ಸಿಪಿ ಯೋಗೀಶ್ವರ್ ಬಿಜೆಪಿಗೆ, ಡಿಕೆಶಿ ಹೇಳಿದ್ದೇನು?

Posted By:
Subscribe to Oneindia Kannada

ರಾಮನಗರ, ಏಪ್ರಿಲ್ 14 : 'ಸಿ.ಪಿ.ಯೋಗೀಶ್ವರ್ ಅವರು ವಿಚಾರವಂತರು, ಬುದ್ಧಿವಂತರು. ಅವರು ಬಿಜೆಪಿಯಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಅವರು ಮತ್ತೊಮ್ಮೆ ಆ ಪಕ್ಷಕ್ಕೆ ಹೋಗುವುದಿಲ್ಲ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ರಾಮನಗರದಲ್ಲಿ ಮಾತನಾಡಿದ ಸಚಿವರು ಯೋಗೀಶ್ವರ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದರು. 'ನಾವು ಹಳೆಯದನ್ನೆಲ್ಲಾ ಮೆರೆತು ಅಣ್ಣ-ತಮ್ಮಂದಿರಂತೆ ಒಂದಾಗಿದ್ದೇವೆ. ಅವರು ಈಗ ಪಕ್ಷ ಬಿಟ್ಟು ಹೋಗುವುದಿಲ್ಲ' ಎಂದು ತಿಳಿಸಿದರು. [ಮತ್ತೆ ಆಪರೇಷನ್ ಕಮಲ, ನಾಲ್ವರು ಶಾಸಕರು ಬಿಜೆಪಿಗೆ?]

ಗುರುವಾರ ಬೆಳಗ್ಗೆ ಮೂವರು ಜೆಡಿಎಸ್ ಮತ್ತು ಒಬ್ಬರು ಕಾಂಗ್ರೆಸ್ ಶಾಸಕರು ಕಮಲ ಪಕ್ಷ ಸೇರಲು ತಯಾರಿ ನಡೆಸಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭವಾಗಿದೆ ಎಂಬ ಸುದ್ದಿ ಹೊರಬಂದಿತ್ತು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. [ಸೈಕಲ್ ಪಂಕ್ಚರ್ ಮಾಡಿ 'ಕೈ' ಹಿಡಿದ ಯೋಗೀಶ್ವರ್]

ಅಂದಹಾಗೆ 2013ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ರಾಜ್ಯದ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದ ಸಿ.ಪಿ.ಯೋಗೀಶ್ವರ್ ಅವರು, 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸೈಕಲ್ ಪಂಕ್ಚರ್ ಮಾಡಿ ಕಾಂಗ್ರೆಸ್ ಪಕ್ಷ ಸೇರಿದ್ದರು.

ಆಪರೇಷನ್ ಕಮಲದ ಮೂಲಕ ಬಿಜೆಪಿಗೆ

ಆಪರೇಷನ್ ಕಮಲದ ಮೂಲಕ ಬಿಜೆಪಿಗೆ

ಆಪರೇಷನ್ ಕಮಲದ ಮೂಲಕ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಳ್ಳಿಹಾಕಿದ್ದಾರೆ. 2013ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಗೆಲುವು ಸಾಧಿಸಿದ್ದ ಯೋಗೀಶ್ವರ್ ಅವರು ನಂತರ ಕಾಂಗ್ರೆಸ್ ಸೇರಿದ್ದರು.

'ಬಿಜೆಪಿಯಲ್ಲಿದ್ದಾಗ ಸಾಕಷ್ಟು ನೋವು ಅನುಭವಿಸಿದ್ದಾರೆ'

'ಬಿಜೆಪಿಯಲ್ಲಿದ್ದಾಗ ಸಾಕಷ್ಟು ನೋವು ಅನುಭವಿಸಿದ್ದಾರೆ'

ರಾಮನಗರದಲ್ಲಿ ಗುರುವಾರ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, 'ಸಿ.ಪಿ.ಯೋಗೀಶ್ವರ್ ಅವರು ಹಿಂದೆ ಬಿಜೆಪಿಯಲ್ಲಿದ್ದಾಗ ಸಾಕಷ್ಟು ನೋವು, ಅವಮಾನ ಎದುರಿಸಿದ್ದಾರೆ. ಅವರು ಮತ್ತೊಮ್ಮೆ ಆ ಪಕ್ಷಕ್ಕೆ ಹೋಗಲಾರರು' ಎಂದು ಹೇಳಿದರು.

'ಅವರು ಬುದ್ಧಿವಂತರು'

'ಅವರು ಬುದ್ಧಿವಂತರು'

'ಸಿ.ಪಿ.ಯೋಗೀಶ್ವರ್ ಅವರು ದಡ್ಡರಲ್ಲ. ಅವರು ವಿಚಾರವಂತರು, ಬುದ್ಧಿವಂತರು. ಅವರು ಮತ್ತೊಮ್ಮೆ ಬಿಜೆಪಿ ಸೇರಲಾರರು. ಆಪರೇಷನ್ ಕಮಲದ ಮೂಲಕ ಅವರು ಬಿಜೆಪಿ ಸೇರುವ ವಿಚಾರ ಸುಳ್ಳು' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಆಪರೇಷನ್ ಕಮಲ ಮತ್ತೆ ಆರಂಭ

ಆಪರೇಷನ್ ಕಮಲ ಮತ್ತೆ ಆರಂಭ

ಗುರುವಾರ ಬೆಳಗ್ಗೆ ಮೂವರು ಜೆಡಿಎಸ್ ಮತ್ತು ಒಬ್ಬರು ಕಾಂಗ್ರೆಸ್ ಶಾಸಕರು ಕಮಲ ಪಕ್ಷ ಸೇರಲು ತಯಾರಿ ನಡೆಸಿದ್ದಾರೆ. ಮತ್ತೊಮ್ಮೆ ರಾಜ್ಯದಲ್ಲಿ ಆಪರೇಷನ್ ಕಮಲ ಆರಂಭವಾಗಿದೆ ಎಂಬ ಸುದ್ದಿ ಹೊರಬಂದಿತ್ತು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಸಿಪಿ ಯೋಗೀಶ್ವರ್ ಸ್ಪಷ್ಟನೆ

ಸಿಪಿ ಯೋಗೀಶ್ವರ್ ಸ್ಪಷ್ಟನೆ

'ನಾನು ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗಿಲ್ಲ. ಆಪರೇಷನ್ ಕಮಲದ ಸುದ್ದಿ ಏಕೆ ಹಬ್ಬಿತೋ ಗೊತ್ತಿಲ್ಲ. ಇದ್ದರೆ ಕಾಂಗ್ರೆಸ್ ಪಕ್ಷದಲ್ಲಿರುತ್ತೇನೆ. ಇಲ್ಲವಾದಲ್ಲಿ ಚಿತ್ರರಂಗದಲ್ಲಿ ಬ್ಯುಸಿಯಾಗಿರುತ್ತೇನೆ. ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ' ಎಂದು ಸಿ.ಪಿ.ಯೋಗೀಶ್ವರ್ ಸ್ಪಷ್ಪನೆ ಕೊಟ್ಟಿದ್ದಾರೆ.

ಬಿಜೆಪಿ ಸೇರುವ ಉಳಿದ ಶಾಸಕರು

ಬಿಜೆಪಿ ಸೇರುವ ಉಳಿದ ಶಾಸಕರು

ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಮತ್ತು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರು ಬಿಜೆಪಿಗೆ ಬರಲಿದ್ದಾರೆ ಎಂಬುದು ಸದ್ಯದ ಸುದ್ದಿ. [ಚಿತ್ರ : ಎಚ್.ಸಿ.ಬಾಲಕೃಷ್ಣ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Energy minister D.K.Shivakumar ruled out the report of Channapatna Congress MLA C.P.Yogeshwar joining BJP by operation kamala.
Please Wait while comments are loading...