ಕೊಡಗಿನ ಕೈ ಹಿಡಿಯಿರಿ: ಮಳೆಯಿಂದ ತತ್ತರಿಸುವವರಿಗೆ ಸಹಾಯ ಮಾಡಿ
ಕೊಡಗು, ಆಗಸ್ಟ್ 17: ಸತತ ಮಳೆಯಿಂದ ಮನೆ, ಜೀವ ರಾಶಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಒದ್ದಾಡುತ್ತಿರುವ ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಯ ಜನರಿಗೆ ನೆರವಿಸ ಹಸ್ತದ ಅವಶ್ಯಕತೆ ಇದೆ.
ಮನೆಗಳಿಗೆ ನೀರು ನುಗ್ಗಿ , ಅಡುಗೆ ಮಾಡುವುದಿರಲಿ, ನಿಲ್ಲಲೂ ಜಾಗವಿಲ್ಲದೆ ಜನ ಒದ್ದಾಡುತ್ತಿದ್ದಾರೆ. ಎನ್‌ಡಿಆರ್ಎಫ್, ಸೇನಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರಾದರೂ ಸುರಿಯುತ್ತಿರುವ ಸತತ ಮಳೆ ರಕ್ಷಣಾ ಕಾರ್ಯಕ್ಕೆ ತೀವ್ರ ಅಡೆತಡೆ ಮಾಡಿದೆ.
ಮಳೆಯಿಂದ ತೀವ್ರವಾಗಿ ತತ್ತರಿಸುವ ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ನೆರವಿನ ಅಗತ್ಯವಿದ್ದು, ಸಾರ್ವಜನಿಕರು ನೆರವಿನ ಹಸ್ತ ಚಾಚಬೇಕಿದೆ.

ಯುನೈಟೆಡ್ ವೇ ಬೆಂಗಳೂರು ಕೊಡಗು ಸೇರಿದಂತೆ ಮಳೆ ಪೀಡಿತ ಜಿಲ್ಲೆಗಳಿಗೆ ನೆರವು ಸಂಗ್ರಹಿಸುತ್ತಿದ್ದು, ಆಸಕ್ತರು ಯುನೈಟೆಡ್ ವೇ ಬೆಂಗಳೂರು ವೆಬ್‌ಸೈಟ್‌ನಲ್ಲಿ ಧನ ಸಹಾಯ ಮಾಡಬಹುದು.
ದಾನಿಗಳು ನೀಡಿದ ಹಣವನ್ನು ಕರಾವಳಿ ಜಿಲ್ಲೆಗಳ ಮಳೆ ಸಂತ್ರಸ್ತರಿಗೆ ಹಾಗೂ ಕೇರಳದ ಮಳೆ ಸಂಸ್ಥಸ್ತರ ಊಟ, ವಸತಿ, ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಆಸಕ್ತರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಮೂಲಕವೂ ಧನ ಸಹಾಯ ಮಾಡಬಹುದು.
ಯುನೈಟೆಡ್ ವೇ ಬೆಂಗಳೂರು ವೆಬ್‌ವಿಳಾಸ : uwbengaluru.org/flood-relief/












Click it and Unblock the Notifications