೆ ಮಾಡುವವರು ಹಾಗೂ ತಜ್ಞರು ಹೇಳುವಂತೆ, ಸಾಮಾನ್ಯ ಆರೋಗ್ಯವಂತರೂ ಕೂಡ ತಮ್ಮ ಶ್ವಾಸಕೋಶಗಳಲ್ಲಿ ಕೇವಲ ಶೇಕಡಾ 30ರಷ್ಟು ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳತ್ತೇವೆ. ಅಂದರೆ ನಾವು ನಮ್ಮ ಶ್ವಾಸಕೋಶದ ಶೇಕಡಾ 70ರಷ್ಟು ಸಾಮರ್ಥ್ಯವನ್ನು ನಾವು ಬಳಸಿಕೊಳ್ಳುವುದೇ ಇಲ್ಲ. ಅದರಿಂದಾಗಿಯೇ ರಕ್ತಕಣಗಳಿಗೆ ಸಾಕಷ್ಟು ಆಮ್ಲಜನಕ ಸಿಗುವುದೇ ಇಲ್ಲ. ಹೀಗಾಗಿ ಆರೋಗ್ಯವಂತರಿಗೂ ಕೂಡ ಉಸಿರಾಟದ ವ್ಯಾಯಾಮ ಅತ್ಯಗತ್ಯ.

ಭಾರತದಲ್ಲಿಯೂ 'ಕೋವಿಶೀಲ್ಡ್' ಲಸಿಕೆ ಪ್ರಯೋಗಕ್ಕೆ ತಡೆ

ಆದರೂ ಕೊರೊನಾ ವೈರಸ್ ಸೋಂಕು ತಗುಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೂ ಮೊದಲು ಅನುಸರಿಸಲು ಹಲವು ಸಲಹೆಗಳನ್ನು ತಜ್ಞರು ಕೊಟ್ಟಿದ್ದಾರೆ. ಮನೆಯಲ್ಲಿಯೆ ಅನುಸರಿಸಬಹುದಾದ ಈ ಸರಳ ಮಾರ್ಗಗಳ ಮೂಲಕ ಖಂಡಿತವಾಗಿಯೂ ದೇಹದಲ್ಲಿ ಆಮ್ಲಜನಕ ಪ್ರಮಾಣವನ್ನು ಕಾಪಾಡಿಕೊಳ್ಳಬಹುದು.

ಏನಿದು ಆಕ್ಸಿಜನ್ ಸ್ಯಾಚುರೇಷನ್?

ಏನಿದು ಆಕ್ಸಿಜನ್ ಸ್ಯಾಚುರೇಷನ್?

ನಮ್ಮ ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣವೇ ಆಕ್ಸಿಜನ್ ಸ್ಯಾಚುರೇಶನ್. ನಾವು ಉಸಿರಿನಿಂದ ತೆಗೆಕೊಳ್ಳುವ ಗಾಳಿ ಶ್ವಾಸಕೋಶವನ್ನು ಸೇರುತ್ತದೆ. ಅಲ್ಲಿ ಗಾಳಿಯಲ್ಲಿನ ಆಮ್ಲಜನಕವನ್ನು ಕೆಂಪು ರಕ್ತಕಣಗಳು ಹೀರಿಕೊಂಡು ನಮ್ಮ ದೇಹದ ಉಳಿದೆಲ್ಲ ಕಣಗಳಿಗೆ ಸರಬರಾಜು ಮಾಡುತ್ತವೆ.

ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಕಡಿಮೆ ಆದಾಗ ಅದರ ಪರಿಣಾಮ ದೇಹದ ಪ್ರತಿಯೊಂದು ಜೀವಕಣದ ಮೇಲಾಗುತ್ತದೆ. ಏಕೆಂದರೆ ದೇಹದ ಪ್ರತಿ ಜೀವಕಣಕ್ಕೆ ಕಾರ್ಬನ್ ಡೈಯಾಕ್ಸೈಡ್, ಪ್ರೊಟೀನ್, ವಿಟಮಿನ್‌ಗಳಂತೆ ಆಕ್ಸಿಜನ್ ಕೂಡ ಆಹಾರ ರೂಪದಲ್ಲಿ ಬೇಕು. ಕೆಂಪು ರಕ್ತಕಣಗಳು ಹೃದಯ, ಮೂತ್ರಪಿಂಡ, ಲಿವರ್ ಸೇರಿದಂತೆ ದೇಹದ ಎಲ್ಲ ಜೀವಕಣಗಳಿಗೆ ಆಮ್ಲಜನಕವನ್ನು ಶ್ವಾಸಕೋಶದಿಂದ ತೆಗೆದುಕೊಂಡು ಹೋಗಿ ಕೊಡುತ್ತವೆ. ಅದರ ಪ್ರಮಾಣ ಕಡಿಮೆಯಾದಲ್ಲಿ ಎಲ್ಲ ಅಂಗಾಂಗಗಳ ಜೀವಕಣಗಳು ಮೃತಪಡುತ್ತವೆ. ಅದೇ ಮುಂದೆ ಬಹುಅಂಗಾಂಗ ವೈಫಲ್ಯಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ರಾಜೂಸ್ ಹೆಲ್ದಿ ಇಂಡಿಯಾದ ಡಾ. ರಾಜು ಅವರು.

ಕೊರೊನಾ ಉಸಿರಾಟದ ಸಮಸ್ಯೆ

ಕೊರೊನಾ ಉಸಿರಾಟದ ಸಮಸ್ಯೆ

ಕೊರೊನಾದಿಂದ ಉಸಿರಾಟದ ಸಮಸ್ಯೆ ಆಗುತ್ತಿರುವುದು ನಿಜ. ಸೋಂಕು ತಗುಲಿದ ಬಳಿಕ ಒಂದು ವಾರ ಕೊರೊನಾವೈರಸ್ ದೇಹದಲ್ಲಿ ಇರುತ್ತದೆ. ಒಂದು ವಾರದ ಬಳಿಕ ಪರೀಕ್ಷೆ ಮಾಡಿಸಿದರೆ ಕೊರೊನಾ ನೆಗಟಿವ್ ಬರುವ ಸಾಧ್ಯತೆಗಳು ಇವೆ. ಆದರೂ ಶ್ವಾಸಕೋಶಗಳಲ್ಲಿ ಬದಲಾವಣೆ ಆಗುತ್ತದೆ. ಶ್ವಾಸಕೋಶಕ್ಕೆ ಹಾನಿಯಾಗಿರುತ್ತದೆ. ಇದು ಸೋಂಕು ತಗುಲುವ ಶೇಕಡಾ 30ರಷ್ಟು ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನುಳಿದ ಸುಮಾರು 70ರಷ್ಟು ಜನರಿಗೆ ಯಾವುದೇ ತೊಂದರೆ ಕಾಣಿಸಿಕೊಳ್ಳುವುದೇ ಇಲ್ಲ.

ಹೀಗೆ ಶೇಕಡಾ 30 ರಷ್ಟು ಜನರಲ್ಲಿ ಕಾಣಿಸಿಕೊಳ್ಳುವ ಉಸಿರಾಟ ಸಮಸ್ಯೆಗಳು ಕೂಡ ಸೌಮ್ಯ ಸ್ವರೂಪದಲ್ಲಿರುತ್ತವೆ. ಬೇಗನೆ ಹೋಗಿ ಆಸ್ಪತ್ರೆಗೆ ದಾಖಲಾದರೂ ಕೂಡ ಇದನ್ನು ತಪ್ಪಿಸಲು ಆಗುವುದಿಲ್ಲ. ಈ ಶೇಕಡಾ 30 ರಷ್ಟು ಸೋಂಕಿತರಲ್ಲಿಯೂ ಶೇಕಡಾ 2 ರಿಂದ 5ರಷ್ಟು ಜನರಲ್ಲಿ ಮಾತ್ರ ಉಸಿರಾಟದ ತೊಂದರೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಆಗ ಅವರಿಗೆ ತಕ್ಷಣ ಆಕ್ಸಿಜನ್ ಕೊಡಲೇಬೇಕು. ಆದರೂ ಆಕ್ಸಿಜನ್ ಸ್ಯಾಚುರೇಷನ್ ತುಂಬಾ ಕಡಿಮೆಯಾದಾಗ ಮಾತ್ರ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ಕೊಡಬೇಕು ಎಂದು ಸಲಹೆ ಕೊಡುತ್ತಾರೆ ಡಾ. ರಾಜು ಅವರು. ಜೊತೆಗೆ ಕೊರೊನಾ ಸೋಂಕಿತರ ಸಾವಿಗೆ ಇದಕ್ಕಿಂತಲೂ ಮತ್ತೊಂದು ಬಹುದೊಡ್ಡ ಕಾರಣವಿದೆ. ಅದು ಭಯ ಮತ್ತು ಒತ್ತಡ!

ಕೊರೊನಾ ಸೋಂಕಿತರಲ್ಲಿ ಸಾವಿನ ಅಪಾಯ ಪತ್ತೆ ಹಚ್ಚುವ ಸಾಧನ ಬಂದೇಬಿಡ್ತು

ಭಯ ಮತ್ತು ಒತ್ತಡದಿಂದ ಸಾವು

ಭಯ ಮತ್ತು ಒತ್ತಡದಿಂದ ಸಾವು

ಕೊರೊನಾ ಸೇರಿದಂತೆ ಆರೋಗ್ಯವಂತರಿಗೂ ಕೂಡ ಭಯ ಮತ್ತು ಒತ್ತಡ ತುಂಬಾ ಪರಿಣಾಮ ಬೀರುತ್ತವೆ ಎನ್ನುತ್ತಾರೆ ತಜ್ಞರು. ನಾವು ಭಯ ಅಥವಾ ಆತಂಕಗೊಂಡಾಗ ಸಹಜವಾಗಿ ಉಸಿರಾಡಲು ಆಗುವುದಿಲ್ಲ. ನಮ್ಮ ಉಸಿರಾಟ ತೀವ್ರವಾಗುತ್ತದೆ. ಅದರಿಂದ ಆಕ್ಸಿಜನ್ ಸ್ಯಾಚುರೇಷನ್ ತಕ್ಷಣವೇ ಕಡಿಮೆಯಾಗುತ್ತದೆ. ಹೀಗಾಗಿ ಭಯಮುಕ್ತವಾಗಿ ಇರುವುದರಿಂದ ನಮ್ಮ ಶ್ವಾಸಕೋಶಗಳು ಕೂಡ ಆರೋಗ್ಯವಂತವಾಗಿರುತ್ತವೆ. ಹೀಗಾಗಿ ಕೊರೊನಾ ವಿರುದ್ಧ ಗೆಲ್ಲಲು ಭಯದಿಂದ ಮೊದಲು ಹೊರಗೆ ಬನ್ನಿ ಎಂದು ವೈದ್ಯರು ಸಲಹೆ ಕೊಡುತ್ತಾರೆ.

ಇನ್ನು ಸುಮಾರು 65ಕ್ಕಿಂತ ಹೆಚ್ಚಿನ ವಯಸ್ಸಿನವರು, ಧೂಮಪಾನಿಗಳು, ಮಧುಮೇಹ, ಮೊದಲೇ ಉಸಿರಾಟದ ತೊಂದರೆ (ಸಿಓಪಿಡಿ) ಇದ್ದವರು, ಹೃದಯದ ತೊಂದರೆ ಇದ್ದವರಿಗೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಸೋಂಕು ತಗುಲಿದ ತಕ್ಷಣ ಇವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡುವ ಅಗತ್ಯವಿಲ್ಲ. ಆದರೆ ಹುಶಾರಾಗಿರಬೇಕು ಹಾಗೂ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು ಎಂದು ಡಾ. ರಾಜು ಸಲಹೆ ಕೊಟ್ಟಿದ್ದಾರೆ.

ಆಕ್ಸಿಮೀಟರ್‌ನಿಂದ ಪರೀಕ್ಷೆ

ಆಕ್ಸಿಮೀಟರ್‌ನಿಂದ ಪರೀಕ್ಷೆ

ಹೀಗಾಗಿ ಕೊರೊನಾ ವೈರಸ್‌ನಿಂದ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವ ಕೊರೊನಾ ವೈರಸ್ ಸೋಂಕಿತರು ಆಗಾಗ ಆಕ್ಸಿಮೀಟರ್‌ನಿಂದ ಪರೀಕ್ಷೆ ಮಾಡುತ್ತಿರಬೇಕು. ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ 90ಕ್ಕಿಂತ ಕಡಿಮೆ ಬಂದಾಗ ಆಸ್ಪತ್ರೆಗೆ ದಾಖಲಾಗಬೇಕೆಂದು ತಜ್ಞವೈದ್ಯರು ಸಲಹೆ ಕೊಡುತ್ತಾರೆ. ಹೀಗೆ ಆಕ್ಸಿಜನ್ ಸ್ಯಾಚುರೇಷನ್ ಕಡಿಮೆ ಆಗುವ ಸೋಂಕಿತರು ಏನು ಮಾಡಬೇಕು? ಮನೆಯಲ್ಲಿಯೇ ಉಸಿರಾಟದ ತೊಂದರೆಯನ್ನು ನಿವಾರಿಸಿಕೊಳ್ಳಬಹುದಾ? ಎಂಬುದಕ್ಕೆ ತಜ್ಞ ವೈದ್ಯರು ಸಲಹೆ ಕೊಟ್ಟಿದ್ದಾರೆ.

ಸಾಕಷ್ಟು ಪ್ರಮಾಣದ ಆಮ್ಲಜನಕ ಶ್ವಾಸಕೋಶಗಳ ಮೂಲಕ ಕೆಂಪು ರಕ್ತಕಣಗಳನ್ನು ಸೇರಿ ಉಳಿದ ಅಂಗಾಗಂಗಳಿಗೆ ಆಮ್ಲಜನಕ ಸರಬರಾಜು ಆಗುವಂತೆ ನಾವೇ ಕೆಲವು ಕ್ರಮಗಳನ್ನು ಮನೆಯಲ್ಲಿಯೇ ಅನುಸರಿಸಬಹುದು ಎಂದು ರಾಜೂಸ್ ಹೆಲ್ದಿ ಇಂಡಿಯಾದ ಡಾ. ರಾಜು ಅವರು ಸಲಹೆ ನೀಡಿದ್ದಾರೆ. ಪ್ರಮುಖವಾಗಿ ನಾಲ್ಕು ಸಲಹೆಗಳನ್ನು ಅವರು ಕೊಟ್ಟಿದ್ದಾರೆ.

ಸಲಹೆ 1. ಮಾಸ್ಕ್ ಹಾಕಬೇಡಿ

ಸಲಹೆ 1. ಮಾಸ್ಕ್ ಹಾಕಬೇಡಿ

ನಾವು ಉಸಿರಾಡುವ ಗಾಳಿಯಲ್ಲಿ ಆಕ್ಸಿಜನ್ ಇದೆ. ಹೀಗಾಗಿ ಆಕ್ಸಿಜನ್ ಸ್ಯಾಚುರೇಷನ್ ಕಡಿಮೆಯಾದ ತಕ್ಷಣ ವೆಂಟಿಲೇಟ್‌ಗಳ ಅಗತ್ಯವಿಲ್ಲ. ಆದರೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ತಕ್ಷಣ ಸೋಂಕಿತರನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕುತ್ತೇವೆ. ಕೋಣೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಸೋಂಕಿತರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳುತ್ತೇವೆ. ಮನೆಯಲ್ಲಿದ್ದು ಮಾಸ್ಕ್ ಹಾಕಿದಾಗ ಮತ್ತಷ್ಟು ಸ್ಯಾಚುರೇಷನ್ ಮಟ್ಟ ಕಡಿಮೆಯಾಗುತ್ತದೆ. ಕೊರೊನಾ ಪಾಸಿಟಿವ್ ಇದ್ದರೂ ಕೂಡ ಮನೆಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಮಾಸ್ಕ್ ಹಾಕಬೇಡಿ.

ಮನೆಯಲ್ಲಿದ್ದು ಮಾಸ್ಕ್ ಹಾಕುವುದರಿಂದ ಸಹಜವಾಗಿ ಉಸಿರಾಟ ಮಾಡಲು ಆಗುವುದಿಲ್ಲ. ಇದರಿಂದಾಗಿ ಆಕ್ಸಿಜನ್ ಸ್ಯಾಚುಯುರೇಷನ್ ಕಡಿಮೆಯಾಗುತ್ತದೆ. ಹೀಗಾಗಿ ಸೋಂಕಿತರು ಮನೆಯಲ್ಲಿದ್ದಾಗ ಮಾಸ್ಕ್ ಹಾಕಿಕೊಳ್ಳಬೇಡಿ ಎಂದು ಡಾ. ರಾಜು ಸಲಹೆ ಕೊಟ್ಟಿದ್ದಾರೆ. ಮಾಸ್ಕ್ ಹಾಕದೇ ಉಸಿರಾಡುವುದರಿಂದ ರಕ್ತದಲ್ಲಿ ಆಕ್ಸಿಜನ್ ಸ್ಯಾಚುರೇಷನ್ ಹೆಚ್ಚಿಗೆ ಮಾಡಬಹುದು.

ಸಲಹೆ 2: ಉಸಿರಾಟದ ವ್ಯಾಯಾಮ

ಸಲಹೆ 2: ಉಸಿರಾಟದ ವ್ಯಾಯಾಮ

ಕೊರೊನಾ ಪಾಸಿಟಿವ್ ಎಂದು ಗೊತ್ತಾದ ತಕ್ಷಣ ಮನೆಯ ಬಾಗಿಲು ಹಾಗೂ ಕಿಟಕಿ ಬಾಗಿಲುಗಳನ್ನು ಮುಚ್ಚಬಾರದು. ಮನೆಯ ಬಾಗಿಲು, ಕಿಟಕಿ ಎಲ್ಲವನ್ನೂ ತೆರೆದು ಇಡಬೇಕು. ಮನೆಗೆ ತಾಜಾ ಗಾಳಿ ಬಂದು ಹೋಗುತ್ತಿರಬೇಕು. ಕ್ರಾಸ್ ವೆಂಟಿಲೇಶನ್ ಆಗುವುದರಿಂದ ನಾವು ತಾಜಾ ಗಾಳಿಯನ್ನು ಉಸಿರಾಡಲು ಸಾಧ್ಯವಾಗುತ್ತದೆ. ತಾಜಾ ಗಾಳಿಯನ್ನು ಉಸಿರಾಡುವ ಮೂಲಕ ನಮ್ಮ ಆಕ್ಸಿಜನ್ ಸ್ಯಾಚುರೇಷನ್ ಹೆಚ್ಚಿಸಬಹುದು. ಜೊತೆಗೆ ಹಲವು ಉಸಿರಾಟ ವ್ಯಾಯಾಮಗಳನ್ನು ಮನೆಯಲ್ಲಿಯೇ ಮಾಡಬೇಕು.

ಸರಳ ಯೋಗ, ಮೆಡಿಟೇಶನ್ ಅಥವಾ ಪ್ರಾಣಾಯಾಮ ಮಾಡುವುದರಿಂದ ನಮ್ಮ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಾಗುತ್ತದೆ. ಉಸಿರಾಟವೂ ಸರಾಗವಾಗುತ್ತದೆ. ಆಗಲೂ ಕೂಡ ಉಸಿರಾಟ ಸಮಸ್ಯೆಗಳಿಂದ ಹೊರ ಬರಬಹುದು.

ಸಲಹೆ 3: ಕಬ್ಬಿಣದ ಅಂಶವಿರುವ ಆಹಾರ

ಸಲಹೆ 3: ಕಬ್ಬಿಣದ ಅಂಶವಿರುವ ಆಹಾರ

ಕಬ್ಬಿಣದ ಅಂಶವಿರುವ ಆಹಾರ ಸೇವನೆಯಿಂದಲೂ ರಕ್ತದಲ್ಲಿನ ಆಮ್ಲಜನಕವನ್ನು ಹೆಚ್ಚಿಗೆ ಮಾಡಬಹುದು. ಉದಾಹರಣೆಗೆ ಸೊಪ್ಪು, ಹಸಿರು ತರಕಾರಿಗಳಲ್ಲಿ ಹೆಚ್ಚಿನ ಕಬ್ಬಿಣದ ಅಂಶವಿರುತ್ತದೆ. ಅವುಗಳ ಸೇವನೆಯಿಂದ ರಕ್ತದಲ್ಲಿನ ಕಬ್ಬಿಣದ ಅಂಶವನ್ನು ಹೆಚ್ಚಿಗೆ ಮಾಡಬಹುದು.

ಕರಿಬೇವು, ಕೊತ್ತಂಬರಿ, ಸಬ್ಬಸಗಿ ಸೊಪ್ಪು ಈ ಸೊಪ್ಪುಗಳಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ತರಕಾರಿಗಳಲ್ಲಿಯೂ ಕಬ್ಬಿಣದ ಅಂಶ ಹೆಚ್ಚಾಗಿರುತ್ತದೆ. ಪ್ರತಿದಿನ ಉಪಯೋಗಿಸುವ ಟೊಮ್ಯಾಟೊ, ಎಲೆ ಕೋಸು, ಹೂ ಕೋಸು, ಬೀನ್ಸ್‌ ಸೇರಿದಂತೆ ಬಹಳಷ್ಟು ತರಕಾರಿಗಳಲ್ಲಿ ಕಬ್ಬಿಣದ ಅಂಶವಿರುತ್ತದೆ. ಈ ಎಲ್ಲ ತಾಜಾ ತರಕಾರಿ, ಸೊಪ್ಪು ತಿನ್ನುವುದರಿಂದ ಕೊರೊನಾ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಕೇವಲ ಇವಿಷ್ಟೆ ಸೊಪ್ಪು, ತರಕಾರಿ ಅಥವಾ ಕಾಳುಗಳಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲ ತರಕಾರಿ, ಸೊಪ್ಪು ಹಾಗೂ ಕಾಳುಗಳಲ್ಲಿ ಕಬ್ಬಿಣದ ಅಂಶವಿರುತ್ತದೆ. ಅವೆಲ್ಲವನ್ನೂ ಸೇವನೆ ಮಾಡಬಹುದು. ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಾದಾಗ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವೂ ಹೆಚ್ಚಾಗುತ್ತದೆ.

  ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada
  ಸಲಹೆ 4: ಹೆಚ್ಚು ನೀರು ಕುಡಿಯಬೇಕು

  ಸಲಹೆ 4: ಹೆಚ್ಚು ನೀರು ಕುಡಿಯಬೇಕು

  ಹೆಚ್ಚು ನೀರನ್ನು ಕುಡಿಯುವುದರಿಂದಲೂ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಹೆಚ್ಚು ಮಾಡಬಹುದು. ಬಹಳಷ್ಟು ಜನರು ಕೊರೊನಾ ವೈರಸ್ ಸಾಯಿಸಬೇಕೆಂದು ಬಿಸಿ ಬಿಸಿ ನೀರು ಕುಡಿಯುತ್ತಿದ್ದಾರೆ. ಬಿಸಿ ನೀರು ಕುಡಿಯುವುದರಿಂದ ಜಾಸ್ತಿ ನೀರು ಕುಡಿಯಲು ಆಗುವುದಿಲ್ಲ. ಚಹಾದ ಹಾಗೆ ಸ್ವಲ್ಪ ಸ್ವಲ್ಪ ನೀರು ಕುಡಿಯಬಹುದು. ಅತಿಯಾಗಿ ಬಿಸಿ ಇರುವ ನೀರನ್ನು ಹೆಚ್ಚಿಗೆ ಕುಡಿಯಲೂ ಆಗುವುದಿಲ್ಲ. ಹೀಗಾಗಿ ದೇಹದಲ್ಲಿ ಡಿಹೈಡ್ರೇಶನ್ (ನಿರ್ಜಲೀಕರಣ) ಆಗುತ್ತದೆ. ಡಿಹೈಡ್ರೇಶನ್ ಆದಾಗ ಅದರ ನೇರ ಪರಿಣಾಮ ಶ್ವಾಸಕೋಶಗಳ ಮೇಲೆ ಆಗುತ್ತದೆ. ನಮ್ಮ ಶ್ವಾಸಕೋಶಗಳಿಗೆ ಹೆಚ್ಚಿನ ನೀರಿನಂಶ ಬೇಕೆ ಬೇಕು. ಹೀಗಾಗಿ ಹೆಚ್ಚು ನೀರು ಕುಡಿಯಬೇಕು.

  ಸಾಮಾನ್ಯ ಉಷ್ಣಾಂಶದ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗಿ, ನಮ್ಮ ಶ್ವಾಸಕೋಶಗಳು ಕೂಡ ಸದೃಢವಾಗುತ್ತವೆ ಎನ್ನುತ್ತಾರೆ ಬೆಂಗಳೂರಿನ ರಾಜೂಸ್ ಹೆಲ್ದಿ ಇಂಡಿಯಾದ ಡಾ. ರಾಜು ಅವರು.

  English summary
  Many coronavirus infected people die with only respiratory problems. Inlcuding Dr. Raju, Experts offer several simple tips for preventing coronavirus breathing problem. Corona breathing problems can be prevented as much as possible by fallowing them. Know more about,
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X