ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರ ಜನಸ್ಪಂದನ ಬದಲು 'ಜಲಸ್ಪಂದನ' ಮಾಡಲಿ: ಡಿಕೆಶಿ ಟೀಕೆ

|
Google Oneindia Kannada News

ಬೆಂಗಳೂರು ಸೆಪ್ಟಂಬರ್ 08: ರಾಜ್ಯ ಬಿಜೆಪಿ ಸರ್ಕಾರ ನಾಯಕರು ಜನಸ್ಪಂದನ ಸಮಾರಂಬ ಬದಲಾಗಿ ಮೊದಲು 'ಜಲಸ್ಪಂದನ' ಕೆಲಸ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರೆಯಿಸಿದ ಡಿ.ಕೆ. ಶಿವಕುಮಾರ್, ಬೆಂಗಳೂರು ಹಾಗೂ ರಾಜ್ಯದ ಇತರ ಭಾಗಗಳಲ್ಲಿ ನಿರಂತರ ಮಳೆ ಬೀಳುತ್ತಿದೆ. ಈ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ತಿಳಿದಿಲ್ಲ. ಈ ಮಧ್ಯೆ ಅವರು ಸರ್ಕಾರದ ಸಾಧನೆ ಹೇಳಲೆಂದು 'ಜನಸ್ಪಂದನ' ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದಾರೆ. ಅವರು ಜನಸ್ಪಂದನಕ್ಕೂ ಮೊದಲು 'ಜಲಸ್ಪಂದನ' ಕೆಲಸ ಮಾಡಲಿ. ಅಂದರೆ ಮಳೆಯಿಂದ ಹಾನಿಗೀಡಾದ ಜನರಿಗೆ ಸರ್ಕಾರ ಮೊದಲು ಸ್ಪಂದಿಸಲಿ ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು..

Recommended Video

ನೇರವಾಗಿ ಕಾಂಗ್ರೆಸ್ಸ್ ಮೇಲೆ ಆರೋಪ ಮಾಡಿದ ಬಸವರಾಜ ಬೊಮ್ಮಾಯಿ | Oneindia Kannada

 ಹೈದರಾಬಾದ್: 'ಹುಸೇನ್‌ ಸಾಗರ'ಕ್ಕೆ 'ವಿನಾಯಕ ಸಾಗರ' ಎಂದ ತೆಲಂಗಾಣ ಬಿಜೆಪಿ ಅಧ್ಯಕ್ಷ ಹೈದರಾಬಾದ್: 'ಹುಸೇನ್‌ ಸಾಗರ'ಕ್ಕೆ 'ವಿನಾಯಕ ಸಾಗರ' ಎಂದ ತೆಲಂಗಾಣ ಬಿಜೆಪಿ ಅಧ್ಯಕ್ಷ

ರಾಜ್ಯ ಸರ್ಕಾರ ಬೆಂಗಳೂರಿನ ಐಟಿ ಕಾರಿಡಾರ್ ನಲ್ಲಿ ಜಲಸಂಚಾರ ಕ್ಕಾಗಿ ಬೋಟ್ ಫ್ಯಾಕ್ಟರಿ ಆರಂಭಿಸುವುದು ಉತ್ತಮ. ಬೆಂಗಳೂರು ಹಾಗೂ ರಾಜ್ಯಾದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದಿದೆ. ಈ ಸರ್ಕಾರಕ್ಕೆ ಬೆಂಗಳೂರಿನ ಬೆಲೆ ತಿಳಿದಿಲ್ಲ. ಬೆಂಗಳೂರು ಎಷ್ಟು ಜನರಿಗೆ ಉದ್ಯೋಗ ನೀಡಿದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲ. ದೇಶಕ್ಕೆ ಸುಮಾರು 30 % ರಷ್ಟು ತೆರಿಗೆ ಆದಾಯ ಕೇಂದ್ರ ಸರ್ಕಾರಕ್ಕೆ ರಾಜ್ಯ ರಾಜಧಾನಿಯಿಂದಲೇ ಹೋಗುತ್ತದೆ ಎಂದು ಹೇಳಿದರು.

DK Shivakumar Suggests Govt To Do Jalaspandana instead of Janaspandana

ನಮಗೊಂದು ಅವಕಾಶ ಕೊಡಿ:ಡಿಕೆಶಿ

ನಾನು ಸಹ ಇದೇ ಬೆಂಗಳೂರು ನಿವಾಸಿಯಾಗಿದ್ದೇನೆ. ಕಾಂಗ್ರೆಸ್‌ ಒಂದು ಅವಕಾಶ ನೀಡಿ. ನಾವು ನಿಮ್ಮ ಗೌರವ ಕಾಪಾಡಿ ಉತ್ತಮ ಬದುಕು ನೀಡುವಂತಹ ಆಡಳಿತ ನೀಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಬೆಂಗಳೂರು ನಿವಾಸಿಗಳಲ್ಲಿ ಮನವಿ ಮಾಡಿದರು.

ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಜನ ಮನೆಯಿಂದ ಹೊರಬಾರದೆ ನರಳುತ್ತಿದ್ದಾರೆ. ಬಡಾವಣೆ, ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ. ಈ ಕಾರಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರು ನಗರದ ಮಾನ ಹರಾಜಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ಅವಕಾಶ ಕೊಟ್ಟು ನೋಡಿ, ನಾವು ಬೆಂಗಳೂರಿನ ಬ್ರ್ಯಾಂಡ್ ಅನ್ನು ಮರುಸ್ಥಾಪಿಸುತ್ತೇವೆ ಎಂದರು.

DK Shivakumar Suggests Govt To Do Jalaspandana instead of Janaspandana

ಇದಕ್ಕೂ ಮುನ್ನ ಬಿಬಿಎಂಪಿ ಚುನಾವಣೆ ಸಿದ್ಧತೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಬೆಂಗಳೂರಿನ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಿತು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಸೇರಿದಂತೆ ನಾಯಕರು ಪಾಲ್ಗೊಂಡಿದ್ದರು.

English summary
KPCC president DK Shivakumar has harped on BJP government's handling of flood situation in Bengaluru, and suggested the govt to do Jalaspandana, instead of doing Janaspandana campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X