'ಸಿದ್ದರಾಮಯ್ಯ ಬಳಿಕ ಡಿಕೆ ಶಿವಕುಮಾರ್ ಸಿಎಂ'
ಬೆಂಗಳೂರು, ಜನವರಿ 13: ರಾಜ್ಯ ರಾಜಕಾರಣದಲ್ಲಿ ಸದ್ಯ ಮುಖ್ಯಮಂತ್ರಿ ಕುರ್ಚಿ ಗುದ್ದಾಟ ನಡೆಯುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಕಾಂಗ್ರೆಸ್ ನ ಹಲವು ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು, ಇದೀಗ ಮಾಗಡಿ ಕಾಂಗ್ರೆಸ್ ಶಾಸಕ ಎಚ್ ಸಿ ಬಾಲಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಮಾಧ್ಯಮಗಳಿಗೆ ಜೊತೆಗೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುವ ಕುರಿತು ಶಾಸಕರು ಚರ್ಚೆ ಮಾಡುತ್ತಿಲ್ಲ. ಸದ್ಯ ಈ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ಸಿದ್ದರಾಮಯ್ಯ ಬಳಿಕ ಉಪ ಮುಖ್ಯಮಂತ್ರಿ ಸಿಎಂ ಆಗಬೇಕಲ್ವ? ಎಂದು ತಿಳಿಸಿದರು.

ಇನ್ನೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇರೆ ಬೇರೆಯವರು ಆಕಾಂಕ್ಷಿಗಳು ಇದ್ದಾರೆ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒಕ್ಕಲಿಗರ ಸಭೆಯ ವಿಚಾರವಾಗಿದೆ. ಅವರವರ ಜಾತಿ ಅಭಿಮಾನದ ಮೇಲೆ ಹೇಳಿದ್ದಾರೆ. ಅಷ್ಟೇ ಹೈಕಮಾಣ್ ನಾಯಕರು ಅಂತಿಮವಾಗಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಗಡಿ ಶಾಸಕ ಹೆಚ್ಚಿಸಿ ಬಾಲಕೃಷ್ಣ ಹೇಳಿಕೆ ನೀಡಿದರು.
ರೈತರ ಸಮಸ್ಯೆಗೆ ಪರಿಹಾರ ಕೊಡಿ: ಡಿ ಕೆ ಸುರೇಶ್
ಈ ವೇಳೆ ಮಾಜಿ ಸಂಸದ ಡಿ ಕೆ ಸುರೇಶ್ ಅವರು ಮಾತನಾಡಿ, ರಾಜ್ಯ ಸರ್ಕಾರ ಈಗ ಕೇವಲ ಬಗರ್ ಹುಕುಂ ಸಾಗುವಳಿ ಜಮೀನಿಗೆ ಮಾತ್ರ ಮಾರ್ಗಸೂಚಿ ಹೊರಡಿಸಿದ್ದು, ಅದಕ್ಕೂ ಮುಂಚಿತವಾಗಿ ಆಗಿರುವ ಜಮೀನುಗಳಿಗೆ ಪರಿಹಾರ ಕಂಡುಹಿಡಿಯಬೇಕು. ಈ ವಿಚಾರವಾಗಿ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಮನವಿ ಮಾಡಿದರು.
ಐಎಲ್, ಆರ್ ಆರ್, ಹರಾಜು ಮೂಲಕ ಬಂದಿರುವ ಜಮೀನು, ಹಂಗಾಮಿ ಸಾಗುವಳಿ ಜಮೀನು ಪಡೆದವರು ಈಗಾಗಲೇ ಮೂರ್ನಾಲ್ಕು ಕೈ ಬದಲಾಗಿದೆ. 1964ರಿಂದ ಆರ್ ಟಿಸಿ ಮಾಡಿಕೊಂಡು ಬಂದವರನ್ನು ಪರಿಗಣಿಸಬೇಕು. ತಾಲೂಕು ಕಚೇರಿಗಳಲ್ಲೇ ಭೂಮಿಯ ದಾಖಲೆಗಳು ಇಲ್ಲವಾಗಿವೆ. ಇಡೀ ರಾಜ್ಯದಲ್ಲಿ ಇಂತಹ ಸಮಸ್ಯೆಗಳಿವೆ. ಹೀಗಾಗಿ ರೈತರ ಬಳಿ ಇರುವ ಮೂಲ ದಾಖಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಅವರಿಗೆ ಜಮೀನಿನ ದಾಖಲೆ ನೀಡಬೇಕು. ಈ ಪ್ರಕ್ರಿಯೆಯನ್ನು ಸರಳೀಕರಣ ಮಾಡಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ಕಿರಿಯ ಪ್ರಾಥಮಿಕ . ಪಾಠಶಾಲೆ ನಾನು ಆಟವಾಡಿ ಬೆಳೆದ ಆಟದ ಮೈದಾನ. ಇಲ್ಲಿ ಸರ್ಕಾರಿ ಬಸ್ ಗಳು ಬಂದರೆ ಮತ್ತೆ ವಾಪಸ್ ಹೋಗಲು ರಸ್ತೆಯಲ್ಲಿ ಬಸ್ ಹಿಂದಿರುಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಈ ಮೈದಾನದಲ್ಲೇ ಸರ್ಕಾರಿ ಬಸ್ ನಿಲ್ದಾಣ ಮಾಡಿಕೊಡಬೇಕು" ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಮಾಡಿದರು. ಈ ಮನವಿಗೆ ರಾಮಲಿಂಗಾ ರೆಡ್ಡಿ ಅವರು ಸಮ್ಮತಿ ಸೂಚಿಸಿದರು.












Click it and Unblock the Notifications