ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ರಾಜ್ಯದ ಜನರು ಭಯಪಡುವ ಅಗತ್ಯವಿಲ್ಲ- ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಮಾರ್ಚ್ 10: ಕೊರೊನಾ ವೈರಸ್ ಭೀತಿಯನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಕೊರೊನಾ ವೈರಸ್ ತಡೆಗಟ್ಟಲು ಇರುವ ಮಾಸ್ಕ್ ಅನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಇಂದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿಗಳು ಸಭೆ ನಡೆಸಿದರು. ಈ ವೇಳೆ ಕೊರೊನಾ ವೈರಸ್ ಬಗ್ಗೆ ಮಾತನಾಡಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು. ಜೊತೆಗೆ ಮಾಸ್ಕ್ ದಂದೆ ಬಗ್ಗೆಯೂ ಪ್ರತಿಕ್ರಿಯೆ ನೀಡಿದರು.

ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!ಕೊರೊನಾ ವೈರಸ್ ಗೆ ಆಲ್ಕೋಹಾಲ್ ಮದ್ದು: ವದಂತಿಗೆ 27 ಮಂದಿ ಬಲಿ!

''ಮಾಸ್ಕ್ ಗಳಿಗೆ ದುಪ್ಪಟ್ಟು ಬೆಲೆ ಪಡೆಯುತ್ತಾರೆಂಬ ವಿಚಾರ ಬಂದಿದ್ದು, ಇದರ ಬಗ್ಗೆ ಈಗಾಗಲೇ ಸೂಚನೆ ನೀಡಿದ್ದೇವೆ ದುಪ್ಪಟ್ಟು ಬೆಲೆ ತಡೆಯೋಕೆ ಕ್ರಮ ಕೈಗೊಂಡಿದ್ದೇವೆ. ಅಧಿಕಾರಿಗಳು ಸಾಕಷ್ಟು ಕ್ರಮ‌ ಕೈಗೊಂಡಿದ್ದಾರೆ ಅಗತ್ಯವಾಗಿರುವಷ್ಟು ಮಾಸ್ಕ್ ಗಳಿಗೆ ಆರ್ಡರ್ ಮಾಡಿದ್ದೇವೆ. ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ತೇವೆ.'' ಎಂದು ಯಡಿಯೂರಪ್ಪ ಹೇಳಿದ್ದಾರೆ.

Dont Be Fear Yeddyurappa Spoke About Coronavirus

''ಕರ್ನಾಟಕದ ನಾಲ್ವರಿಗೆ ಸೋಂಕು ಪತ್ತೆಯಾಗಿದೆ. ಈಗಾಗಲೇ ವೈರಸ್ ಹರಡದ ರೀತಿ ಕ್ರಮ ಕೈಗೊಳ್ಳಲಾಗಿದೆ. ಇದೀಗ ಮತ್ತಷ್ಟು ಬಿಗಿ ಕ್ರಮಕ್ಕೆ ಸಭೆ ಕರೆದಿದ್ದೇವೆ. ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ, ಎಚ್ಚರಿಕೆ ಕ್ರಮದ ಬಗ್ಗೆ ಸೂಚನೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ.'' ಎಂದಿದ್ದಾರೆ.

ಕೊರೊನಾ ಕಾರ್ಮೋಡ: ಬೆಂಗಳೂರಲ್ಲಿ 4, ಹಾಗಾದ್ರೆ ಭಾರತದಲ್ಲಿ ಎಷ್ಟು?ಕೊರೊನಾ ಕಾರ್ಮೋಡ: ಬೆಂಗಳೂರಲ್ಲಿ 4, ಹಾಗಾದ್ರೆ ಭಾರತದಲ್ಲಿ ಎಷ್ಟು?

ಕೊರೊನಾ ವೈರಸ್ ನಿಂದ ರಾಜ್ಯದ ಜನರು ಭಯಪಡುವ ಅಗತ್ಯ ಇಲ್ಲ ಎಂದಿರುವ ಯಡಿಯೂರಪ್ಪ ವಿದೇಶದಿಂದ ಭಾರತಕ್ಕೆ ಬರುವ ಜನರನ್ನು ಹೆಚ್ಚಿನ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

English summary
Coronavirus care: 'Don't Be Fear' Karnataka CM Yeddyurappa spoke about Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X