ಕಲ್ಬುರ್ಗಿಸಾವಿನ ರಹಸ್ಯ ಹುಡುಕುವ ಸಾಕ್ಷ್ಯ ಚಿತ್ರದ ಟ್ರೈಲರ್

Posted By:
Subscribe to Oneindia Kannada

ಬೆಂಗಳೂರು, ಫೆ. 10: ಹಿರಿಯ ಸಂಶೋಧಕ ಎಂ.ಎಂ. ಕಲ್ಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ಕುಂಠಿತವಾಗಿದೆ, ಹತ್ಯೆಗಾರರ ಪತ್ತೆಗಾಗಿ ಆಗ್ರಹಿಸಿ ವಿನೂತನ ಪ್ರತಿಭಟನೆಗಳು ಜಾರಿಯಲ್ಲಿವೆ, ಕರ್ನಾಟಕ ಸರ್ಕಾರ ಕೂಡಾ ತನಿಖೆಯನ್ನು ಸಿಬಿಐಗೆ ವಹಿಸಲು ಸಿದ್ಧ ಎಂದಿದೆ. ಈ ನಡುವೆ ಕಲ್ಬುರ್ಗಿ ಹಾಗೂ ಅವರ ಸಾಹಿತ್ಯ ಶಕ್ತಿಯ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಸಾಕ್ಷ್ಯಚಿತ್ರ ತಯಾರಾಗುತ್ತಿದೆ.

2015ರ ಆಗಸ್ಟ್ 30ರಂದು ಧಾರವಾಡದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಹಿರಿಯ ಸಿಪಿಐ ನಾಯಕ ಹಾಗೂ ಮಹಾರಾಷ್ಟ್ರ ವಿಚಾರವಾದಿ ಗೋವಿಂದ ಪನ್ಸಾರೆ, ಮೂಢನಂಬಿಕೆಗಳ ವಿರೋಧಿ ಹೋರಾಟಗಾರ ಡಾ. ನರೇಂದ್ರ ದಾಬೋಲ್ಕರ್
ಮತ್ತು ಸಾಹಿತಿ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ನಡುವೆ ಸಾಮ್ಯತೆ ಇದೆ. ಮೂರು ಹತ್ಯೆಗಳನ್ನು ಒಂದು ಗುಂಪು ಮಾಡಿರಬಹುದು ಎಂದು ಸಿಐಡಿ ಶಂಕೆ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಅಭಿಪ್ರಾಯ ಮಂಡಿಸಲು ಮುಕ್ತ ಅವಕಾಶ ಭಾರತದಲ್ಲಿದೆ]

Dr. MM Kalburgi Documentary Trailer

ಸಾಕ್ಷ್ಯ ಚಿತ್ರ ನಿರ್ಮಾಣ ಏತಕ್ಕಾಗಿ?: ಕಲಾ ಮಾಧ್ಯಮ್ ಮೀಡಿಯಾ ವರ್ಕ್ಸ್ ವತಿಯಿಂದ ನಿರ್ಮಾಣ ವಾಗುತ್ತಿರುವ ರಂಗಕರ್ಮಿ, ನಟ, ನಿರ್ದೇಶಕ ಕೆಎಸ್ ಪರಮೇಶ್ವರ್ ಅವರ ನಿರ್ದೇಶನದ 'ಮಾರ್ಗಕ್ಕೆ ಸಾವಿಲ್ಲ' ಸಾಕ್ಷ್ಯಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗಿದೆ. [ನಿರ್ದೇಶಕ ಪರಮೇಶ್ವರ. ಕೆ ಕಿರುಪರಿಚಯ]

ಈ ಸಾಕ್ಷ್ಯಚಿತ್ರದಲ್ಲಿ ಕಲ್ಬುರ್ಗಿ ಅವರ ಪರಿಚಯದ ಜೊತೆಗೆ ಅವರ ಸಾಹಿತ್ಯ ದೃಷ್ಟಿ, ಅವರು ಕಂಡ ಕನಸುಗಳು, ಅವರಿಗಿದ್ದ ಬಸವ ತತ್ತ್ವ ನಿಷ್ಠೆ, ಅವರು ಯುವ ಪ್ರತಿಭೆಗಳಿಗೆ ನೀಡುತ್ತಿದ್ದ ಪ್ರೋತ್ಸಾಹ, ಅವರ ಸಹಪಾಠಿಗಳು, ಸಮಕಾಲೀನರು, ಶಿಷ್ಯಂದಿರು ಅವರ ಬಗ್ಗೆ ಹೇಳಿದ ಮಾತುಗಳಲ್ಲದೆ, ಹತ್ಯೆಯ ಬಗ್ಗೆ ರೋಚಕ ವಿವರಗಳನ್ನು ಕಾಣಬಹುದಾಗಿದೆ. ['ಕಲಬುರ್ಗಿ ಹತ್ಯೆ ತನಿಖೆ ಸಿಬಿಐಗೆ ವಹಿಸಲು ಸಿದ್ಧ']

2015ರ ಆಗಸ್ಟ್ 30ರಂದು ಧಾರವಾಡದಲ್ಲಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಸರ್ಕಾರ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಅಧಿಕಾರಿಗಳು ಸರ್ಕಾರಕ್ಕೆ ರಹಸ್ಯ ವರದಿಯನ್ನು ನೀಡಿದ್ದು, ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬಹುದು ಎಂದು ಹೇಳಿದೆ. ಟ್ರೈಲರ್ ನೋಡಿ:


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Margakke Saavilla is a documentary film director KS Parameshwar about Dr. M.M Kalburgi who was a famous research scholar in Karnataka & who was brutally killed by unidentified Killers at his residence. This documentary film tries to give a detailed insight in to his life & reasons behind his brutal murder.
Please Wait while comments are loading...