ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು, ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್‌ ನೀಡುವಂತಿಲ್ಲ

|
Google Oneindia Kannada News

ನವದೆಹಲಿ, ನವೆಂಬರ್ 26: ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಹೋಮ್‌ವರ್ಕ್ ನೀಡುವಂತಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚನೆ ಹೊರಡಿಸಿದೆ.

ಎಲ್ಲ ರಾಜ್ಯಗಳಿಗೂ ಸೂಚನೆ ಹೊರಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಶಾಲಾ ಬ್ಯಾಗ್‌ ಬಗ್ಗೆಯೂ ಮಾರ್ಗಸೂಚಿಗಳನ್ನು ನೀಡಿದೆ.

ಬಾಲ್ಯ ವಿವಾಹ: ಶಾಲೆ ಬಿಟ್ಟ ಬಾಲಕಿಯರ ಮೇಲೆ ಸರ್ಕಾರ ನಿಗಾಬಾಲ್ಯ ವಿವಾಹ: ಶಾಲೆ ಬಿಟ್ಟ ಬಾಲಕಿಯರ ಮೇಲೆ ಸರ್ಕಾರ ನಿಗಾ

ಮಕ್ಕಳ ಮೇಲಿನ ಶಿಕ್ಷಣದ ಹೊರೆ ಕಡಿಮೆ ಮಾಡಲು ಈ ನಿರ್ಣಯವನ್ನು ತೆಗೆದುಕೊಂಡಿರುವುದಾಗಿ ಇಲಾಖೆಯು ಹೇಳಿದ್ದು, ಎಲ್ಲ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಇದನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ.

Do not give home work to 1st and 2nd class students: HRD

ಶಾಲೆಗೆ ಹೋಗುವಾಗ ಇನ್ನು 'ಭಾರ' ಇರೊಲ್ಲ: ಮಕ್ಕಳ ಬ್ಯಾಗ್ ತೂಕಕ್ಕೆ ಕಡಿವಾಣಶಾಲೆಗೆ ಹೋಗುವಾಗ ಇನ್ನು 'ಭಾರ' ಇರೊಲ್ಲ: ಮಕ್ಕಳ ಬ್ಯಾಗ್ ತೂಕಕ್ಕೆ ಕಡಿವಾಣ

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪುಸ್ತಕ ಅಥವಾ ವಸ್ತುಗಳನ್ನು ತೆಗೆದುಕೊಂಡು ಬರಲು ಶಾಲೆಗಳು ಸೂಚಿಸಬಾರದು. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳ ಬ್ಯಾಗಿನ ತೂಕ 1.5 ಕೆ.ಜಿ ಮೀರಬಾರದು. 3 ರಿಂದ 5 ನೇ ತರಗತಿ ವಿದ್ಯಾರ್ಥಿಗಳ ಬ್ಯಾಗು 3 ಕೆ.ಜಿ ಮೀರಬಾರದು. ಆರು ಮತ್ತು ಏಳನೇ ತರಗತಿ ವಿದ್ಯಾರ್ಥಿಗಳ ಬ್ಯಾಗಿನ ತೂಕ 4 ಕೆಜಿ ಮೀರಬಾರದು 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗಿನ ತೂಕ 4.5 ಕೆ.ಜಿ ಮೀರಬಾರದು. 10 ನೇ ತರಗತಿ ವಿದ್ಯಾರ್ಥಿಗಳ ಬ್ಯಾಗಿನ ತೂಕ 5 ಕೆ.ಜಿ ಮೀರಬಾರದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚಿಸಿದೆ.

English summary
central human resource development directed all states that do not give home works to 1st and 2nd class students. It also guided bag wight of 1 to 10th students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X