KRS Dam: ಜುಲೈ 1ರಂದು ಕೆಆರ್‌ಎಸ್ (ಕೃಷ್ಣರಾಜ ಸಾಗರ) ಜಲಾಶಯದ ಒಳಹರಿವು ಎಷ್ಟಿದೆ ಗೊತ್ತಾ?
KRS Dam: ಜೂನ್ ಆರಂಭದಿಂದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ತಿಂಗಳ ಅಂತ್ಯದಲ್ಲಿ ಹಲವೆಡೆ ಮಳೆರಾಯನ ಆರ್ಭಟ ಕಡಿಮೆಯಾಗಿದೆ. ಇನ್ನೂ ಭಾರೀ ಮಳೆಯಿಂದ ಮೈಸೂರು, ಬೆಂಗಳೂರು, ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ (ಕೃಷ್ಣರಾಜ ಸಾಗರ) ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ಆದರೆ ಇದೀಗ ಈ ಭಾಗದಲ್ಲಿ ಮಳೆ ತಗ್ಗಿದ್ದು, ಒಳಹರಿವಿನ ಪ್ರಮಾಣ ಕುಸಿತ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗಾದರೆ ಕೆಆರ್‌ಎಸ್ ಜಲಾಶಯದಲ್ಲಿ ಇಂದು ನೀರಿನ ಮಟ್ಟ 95.50 ಆಗಿದ್ದರೆ, ಒಳಹರಿವು 9,369 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 468 ಕ್ಯೂಸೆಕ್ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಜಲಾಶಯ ಗರಿಷ್ಠ ನೀರಿನ ಸಂಗ್ರಹಣ ಸಾಮರ್ಥ್ಯವು 124.80 ಅಡಿ ಆಗಿದೆ.

ಹೇಮಾವತಿ ಜಲಾಶಯದಲ್ಲಿ ಇಂದಿನ ಒಳಹರಿವು 6,938 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 250 ಕ್ಯೂಸೆಕ್ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಜಲಾಶಯ ಗರಿಷ್ಠ ನೀರಿನ ಸಂಗ್ರಹಣ ಸಾಮರ್ಥ್ಯವು 890 ಮೀಟರ್ ಅಡಿ ಆಗಿದೆ.
ಹಾರಂಗಿ ಜಲಾಶಯದಲ್ಲಿ ಇಂದಿನ ಒಳಹರಿವು 1,673 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 200 ಕ್ಯೂಸೆಕ್ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಜಲಾಶಯ ಗರಿಷ್ಠ ನೀರಿನ ಸಂಗ್ರಹಣ ಸಾಮರ್ಥ್ಯವು 871.38 ಮೀಟರ್ ಅಡಿ ಆಗಿದೆ.
ಕಬಿನಿ ಜಲಾಶಯದಲ್ಲಿ ಇಂದಿನ ಒಳಹರಿವು 5,560 ಕ್ಯೂಸೆಕ್ ಇದ್ದರೆ, ಹೊರಹರಿವಿನ ಪ್ರಮಾಣ 1,000 ಕ್ಯೂಸೆಕ್ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಜಲಾಶಯ ಗರಿಷ್ಠ ನೀರಿನ ಸಂಗ್ರಹಣ ಸಾಮರ್ಥ್ಯವು 696.13 ಮೀಟರ್ ಅಡಿ ಆಗಿದೆ.
ಭಾರೀ ಮಳೆ: ಈಗಾಗಲೇ ರಾಜ್ಯದ ಹಲವೆಡೆ ಭಾರೀ ಮಳೆಯಿಂದಾಗಿ ಅನಾಹುತಗಳೇ ಸೃಷ್ಟಿಯಾಗಿವೆ. ಕೆಲವೆಡೆ ಸಾಧಾರಣ ಮಳೆಯಾಗುತ್ತಿದ್ದು, ಇನ್ನೂ ಹಲವೆಡೆ ಮಳೆಯೇ ಇಲ್ಲದೆ ಬಿಸಿಲಿನ ವಾತಾವರಣ ಮುಂದುವರೆದಿದೆ. ಇನ್ನು ಇಂದು (ಜುಲೈ 01) ಬೆಳ್ಳಂಬೆಳಗ್ಗೆಯೇ ಬೆಳಗಾವಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ.
ಭಾರೀ ಮಳೆ ಸುರಿದ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಹಲವಡೆ ನದಿ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗೋವಾ ಮತ್ತು ಮಹಾರಾಷ್ಟ್ರ ಭಾಗದಲ್ಲಿಯೂ ಧಾರಾಕಾರ ಮಳೆ ಸುರಿದು ರಸ್ತೆಗಳು ಚರಂಡಿಯಂತೆ ನಿರ್ಮಾಣವಾಗಿ, ವಾಹನ ಸವಾರರು ಪರದಾಡುವುದಲ್ಲದೆ, ಜನಜೀವನ ಅಸ್ತವ್ಯಸ್ಥವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾರೀ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿರುವ ನದಿಗಳು ತುಂಬಿ ಹರಿಯುತ್ತಿದ್ದು, ನದಿಯಲ್ಲಿರುವ ಹಣುಮಾನ ದೇವಸ್ಥಾನ ಮುಳಗಡೆಯಾಗಿದೆ. ಆದ್ದರಿಂದ ಮುಜಾಗ್ರತಾ ಕ್ರಮವಾಗಿ ನದಿ ದಂಡೆಗೆ ಯಾರೂ ಹೋಗದಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆಯಾ ಎಂದು ಕಾದುನೋಡಬೇಕಿದೆ.
ಹಾಗೆಯೇ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಇನ್ನೂ ನಾಲ್ಕು ದಿನಗಳ ಕಾಳ ಮಳೆರಾಯನ ಆರ್ಭಟ ಮುಂದುವರೆದರೆ, ಏನೆಲ್ಲಾ ಅನಾಹುತಗಳು ಸಂಭವಿಸಲಿವೆ ಎನ್ನುವ ಆತಂಕದಲ್ಲಿ ಬೆಳಗಾವಿ ಜಿಲ್ಲೆ ಜನರಿದ್ದಾರೆ.












Click it and Unblock the Notifications