ಡಿಕೆಶಿಗೆ ಗೊತ್ತಿದೆ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸ್ಫೋಟಕ ಸುದ್ದಿ

Recommended Video

      ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಡಿ ಕೆ ಶಿವಕುಮಾರ್ ಗೆ ಗೊತ್ತಿದೆ ಸ್ಪೋಟಕ ಮಾಹಿತಿ | Oneindia Kannada

      ಬೆಂಗಳೂರು, ಏಪ್ರಿಲ್ 16: ರಾಜ್ಯದ ಕಣ್ಣು ನೆಟ್ಟಿರುವ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕಾಂಗ್ರೆಸ್‌ ಮುಖಂಡ ಡಿಕೆ ಶಿವಕುಮಾರ್ ಅವರಿಗೆ ಸ್ಫೋಟಕ ಸುದ್ದಿಯೊಂದು ಗೊತ್ತಿದೆಯಂತೆ.

      ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, 'ಮೂರು ತಿಂಗಳ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಂತಹಾ ಘಟನೆ ನಡೆದಿದೆ ಗೊತ್ತಾ? ಅದನ್ನು ಹೇಳಿದರೆ ನೀವೆಲ್ಲಾ (ಮಾಧ್ಯಮದವರು) ಶಾಕ್ ಆಗ್ತೀರಾ' ಎಂದು ಕುತೂಹಲ ಕೆರಳಿಸಿದರು.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಆದರೆ ಆ ಸ್ಫೋಟಕ ಸುದ್ದಿ ಏನು ಎಂಬುದನ್ನು ಹೇಳಲು ಡಿಕೆಶಿ ನಿರಾಕರಿಸಿದರು. ಬಿಜೆಪಿಯ ಶ್ರೀನಿವಾಸಪ್ರಸಾದ್ ಹಾಗೂ ಜೆಡಿಎಸ್‌ ನಡುವೆ ನಡೆದಿದೆ ಎನ್ನಲಾಗುತ್ತಿರುವ ಒಳ ಒಪ್ಪಂದದ ಬಗ್ಗೆ ಡಿಕೆ ಶಿವಕುಮಾರ್ ಅವರು ಸೂಚ್ಯವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

      DK Shivakumar will go to campaign for Siddaramaiah

      ಅದಕ್ಕೂ ಮುಂಚೆ ಮಾತನಾಡಿದ ಅವರು 'ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ 8 ಬಾರಿ ಸ್ಪರ್ಧಿಸಿದ್ದಾರೆ, 6 ಬಾರಿ ಗೆದ್ದಿದ್ದಾರೆ, 2 ಬಾರಿ ಸೋತಿದ್ದಾರೆ ಅಲ್ಲಿನ ಪರಿಸ್ಥಿತಿ ಅವರಿಗೆ ಚೆನ್ನಾಗಿ ಗೊತ್ತಿದೆ ಅವರು ಗೆದ್ದು ಬರುತ್ತಾರೆ' ಎಂದರು.

      ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿರ್ಣಾಯಕ ಎನಿಸಿಕೊಂಡಿರುವ ಒಕ್ಕಲಿಗ ಮತಗಳನ್ನು ಸೆಳೆಯಲು ಸಿದ್ದರಾಮಯ್ಯ ಅವರ ಪರ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಅವರು ತೆರಳಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ರಾಜ್ಯದ ಯಾವ ಕ್ಷೇತ್ರದಲ್ಲಿ ನನ್ನ ಅವಶ್ಯಕತೆ ಇರುತ್ತದೆಯೊ ಅಲ್ಲೆಲ್ಲಾ ಹೋಗಿ ಪ್ರಚಾರ ಮಾಡುತ್ತೇನೆ ಎಂದರು.

      ಡಿಕೆಶಿ ಅವರ ಮಾತಿನ ಪ್ರಕಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿರುವ ಸುದ್ದಿಗೆ ರೆಕ್ಕೆ ಪುಕ್ಕ ದೊರೆತಿದ್ದು, ಚಾಮುಂಡೇಶ್ವರಿ ಕಣ ಏನಾಗುತ್ತದೆ ಎಂಬ ಕುತೂಹಲ ಇನ್ನಷ್ಟು ಹೆಚ್ಚಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+