ದೇಶದ ಪ್ರಮುಖ 4 ಶಕ್ತಿಗಳ ಪರವಾಗಿ ಬಿಜೆಪಿ- ಡಾ.ಸಿ.ಎನ್ ಅಶ್ವತ್ಥ್‌ ನಾರಾಯಣ್

ಬೆಂಗಳೂರು, ಏಪ್ರಿಲ್‌ 16: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಸಿ.ಎನ್.ಮಂಜುನಾಥ್ ಅವರು ಗೆದ್ದು ನರೇಂದ್ರ ಮೋದಿಯವರ ತಂಡ ಸೇರಲಿದ್ದಾರೆ. ಈ ಭಾಗದಲ್ಲಿ ದೊಡ್ಡ ಸಂಚಲನ ಉಂಟಾಗಲಿದೆ ಎಂದು ಬಿಜೆಪಿ ಮುಖಂಡ ಡಾ.ಸಿ.ಎನ್.ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು, ಮಹಿಳೆಯರು, ಯುವಜನತೆ, ರೈತರ ಪರವಾಗಿ 4 ಪ್ರಮುಖ ಶಕ್ತಿಗಳನ್ನು ವಿಂಗಡಣೆ ಮಾಡಿದ್ದಾರೆ. ರೈತರ ಪರವಾಗಿ ಕಿಸಾನ್ ಸಮ್ಮಾನ್ ಮುಂದುವರಿಸುವಿಕೆ ಜೊತೆಗೆ ಬೆಂಬಲ ಬೆಲೆ ಕಾಲಕಾಲಕ್ಕೆ ಕೊಡುವುದಲ್ಲದೆ, ಅದನ್ನು ಹೆಚ್ಚಿಸಲು ಮೋದಿಜೀ ಅವರು ಸಂಕಲ್ಪ ಮಾಡಿದ್ದಾರೆ ಎಂದು ವಿವರಿಸಿದರು.

Dr CN Ashwath Narayan Expressed Confidence About Victory Of Dr CN Manjunath

ಉಪಗ್ರಹ ಬಳಸಿ ಬೆಳೆಗಳ ಮಾಹಿತಿ ಸಂಗ್ರಹಿಸಿ ನೀಡುವುದು, ಹವಾಮಾನದ ಮುನ್ಸೂಚನೆ ನೀಡಲಿದ್ದಾರೆ. ಕೃಷಿ ಮೂಲಸೌಕರ್ಯಕ್ಕೆ ಒತ್ತು ಕೊಡಲು ಸರಕಾರ ಮುಂದಾಗಲಿದೆ ಎಂದು ತಿಳಿಸಿದರು. ವ್ಯವಸಾಯದಲ್ಲಿ ದೊಡ್ಡ ಕ್ರಾಂತಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಿಳಾ ಸಬಲೀಕರಣ ಮಾಡಲು ಎಲ್ಲ ಸೌಕರ್ಯಗಳನ್ನು ನೀಡಲಾಗುವುದು. 3 ಕೋಟಿ ಮಹಿಳೆಯರನ್ನು ಲಕ್ಷಪತಿ ಮಾಡಲು ಸರಕಾರ ಮುಂದಾಗಿದೆ. 4 ಕೋಟಿ ಮನೆಗಳ ನಿರ್ಮಾಣ ಆಗಲಿದೆ. ಶೌಚಾಲಯ, ನೀರು ಮತ್ತಿತರ ಮೂಲಭೂತ ಸೌಲಭ್ಯ ಕೊಡಲಾಗುವುದು ಎಂದು ತಿಳಿಸಿದರು.

ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಾಗುವುದು. ಮಹಿಳಾ ಮೀಸಲಾತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಪಡಿತರ ವಿಸ್ತರಣೆ ಸೇರಿದಂತೆ ಬಡವರಿಗೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಂಕಲ್ಪ ಪತ್ರವು ಬದ್ಧತೆಯನ್ನು ತೋರಿದೆ ಎಂದು ಹೇಳಿದರು.

ಅಟಲ್ ಪಿಂಚಣಿ, ಆರೋಗ್ಯ ವಿಮೆ ಮೊದಲಾದವುಗಳನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಯುವಕರು ನಮ್ಮ ಆಶಾಕಿರಣ. ಅವರಿಗೆ ಹೆಚ್ಚಿನ ಒತ್ತು ಕೊಡಲು ತಂತ್ರಜ್ಞಾನ, ಕೌಶಲ್ಯಕ್ಕೆ ಒತ್ತು ಕೊಡಲಾಗುವುದು ಎಂದು ತಿಳಿಸಿದರು.

ಮುದ್ರಾ ಯೋಜನೆಯಡಿ ಇನ್ನಷ್ಟು ಜನರಿಗೆ ಪ್ರಯೋಜನ ಸಿಗಲಿದೆ ಎಂದು ಹೇಳಿದರು. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗುವುದು ಎಂದರು. ಈಗಾಗಲೇ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ ಎಂದು ವಿವರ ನೀಡಿದರು. ಮನೆಬಾಗಿಲಿಗೆ ಸರಕಾರದ ಎಲ್ಲ ಸೇವೆಗಳು ದೊರಕಲಿವೆ ಎಂದು ಹೇಳಿದರು. ಇದೇವೇಳೆ ಅವರು ನಟ, ನಿರ್ಮಾಪಕ ದ್ವಾರಕೀಶ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+