'ಮಂಗಳೂರು ಚಲೋ' ಬದಲು ಸಾಲ ಮನ್ನಾಕ್ಕಾಗಿ ದೆಹಲಿ ಚಲೋ ಮಾಡಿ: ಸಿಎಂ

ಬೆಂಗಳೂರು, ಸೆಪ್ಟೆಂಬರ್ 5: "'ಮಂಗಳೂರು ಚಲೋ' ನಡೆಸಿ ಸಮಾಜದ ಸಾಮರಸ್ಯ ಕೆಡಿಸುವ ಬದಲು ರಾಜ್ಯದ ರೈತರ ಸಾಲ ಮನ್ನಾಕ್ಕಾಗಿ 'ದೆಹಲಿ ಚಲೋ' ಮಾಡಿ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

In Pics : ಮಂಗಳೂರು ಚಲೋ rallyಯನ್ನು ಬುಡದಲ್ಲೇ ಹೊಸಕಿದ ಕಾಂಗ್ರೆಸ್

"ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ 'ಮಂಗಳೂರು ಚಲೋ' ಬೈಕ್ ರ‍್ಯಾಲಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರೈತರು ಸಹಕಾರ ಬ್ಯಾಂಕ್ ಗಳಲ್ಲಿ ಪಡೆದಿರುವ ರೂ. 50 ಸಾವಿರದವರೆಗಿನ ಸಾಲವನ್ನು ರಾಜ್ಯ ಸರಕಾರ ಮನ್ನಾ ಮಾಡಿದೆ. ಇದಲ್ಲದೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರು ರೂ. 42 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇದನ್ನು ಮನ್ನಾ ಮಾಡಲು ಬಿಜೆಪಿಯವರು ಪ್ರಧಾನಿಯವರ ಮೇಲೆ ಹೇರಲಿ. ಇದಕ್ಕಾಗಿ ದೆಹಲಿ ಚಲೋ ಮಾಡಲಿ, ನಾವೂ ಕೈ ಜೋಡಿಸುತ್ತೇವೆ," ಎಂದು ಸಲಹೆ ನೀಡಿದರು.

Do 'Delhi Chalo’ for loan waive off instead of 'Mangalore Chalo': Siddaramaiah

ಬಿಜೆಪಿಯವರು ಸಾವಿರಾರು ಬೈಕ್‍ಗಳ ಮೂಲಕ ಏಕಕಾಲಕ್ಕೆ ನಾಲ್ಕೈದು ಕಡೆ ರಸ್ತೆಗಿಳಿದರೆ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ. ಪಾದಯಾತ್ರೆ ಅಥವಾ ಬಹಿರಂಗ ಸಭೆ ಮಾಡಿದರೆ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ಬಿಜೆಪಿಯವರ ರ‍್ಯಾಲಿ ಹಿಂದೂಪರವಲ್ಲ. ಸಮಾಜ ಮತ್ತು ಸಾಮರಸ್ಯವನ್ನು ಹಾಳು ಮಾಡುವುದಕ್ಕೆ ರ‍್ಯಾಲಿ ಮಾಡುತ್ತಿದ್ದಾರೆ. ಚಲೋ ಹಿನ್ನಲೆಯಲ್ಲಿ ಬಿಜೆಪಿಯವರು ಮುದ್ರಿಸಿರುವ ಪುಸ್ತಕ ಓದಿದ್ದೇನೆ. ಅದರಲ್ಲಿ ಪ್ರಚೋದನಕಾರಿ ಬರಹಗಳು, ಶಾಂತಿ ಮತ್ತು ಸಾಮರಸ್ಯ ಕದಡುವ ಭಾಷಣಗಳು ತುಂಬಿಕೊಂಡಿವೆ. ಸಾಮರಸ್ಯ ನೆಲೆಸಲು ಪ್ರಯತ್ನಿಸುವ ಬದಲು, ಭಂಗ ತರುವ ಕೆಲಸ ಮಾಡಬಾರದು ಎಂದು ಅಭಿಪ್ರಾಯಪಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+